'ಸನ್ಯಾಸಿ' ಶಬ್ದ ಬಳಸಿ, ಕಳೆದ ಐದಾರು ವರ್ಷಗಳಲ್ಲಿ ರಾಜಕಾರಣಿಗಳು ಕೊಟ್ಟ ಕೆಲವು ಹೇಳಿಕೆಗಳನ್ನು ನುಡಿ ಫಲಪುಷ್ಪಗಳ ರೂಪದಲ್ಲಿ ಮೊಬೈಲ್ ಹರಿವಾಣದಲ್ಲಿರಿಸಿ, ಓದುಗ 'ದೊರೆ'ಗಳ (ಸನ್ಯಾಸಿ ಅಲ್ಲ!!) ಮುಂದಿಡುವುದಾದರೆ...:
"ನಾನೇನು ಸನ್ಯಾಸಿಯಲ್ಲ, ಸಿಎಂ ಆಗಲು ಪ್ರಯತ್ನಿಸುತ್ತಿದ್ದೇನೆ"
ಡಿ.ಕೆ.ಶಿವಕುಮಾರ್"
14.05.2019
"ಸಿಎಂ ಆಯ್ಕೆ ವಿಚಾರ; ನಾನೇನು ರಾಜಕೀಯ ಸನ್ಯಾಸಿಯಲ್ಲ, ಖಾವಿ ಬಟ್ಟೆಯನ್ನೂ ತೊಟ್ಟಿಲ್ಲ"
ಡಿ.ಕೆ ಶಿವಕುಮಾರ್
19.07.2022
"ನಾನೇನು ಸನ್ಯಾಸಿಯಲ್ಲ ,ಶಾಸಕರು ಹೇಳಿದ್ರೆ ಸಿಎಂ ಆಗ್ತೀನಿ!"
ಡಾ.ಪರಮೇಶ್ವರ್
03.02.2018
"ನಾನೇನು ಸನ್ಯಾಸಿಯಲ್ಲ" ಪರೋಕ್ಷವಾಗಿ ಅಧಿಕಾರದ ಆಕಾಂಕ್ಷೆ ಹೊರಹಾಕಿದ ಸಿಟಿ ರವಿ
11.11.2023
"ನಾನೇನು ಸನ್ಯಾಸಿಯಲ್ಲ" ಕುಮಾರಸ್ವಾಮಿ ಮಾರ್ಮಿಕ ಹೇಳಿಕೆ
12.02.2019
"ನಾನೂ ಕೂಡ ಆಕಾಂಕ್ಷಿ, ನಾನೇನು ಸನ್ಯಾಸಿಯಲ್ಲ"
ಶಾಸಕ ದೊಡ್ಡನಗೌಡ ಪಾಟಿಲ್
"ನಾನೇನು ಸನ್ಯಾಸಿಯಲ್ಲ, ಅವಕಾಶ ಕೇಳಿದ್ದೇನೆ, ಕೊಟ್ಟರೆ ನಿಭಾಯಿಸುತ್ತೇನೆ"
ರೇಣುಕಾಚಾರ್ಯ
05.04.2022
"ನಾನು ಸನ್ಯಾಸಿಯಲ್ಲ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ "
ವಿ ಸೋಮಣ್ಣ ಸ್ಪಷ್ಟನೆ
25.06.2023
"ನಾನೇನು ಸನ್ಯಾಸಿಯಲ್ಲ, ನನಗೂ ಸಚಿವ ಸ್ಥಾನದ ಆಸೆ ಇದೆ" ಇಂಗಿತ ವ್ಯಕ್ತಪಡಿಸಿದ ಶಾಸಕ ಸಿ.ಎಸ್.ಪುಟ್ಟರಾಜು
26.05.2018
"ನಾನೇನು ಸನ್ಯಾಸಿಯಲ್ಲ. ನಾನೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ಆಶಾವಾದಿಯಾಗಿದ್ದೇನೆ" ಎಂದು ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ
20.12.2019
"ಸಚಿವ ಸ್ಥಾನ ಬೇಡ ಎನ್ನಲು ನಾನು ಸನ್ಯಾಸಿಯಲ್ಲ"
ಶಿವರಾಮ ಹೆಬ್ಬಾರ
27.07.2021
"ನಾನೇನು ಸನ್ಯಾಸಿ ಅಲ್ಲ, ಸಿಎಂ ಆಗುವ ಆಸೆ ಇದೆ ಆದರೆ ನಾಳೆಯೇ ಆಗಿಬಿಡುತ್ತೇನೆ ಎಂದು ಹೇಳಿಲ್ಲ"
ಸಿದ್ದರಾಮಯ್ಯ
20.04.2019
"ನಾನು ಸನ್ಯಾಸಿಯಲ್ಲ" ಅಂತ ಗೂಗಲ್‌ನಲ್ಲಿ ಸರ್ಚ್ ಕೊಟ್ಟರೆ, ಅವತ್ತವತ್ತಿನ ಪತ್ರಿಕೆಗಳಲ್ಲಿ ವರದಿಯಾದ ಇಂತಹ ನೂರಾರು ಹೇಳಿಕೆಗಳು ಸಿಗುತ್ತವೆ!!! ಮೇಲಿರುವುದು ಸನ್ಯಾಸಿಗಳಲ್ಲದವರ ಸ್ಯಾಂಪಲ್‌ಗಳು!!
"ನಾವು ಸನ್ಯಾಸಿಗಳೆ, ಆದರೆ ನಾವು ರಾಜಕಾರಣವನ್ನು ಬಿಟ್ಟ ಸನ್ಯಾಸಿಗಳಲ್ಲ, ಜಾತಿಯನ್ನು ಬಿಟ್ಟ ಸನ್ಯಾಸಿಗಳಲ್ಲ, ಸಂಪತ್ತನ್ನು ತ್ಯೆಜಿಸಿದ ಸನ್ಯಾಸಿಗಳಲ್ಲ. ನಮ್ಮದು ಯಾವುದನ್ನೂ ತ್ಯೆಜಿಸದ ಸನ್ಯಾಸ" ಎಂದು ಬಹಿರಂಗದಲ್ಲಿ ಶುದ್ದವಾಗಿ ಹೇಳದೇ ಇದ್ದರೂ, ಅಂತರಂಗದಲ್ಲಿ ಶುದ್ದ ರಾಜಸ, ತಾಮಸ ಸಂಪತ್ತು ಸಹಿತ ಸನ್ಯಾಸಿಗಳು!!?
ಸನ್ಯಾಸಿಗಳೂ ರಾಜಕಾರಣಿಗಳಾಗುತ್ತಿರುವ ಕಾಲ ಇದು. ಸನ್ಯಾಸಿಗಳು ರಾಜಕಾರಣದ ಹುದ್ದೆಗಳನ್ನು ನಿರ್ಧರಿಸಲು 'ಜಾತಿ' ದಾಳಗಳನ್ನು 'ಉರುಳಿಸುವುದಕ್ಕೆ' ಮಹಾಭಾರತದ 'ಶಕುನಿಯ' ರೀತಿಯಲ್ಲಿ 'ಕೈ'ಯಲ್ಲಿ ಪಗಡೆ ಹಿಡಿದು ನಿಂತಿದ್ದಾರೆ!!!'. ಜಾತಿ 'ದಂಡಿ' ಸನ್ಯಾಸಿಗಳು ವಿಧಾನಸೌದದ ಕೊಠಡಿಗಳನ್ನು ಚಾತರ್ಮಾಸ ಕೇಂದ್ರವಾಗಿಸಿಕೊಳಲು 'ಕೈ' ಹಾಕಿದ್ದಾರೆ!!? ಆಧಿಕಾರದ ಹೈ ಕಮಾಂಡ್ ಹುದ್ದೆಯನ್ನು ಜಾತಿ ದರ್ಬಾಸನ ಮಾಡಿಕೊಳ್ಳಲು ಪ್ರಯತ್ನ ನೆಡೆದಂತಿದೆ!!? ಶಾಸಕರ ಭವನದಲ್ಲಿ ಜಾತಿ ಮಠಗಳ 'ಪೀಠಾಧಿಪತಿ'ಗಳ ಶಾಖಾ ಮಠಗಳಾಗಬಹುದು!!?
ಮಠಾಧಿಪತಿಗಳು ರಾಜಕಾರಣದ ರಿಮೋಟ್ ಬಟನ್‌ಗಳನ್ನು ಇತ್ತುವ ಕಾಲದಲ್ಲಿ, ರಾಜಕಾರಣದಿಂದ ಅಧಿಕಾರ ತ್ಯಜಿಸಿ, ನಿವೃತ್ತಿ ಹೊಂದಿ "ನಾನು ಸನ್ಯಾಸಿ" ಅಂತ ಮಠದ ಕಡೆಗೆ ಹೊರಟವರ ಒಂದು ಗಂಭೀರ ಸುದ್ದಿಯೂ ಎರಡು ವರ್ಷಗಳ ಹಿಂದೆ ಬ್ರೇಕಿಂಗ್ ನ್ಯೂಸ್ ಆಗಿತ್ತು!!
ಮೇ 4, 2022
ಮಾಜಿ ಸಚಿವ ಬಿ.ಜೆ. ಪುಟ್ಟಸ್ವಾಮಿ ರಾಜಕೀಯದಿಂದ ನಿವೃತ್ತಿಯಾಗಿ ಸನ್ಯಾಸ ದೀಕ್ಷೆ ಸ್ವೀಕರಿಸಲು ನಿರ್ಧರಿಸಿದ್ದಾರೆ. ''50 ವರ್ಷಗಳ ರಾಜಕೀಯ ಜೀವನದಿಂದ ನಿವೃತ್ತಿ ಪಡೆದು ಸನ್ಯಾಸ ಸ್ವೀಕರಿಸುತ್ತಿದ್ದೇನೆ. ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಮೊದಲ ಪೀಠಾಧಿಪತಿಯಾಗಿ ಮೇ 6ರಂದು ದೀಕ್ಷೆ ಪಡೆಯುತ್ತಿದ್ದೇನೆ,'' ಎಂದು ಪುಟ್ಟಸ್ವಾಮಿ ಹೇಳಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅಪ್ತರಾಗಿದ್ದ ಪುಟ್ಟಸ್ವಾಮಿ ಅವರು ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದರು. ಬಳಿಕ ಸಹಕಾರ ಸಚಿವರಾಗಿ ಅಧಿಕಾರ ನಡೆಸಿದರು. ಬಿಜೆಪಿ ಸರ್ಕಾರದ ಈ ಅವಧಿಯಲ್ಲಿ ಅವರನ್ನು ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು. 2022ರ ಏ. 30 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಕ್ಷಮಿಸಿ, "ನಾನು ಜಾತಿ ಸನ್ಯಾಸಿಯೂ ಅಲ್ಲ, ಜಾತ್ಯಾತೀತ ರಾಜಕಾರಣಿಯೂ ಅಲ್ಲ. ರಾಜಕೀಯದ ಸನ್ಯಾಸ, ಸನ್ಯಾಸಿಗಳ ರಾಜಕೀಯ ಸುದ್ದಿಗಳನ್ನು ಪಗಡೆ ಆಟದಲ್ಲಿ ಉರುಳಿದ ಪಗಡೆಯ ಸಂಖ್ಯೆಯನ್ನು ಕುತೂಹಲದಿಂದ ನೋಡುವಂತೆ, ಗಮ್ಮತ್ತಿನ ಮನರಂಜನೆಗಾಗಿ ಗಮನಿಸುವವನು!! ಮತ್ತು ರಾಜಕೀಯದಲ್ಲಿನ ಚಲ್ಲುತನವನ್ನು ಬಿಡದೆ ನಿತ್ಯ ಆನಂದದಿಂದ ಸ್ವೀಕರಿಸುವವನು!!"
ಅಂದ ಹಾಗೆ ಮಠ ಚಾಪ್ಟರ್ ಟು ಯಾವಾಗ ಬಿಡುಗಡೆಯಂತೆ!!? ಅದರ ಹೀರೋ ಯಾವ ಜಾತಿಯಂತೆ? ಹೀರೋಯಿನ್ ಜಾತಿ ಯಾವುದು?!!
ಇನ್ನು ಮುಂದೆ ನಿರ್ಮಾಪಕರು ಯಾರ್ಯಾರನ್ನೋ ಹಾಕಿಕೊಂಡು ಸಿನಿಮಾ ಮಾಡುವ ಹಾಗಿಲ್ಲ!! ಮಂತ್ರಿ ಮಂಡಲ ರಚನೆ ಮಾಡುವಾಗ ಜಾತಿ ಮಠಾಧೀಶರ ಮಾತಿಗೆ ಮನಣೆ ಕೊಡುವಂತೆ, ಚಿತ್ರ ತಂಡ ರಚನೆಗೂ ಜಾತಿ ಮಠಾಧೀಶರ ಹೈ ಕಮಾಂಡ್ ನಿರ್ಣಯ ಬೇಕು.
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ