'ಅಂತೂ ಇಂತೂ ಜಂಬೋ ಜೆಟ್ ಬಂತು' ಲಗಾಟಿ ಹೇಳಿದ.
'ಯಾವುದಲೇ?' ಕಾಕಾ ಕೇಳಿದ.
'ಅದೇ ನಮೋ ಜೆಂಬೋ ಜೆಟ್ ನಿನ್ನೆ ಬಂತಲಾ ಎಪ್ಪತ್ತೆರಡು ಸೀಟಿಂದು' ಎಂದ ಲಗಾಟಿ.
'ಓ ಅದಾ, ಇನ್ನಾ ಸ್ಪೀಕರದು ಆರಿಸುದು ಅದ, ಅದ್ಕ ನಾಯ್ಡು ಈಗಾಗ್ಲೇ ಟಾವೆಲ್ ಒಗ್ದಿರಬೇಕು' ಎಂದು ನಕ್ಕಳು ರಾಣಿ.
' ಮತ್ತs ಬಿಹಾರದ್ದ ಜಂಪಿಂಗ ಕಿಂಗ್ ಪಲ್ಟಿಕುಮಾರ ಮ್ಯಾಲೆ ಐತಿ ಇನ್ನ ಎಲ್ಲಾರದು ಅನುಮಾನ' ಎಂದಳು ರಾಶಿ
'ಯಾವಾಗ ಆಂಧ್ರ ಬಿಹಾರ ಹಾರ್ತಾವು ಗೊತ್ತಿಲ್ಲ ನೋಡು' ಎಂದ ಟುಮ್ಯಾ.
'ಅಂತೂ ಕುಮ್ಮಣ್ಣ ಚಾನ್ಸ್ ಹೊಡ್ದ, ಒಂದೇ ಕಲ್ಲಿನ್ಯಾಗ ಎರಡು ಹಕ್ಕಿ ಉರುಳಿಸಿದ ನೋಡು' ಎಂದಳು ರಾಣಿ
'ಹ್ಯಾಂಗವಾ?'ಕಾಕಾ ಕೇಳಿದ.
'ಅದೇ ಮಂಡ್ಯ ಟೂ ದಿಲ್ಲಿ ಕ್ಯಾಬಿನೆಟ್ ಆಂಡ್ ಬಂಡೆ ಒಡದು ಚೂರು ಮಾಡ್ದ ಇಲ್ಲಿ' ಎಂದಳು ರಾಣಿ
'ಅಂತೂ ನಮೋಂದು ತಂತಿ ಮ್ಯಾಲಿನ ನಡಿಗೆ ಅನ್ನು' ಎಂದ ಲಗಾಟಿ.
'ಇನ್ನ ಜಾಕೆಟ್ಗೊಳ್ನ ಜಾಸ್ತಿ ಚೇಂಜ ಮಾಡಂಗಿಲ್ಲನ್ನು' ಎಂದ ಕಾಕಾ.
'ಏನ ಮಾಡಿದ್ರೂ 'ಕಿಂಗ್'ಗಳಿಗೆ ಕೇಳೇ ಮಾಡ್ಬೇಕಲ್ಲ?' ನಕ್ಕ ಟುಮ್ಯಾ.
'ಹೊಳ್ಳಿ ರಾಮನೂರಿಗಿ ಹೊಕ್ಕಾರೋ ಇಲ್ಲೊ ಇವ್ರು' ಕೇಳಿದಳು ರಾಣಿ.
'ಅದ್ನೂ 'ಇವ್ರಿಗೆ' ಕೇಳೇ ಹೋಗ್ಬೇಕಲ್ಲಾ?' ಲಗಾಟಿ ಅಂದ.
'ಅಂದ್ರs, ಹಿಂದ್ಕs ಜಯಲಲಿತಾ ಮಂಡಿಯೂರಿಸಿದ್ದಳಲಾ ಹಂಗೇನು?' ಎಂದಳು ರಾಣಿ.
'ಇನ್ನ 'ಇಂಡಿ'ನ್ನ ಟೀಕಿಸ್ಬೇಕಂದ್ರುನೂ, ಕ್ಯಾಜೀ ಕ್ಯಾ ಬೋಲೆಂಗೆ ಹಮೇ ಕ್ಯಾ.... ಭಾಯಿಯೊ ಔರ್ ಬೆಹನೋ' ಅಂತ ಅಂದ್ರನೂ ಅಶ್ಚರ್ಯ ಇಲ್ಲ ಬಿಡು' ಅಂತ ವ್ಯಂಗವಾಗಿ ನಕ್ಕ ಲಗಾಟಿ.
'ನಡ್ರಿ ಹಂಗಾರ ಎಲ್ಲಾರೂ ಪೋಸ್ಟ ಆಫೀಸಿಗೆ ಹೋಗಿ ಖಾತೆ ತೆರಿಯುಣು, ಒಂದ ಲಕ್ಷ ಟಕಾಟಕ್ ಬರ್ತೈತಿ' ಎಂದಳು ರಾಣಿ.
'ಅದೂ ನಿಮ್ಗ ಹೆಣ್ಮಕ್ಕಳಿಗಿ,ಜಂಪಿಂಗ್ ಸ್ಟಾರ್ಸ್ ಜಂಪ್ ಮಾಡಿ ಆ ಕಡಿ ಹೋದ ಕೂಡ್ಲೆನೇ ಖಾತೆ ತೆಗಿರಿ' ಅಂತ ಟುಮ್ಯಾ ಹೇಳಿದ.
'ಹಾಂ ಯೆಸ್ ಯೆಸ್' ಅಂದು ಚಾ ಕುಡ್ಯಾಕ ಹ್ವಾದ್ರು ಎಲ್ಲಾರೂ.
-ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ