ಬಂಟ್ವಾಳ: ಪರಿಸರ ನಿತ್ಯನೂತನವಾಗಿದ್ದು ಪ್ರಕೃತಿಯೊಂದಿಗಿನ ಸಂವೇದನೆ ಕವಿಗಳಿಗೆ ಕವನ ರಚನೆಗೆ ಸ್ಪೂರ್ತಿಯಾಗಬೇಕು ಎಂದು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಚಾರ್ಯ ಗಣರಾಜ ಕುಂಬ್ಳೆ ಹೇಳಿದರು.
ಅವರು ಕಲ್ಲಡ್ಕ ಶ್ರೀ ರಾಮ ಪದವಿಪೂರ್ವ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಸಮಿತಿಯ ಪದಗ್ರಹಣ ಸಮಾರಂಭದಲ್ಲಿ ಸಾಹಿತ್ಯ ಮತ್ತು ಪರಿಸರ ಕುರಿತು ಉಪನ್ಯಾಸ ನೀಡಿದರು.
ಕಲ್ಲಡ್ಕ ಪ.ಪೂ. ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ನಾಗೇಶ ಕಲ್ಲಡ್ಕ,ಪಿಂಗಾರ ಪತ್ರಿಕೆ ಸಂಪಾಕ ರೇಮಂಡ್ ತಾಕೋಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಅಭಾಸಾಪ ಮಾಜಿ ಅಧ್ಯಕ್ಷ ಜಯಾನಂದ ಪೆರಾಜೆ, ನಿಕಟಪೂರ್ವಅಧ್ಯಕ ಡಾ.ಸುರೇಶ ನೆಗಳಗುಳಿ ಉಪಸ್ಥಿತರಿದ್ದರು.
ಅಭಾಸಾಪ ಮಂಗಳೂರು ವಿಭಾಗ ಸಂಯೋಜಕ ಸುಂದರ ಇಳಂತಿಲ ಜವಾಬ್ದಾರಿ ಘೋಷಣೆ ಮಾಡಿದರು. ಅವರು ನೂತನ ಪದಾಧಿಕಾರಿಗಳಿಗೆ ಅವರ ಕರ್ತವ್ಯದ ಪಕ್ಷಿನೋಟ ಬೀರುತ್ತಾ ದೇಶಾದ್ಯಂತ ಏಕ ರೀತಿಯ ಸಾಹಿತ್ಯ ಸಂಘಟನೆ ಇದಾಗಿದ್ದು ಯಾವುದೇ ಸರಕಾರೀ ಅನುದಾನ ಹೊಂದಿಲ್ಲ. ಎಲ್ಲರೂ ಭಾರತೀಯತೆಯನ್ನು ಉಳಿಸಿ ಬೆಳೆಸಲು ಈ ಸಂಘಟನೆ ಮಹತ್ವ ಪಾತ್ರ ವಹಿಸುತ್ತದೆ. ಈಗ್ಗೆ ಎರಡು ವರ್ಷಗಳಿಂದ ಅಧ್ಯಕ್ಷರಾಗಿದ್ದ ಡಾ ಸುರೇಶ ನೆಗಳಗುಳಿಯವರನ್ನು ಜಿಲ್ಲಾ ಸಮಿತಿಗೆ ಸೇರಿಸುವುದರೊಂದಿಗೆ ತಾಲೂಕು ಸಮಿತಿಗೆ ಪೂರಕವಾಗಿರುವ ಆಶಯ ವ್ಯಕ್ತ ಪಡಿಸಿದರು. ನೂತನ ಸಮಿತಿಗೆ ಶುಭಕೋರಿ ಉತ್ತಮ ಕಾರ್ಯಕ್ರಮ ನಡೆಸಲು ಕರೆ ನೀಡಿದರು.
ಅಧ್ಯಕ್ಷ ಪ್ರೊ. ರಾಜಮಣಿ ರಾಮಕುಂಜ, ಉಪಾಧ್ಯಕ್ಷರಾಗಿ ಈಶ್ವರ ಪ್ರಸಾದ ಕನ್ಯಾನ, ಕಾರ್ಯದರ್ಶಿಯಾಗಿ ಮಧುರ ಕಡ್ಯ ಕಲ್ಲಡ್ಕ, ಕೋಶಾಧಿಕಾರಿಯಾಗಿ ಸೀತಾ ಲಕ್ಷ್ಮೀ ವರ್ಮ ವಿಟ್ಲ, ಮಾಧ್ಯಮ ಪ್ರಮುಖರಾಗಿ ಚಿನ್ನಪ್ಪ ವೀರಕಂಬ ಜವಾಬ್ದಾರಿ ಸ್ವೀಕರಿಸಿದರು. ವಿವಿಧ ಪದಾಧಿಕಾರಿಗಳಾಗಿ ರಮೇಶ ಬಾಯಾರ್, ಪಂಕಜಾ ಮುಡಿಪು, ಜಯಲಕ್ಷ್ಮೀ ಶೆಣೈ ಬಂಟ್ವಾಳ,ಜಯರಾಮ ಪಡ್ರೆ, ಹೇಮಾವತಿ ಸಾಲೆತ್ತೂರು, ವಿಶ್ವನಾಥ ಮಿತ್ತೂರು, ಅಶೋಕ ಕಲ್ಯಾಟೆ, ವಿನುತಾ ಮಾತಾಜಿ, ಪ್ರಶಾಂತ ಕಡ್ಯ ರನ್ನು ನೇಮಿಸಲಾಯಿತು.
ಆರಂಭದಲ್ಲಿ ಸೀತಾಲಕ್ಷ್ಮಿಯವರ ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳ ಗಾಯನ, ಬಳಿಕ ರಾಜಮಣಿ ರಾಮಕುಂಜ ಅಧ್ಯಕ್ಷತೆಯಲ್ಲಿ ಪದವಿ ಪೂರ್ವ ವಿದ್ಯಾರ್ಥಿಗಳಿಂದ ಸ್ವರಚಿತ ಪರಿಸರ ಜಾಗೃತಿ ಕವನ ವಾಚನ, ಆನಂತರ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ಹಿರಿಯ ಕವಿಗಳ ಕವನ ವಾಚನ ಕಾರ್ಯಕ್ರಮ ನೆರವೇರಿತು.
ಋತ್ವಿಕಾ ಮೊಳೆಯಾರ, ಸೋನಿತಾ ನೇರಳೆಕಟ್ಡೆ, ಕಾವ್ಯ ಕಲ್ಲಡ್ಕ, ಜಯರಾಮ ಪಡ್ರೆ, ಪಂಕಜಾ ಮುಡಿಪು, ಜಯಶ್ರೀ ಶೆಣೈ, ಹೇಮಾವತಿ ಸಾಲೆತ್ತೂರು, ಶಾಂತಾ ಪುತ್ತೂರು, ರೇಮಂಡ್ ಡಿ ಕೂನಾ ತಾಕೊಡೆ, ಡಾ ಸುರೇಶ ನೆಗಳಗುಳಿಯವರು ಸ್ವರಚಿತ ಪರಿಸರ ಸಂಬಂಧೀ ಕವನ ವಾಚಿಸಿದರು.
ಕಾರ್ಯಕ್ರಮ ಕುಮಾರಿ ದಾತ್ರಿಯವರ ಸರಸ್ವತಿ ಸ್ತುತಿಯೊಂದಿಗೆ ಆರಂಭಗೊಂಡಿತು. ಕಾರ್ಯಕ್ರಮವನ್ನು ಅಪೂರ್ವ ಕಾರಂತರವರು ನಿರೂಪಿಸಿದರು. ಮಧುರ ಕಡ್ಯ ಅವರ ಧನ್ಯವಾದದೊ೦ದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

