ನೂತನವಾಗಿ ಆಯ್ಕೆಯಾದ ಬಿಜೆಪಿಯ ಸಂಸದರುಗಳಿಗೆ...

Upayuktha
0

ಹಾರ್ದಿಕ‌ ಶುಭಾಶಯಗಳು ಅಭಿನಂದನೆಗಳು.




ಕೆಲವು ಆತ್ಮೀಯ ಸಲಹೆಗಳು ದಯವಿಟ್ಟು ಅಪಾರ್ಥ ಭಾವಿಸಬೇಡಿ.

ಮೊದಲಾಗಿ ಮೋದಿ ಮೇನಿಯಾದಿಂದ ಹೊರಬನ್ನಿ. ಮೋದಿ ಇಲ್ಲದಿದ್ರೆ ನೀವು ಶೂನ್ಯ ಅನ್ನೋ ಸ್ಥಿತಿ ಬರಬಾರದು. ಸ್ವಯಂ ವರ್ಚಸ್ಸನ್ನು ರೂಪಿಸಿಕೊಳ್ಳಿ.


ಮಾತೇ ಕೆಲಸ ಆಗೋದು ಬೇಡ; ಕೆಲಸ ಮಾತಾಗಲಿ.


ಜನರಿಂದ ಕಾರ್ಯಕರ್ತರಿಂದ ದೂರ ಆಗ್ಲೇ ಬೇಡಿ. ಫೋನ್ ಕರೆಗಳನ್ನು ಅಗತ್ಯ ಸ್ವೀಕರಿಸಿ.‌ ಮಿಸ್ಡ್ ಕಾಲ್ ಇದ್ರೆ ಅಥವಾ ನೀವು ಬ್ಯುಸಿ ಇದ್ರೆ ಸಮಯಾನುಕೂಲ ಇರುವಾಗ ಅಗತ್ಯ ಮರಳಿ ಕರೆ ಮಾಡಿ ಜನರ ಸಮಸ್ಯೆ ಆಲಿಸಿ.


ನಿಮ್ಮ ಆಪ್ತ ಸಹಾಯಕರು ನಿಮ್ಮ ಕ್ಚೇತ್ದ ಜನರು ಮತ್ತು ಕಾರ್ಯಕರ್ತರನ್ನು ಯಾಮಾರಿಸದಂತೆ ನೋಡಿಕೊಳ್ಳಿ.


ತಮಗೆ ಬರುವ ಅನುದಾನಗಳ ಸಮರ್ಥ ಮತ್ತು ಒಳ್ಳೇ ರೀತಿಯಲ್ಲಿ ಕೇತ್ರದ ಒಳಿತಿಗೆ ಬಳಸಿಕೊಳ್ಳಿ. ಹೆಚ್ಚುವರಿಯಾಗಿ ಕ್ಷೇತ್ರದ ಆದ್ಯತೆಗಳಿಗೆ ಕೇಂದ್ರದ ನೆರವು ತರಲು ಪ್ರಯತ್ನಿಸಿ.


ನಿಯಮಿತವಾಗಿ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ಜನಸಂಪರ್ಕ ಸಭೆ, ಸಾರ್ವಜನಿಕ ಭೇಟಿಗಳನ್ನು ನಡೆಸಿ.


ಕೇವಲ ಸೋಶಿಯಲ್ ಮೀಡಿಯಾಗಳ ನಾಯಕರಾಗಬೇಡಿ. ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದೀತು. ಆದರೆ ತಾವು ಮಾಡುವ ಒಳ್ಳೇ ಕೆಲಸಗಳನ್ನು ಪ್ರಚಾರ ಮಾಡಲು ಜನಸಂಪರ್ಕಕ್ಕಾಗಿ ಶೋಶಿಯಲ್ ಮೀಡಿಯಾಗಳನ್ನು ಅವಶ್ಯ ಬಳಸಿಕೊಳ್ಳಿ.


ಸಂಸತ್ ಅಧಿವೇಶನಗಳನ್ನು ತಪ್ಪಿಸಿಕೊಳ್ಬೇಡಿ. ಅಲ್ಲಿ ಕ್ಷೇತ್ರದ ಪ್ರಗತಿಗೆ ಸಂಬಂಧಿಸಿದ ಮತ್ತು ರಾಜ್ಯದ, ಹಿಂದು ಸಮಾಜದ ದೇಶದ ಒಳಿತಿನ ವಿಚಾರ ಬಂದಾಗ ಸಕ್ರಿಯವಾಗಿ ಭಾಗವಹಿಸಿ ಸಂದರ್ಭಾನುಸಾರ ಧ್ವನಿ ಎತ್ತಲು ಪ್ರಯತ್ನಿಸಿ.‌


ಜನರಿಗೆ ಅನವಶ್ಯಕ ಆಶ್ವಾಸನೆಗಳನ್ನು ಕೊಡ್ಬೇಡಿ. ಅಂಗೈಯಲ್ಲಿ ಆಕಾಶ ತೋರಿಸಿ ಇಕ್ಕಟ್ಟಿಗೆ ಸಿಲುಕಬೇಡಿ. ಎಷ್ಡು ಸಾಧ್ಯವೋ ಅದನ್ನು ಮಾತ್ರ ಭರವಸೆ ಕೊಡಿ.


ಸಂಘ ಮತ್ತು ಪಕ್ಷದ ಸ್ಥಳೀಯ ಘಟಕಗಳೊಂದಿಗೂ ನಿರಂತರ ಸಂಪರ್ಕ ಸಂಬಂಧ ಇರಲಿ. ಸಂಘದ ಮಾರ್ಗದರ್ಶನ ಆಶೀರ್ವಾದ ಸದಾ ಪಡೆಯಿರಿ. ಅದು ಶಕ್ತಿವರ್ಧಕವಾಗ್ತದೆ.‌ ಹೆಚ್ಚು ಕೆಲಸ ಮಾಡಲು ಅನುಕೂಲ ಆಗ್ತದೆ.


ಉದಾಸೀನ ಯಾವತ್ತೂ ಮಾಡ್ಬೇಡಿ.‌ ಯಾವುದೇ ಕಾರ್ಯಕ್ರಮಗಳಿಗೆ ಬರ್ತೇವೆ ಅಂತ ಒಪ್ಪಿಕೊಂಡು ತುರ್ತು ಸಂದರ್ಭಗಳನ್ನು ಹೊರತು ಪಡಿಸಿ ಗೈರಾಗಬೇಡಿ. ಕಾರ್ಯಕರ್ತರು ಇದರಿಂದ ಪೇಚಾಡುವ ಪರಿಸ್ಥಿತಿ ಆಗ್ತದೆ.


ದೇಶದ ಸಾರ್ವಭೌಮತೆ ಅಖಂಡತೆಗೆ ಚ್ಯುತಿ ಬರುವ ಹಿಂದುಸಮಾಜದ ಒಳಿತಿಗೆ ಸವಾಲಾಗುವ ಕೆಲಸಗಳು ಹಾಗೂ ಸಮಾಜದ ಶಾಂತಿ ನೆಮ್ಮದಿಗೆ ಭಂಗ ತರುವ ದುಷ್ಟ ಪ್ರವೃತ್ತಿಗಳು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಅಥವಾ ಎಲ್ಲೇ ನಡೆದರೂ ಅದರ ವಿರುದ್ಧ ಧ್ವನಿ ಎತ್ತಿ, ಕಾರ್ಯಶೀಲರಾಗಿ.‌ ಗೋ ಸಂರಕ್ಷಣೆಗೆ ಸಾಧ್ಯವಾದಷ್ಟು ಸಹಕರಿಸಿ.


ಆರೋಗ್ಯ ಕಾಪಾಡಿಕೊಳ್ಳಿ. ಮಾನಸಿಕ ಸ್ವಾಸ್ಥ್ಯಕ್ಕೂ ಹಾಗೆಯೇ ಕೌಟುಂಬಿಕ ಜೀವನದ ಒಳಿತಿಗೂ‌ ಗಮನಕೊಡಿ, ಒಂದಷ್ಟು ಸಮಯ ಅದಕ್ಕೂ ಮೀಸಲಿಡಿ. 


ಮುಂದಿನ‌ ಚುನಾವಣೆ ವೇಳೆಗೆ ಕ್ಷೇತ್ರದ ಜನರು ಕಾರ್ಯಕರ್ತರು ಗೋ ಬ್ಯಾಕ್ ಹೇಳುವ ಪರಿಸ್ಥಿತಿ ಬಾರದೇ ಕಮ್ ಬ್ಯಾಕ್ ಎಂದು ಒತ್ತಾಯಿಸಿ ಜನರೇ ನಿಮ್ಮನ್ನು ಗೆಲ್ಲಿಸುವ ರೀತಿಯಲ್ಲಿ ಕೆಲಸ ಮಾಡಿ.‌ ಮೋದಿ ಮೇನಿಯಾಕ್ಕೆ ಅಂಟಿಕೊಂಡಿದ್ರೆ ಬಹಳ ಕಷ್ಟ ಆಗ್ತದೆ.‌ ಸ್ವಯಂ ವರ್ಚಸ್ಸು ರೂಪಿಸಿಕೊಳ್ಳಿ. ಮುಂದೆ ತಮ್ಮ ನಂತರ ಯಾರೇ ಪಕ್ಷದಿಂದ ಸ್ಪರ್ಧಿಸಿದರೂ ಸುಲಭವಾಗಿ ಗೆಲ್ಲುವಂತಿರಬೇಕು.‌ 


ನಿಮ್ಮ ಅಧಿಕಾರಾವಧಿಯನ್ನು ಕ್ಷೇತ್ರದ ಜನ ಒಳ್ಳೆಯ ಕಾರಣಗಳಿಗಾಗಿ ಕ್ಷೇತ್ರದ ಜನ ಬಹಳ ಕಾಲ ಸ್ಮರಿಸಿಕೊಳ್ಳುವಂತಾಗಲಿ. ಅನ್ಯಥಾ ಭಾವಿಸಬೇಡಿ. ಒಳಿತಾಗಲಿ. 

ಜೈಭಾರತ್ 


- ಜಿ ವಾಸುದೇವ ಭಟ್ ಪೆರಂಪಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top