ಪುತ್ತೂರು: ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಪಾದೆ, ನರಿಮೊಗರು ಇದರ ಆಶ್ರಯದಲ್ಲಿ ಹಾಗೂ ವೈದ್ಯರತ್ನಮ್ ಔಷಧಶಾಲಾ ಪ್ರೈವೆಟ್ ಲಿಮಿಟೆಡ್ ಇದರ ಸಹಯೋಗದಲ್ಲಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಪ್ರೊಫೆಸರ್ ಹಾಗೂ ಆಸ್ಪತ್ರೆಯ ಆಡಳಿತ ನಿರ್ದೇಶಕ ಆಗಿರುವ ಖ್ಯಾತ ಆಯುರ್ವೇದ ತಜ್ಞವೈದ್ಯ, ಆಯುರ್ವೇದ ಧನ್ವಂತರಿ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ .B.A.M.S., M.S.(Ayu) ಇವರಿಂದ, ಉಚಿತ ಆಯುರ್ವೇದೀಯ ಅರೋಗ್ಯ ತಪಾಸಣಾ ಶಿಬಿರವು ಜುಲೈ 11ರಂದು ಗುರುವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1.30 ರವರೆಗೆ, ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ಗ್ರಾಮ ಪಂಚಾಯತ್ ಸಮೀಪ, ನರಿಮೊಗರು ಇಲ್ಲಿ ಜರುಗಲಿರುವುದು.
ಸಕ್ಕರೆ ಪರೀಕ್ಷೆ, ರಕ್ತದೊತ್ತಡ ಪರೀಕ್ಷೆಗಳನ್ನು ನಡೆಸುವುದಲ್ಲದೆ ಆಯ್ದ ಔಷಧಿಗಳನ್ನು ಕೂಡಾ ಉಚಿತವಾಗಿ ನೀಡಲಾಗುವುದು. ದೀಪ ಪ್ರಜ್ವಲನ ಮತ್ತು ಉದ್ಘಾಟನೆಯನ್ನು ಡಾ. ಸೀತಾರಾಮ ಭಟ್ ಕಲ್ಲಮ (ವೈದ್ಯರು ಹಾಗೂ ಆಡಳಿತ ವ್ಯವಸ್ಥಾಪಕರು, ಕಲ್ಲಮ ರಾಘವೇಂದ್ರ ಮಠ) ಇವರು ನೆರವೇರಿಸಲಿರುವರು.
ವಿಶೇಷ ಆಹ್ವಾನಿತರಾಗಿ ಶ್ರೀಮತಿ ಹರಿಣಿ (ಅಧ್ಯಕ್ಷರು, ನರಿಮೊಗರು ಗ್ರಾಮಪಂಚಾಯತ್), ಚಂದ್ರಶೇಖರ್ ಸರ್ವೇದೋಳಗುತ್ತು (ಅಧ್ಯಕ್ಷರು, ಮುಂಡೂರು ಗ್ರಾಮಪಂಚಾಯತ್), ಸುಧಾಕರ ಕುಲಾಲ್ (ಅಧ್ಯಕ್ಷರು, ನರಿಮೊಗರು ಯುವಕ ಮಂಡಲ), ನವೀನ್ (ಅಧ್ಯಕ್ಷರು, ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ, ನರಿಮೊಗರು), ಭಾಸ್ಕರ ಆಚಾರ್ ಹಿಂದಾರು (ಸಂಚಾಲಕರು, ಸಾಂದೀಪನಿ ವಿದ್ಯಾಸಂಸ್ಥೆಗಳು, ನರಿಮೊಗರು), ಶ್ರೀಮತಿ ಗುರುಪ್ರಿಯಾ ನಾಯಕ್ (ಅಧ್ಯಕ್ಷರು, ನರಿಮೊಗರು ಯುವತಿ ಮಂಡಲ) ಇವರು ಉಪಸ್ಥಿತರಿರುವರು. ವಿವರಗಳಿಗೆ ಮೊಬೈಲ್ ಸಂಖ್ಯೆ 89044 74122 ಕ್ಕೆ ಬೆಳಿಗ್ಗೆ 9ರಿಂದ ಸಂಜೆ 4ರ ಒಳಗೆ ಕರೆ ಮಾಡಬಹುದು.
"ಆರೋಗ್ಯಕ್ಕಾಗಿ ಆಯುರ್ವೇದ" ಎಂಬ ಘೋಷವಾಕ್ಯದಡಿಯಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಮಧುಮೇಹ (ಸಕ್ಕರೆ ಕಾಯಿಲೆ), ರಕ್ತದೊತ್ತಡ (ಹೈಪರ್ಟೆನ್ಶನ್), ವಾತದಿಂದ ಬರುವ ಸಂಧಿವಾತ, ಗಂಟುನೋವು, ಸೊಂಟನೋವುಗಳಿಗೆ ನಾಡೀ ಪರೀಕ್ಷೆಯ ಮೂಲಕ ಆಯುರ್ವೇದ ರೀತಿಯಲ್ಲಿ ಶಾಶ್ವತ ಪರಿಹಾರ ಸೂಚಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಲು ಆಯೋಜಕರು ವಿನಂತಿಸಿಕೊಂಡಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ