ಭರತಾಂಜಲಿ ನೃತ್ಯ ದಂಪತಿಗಳಿಂದ ನೃತ್ಯಾರ್ಪಣೆ
ಮಂಗಳೂರು: ನಾಟ್ಯನಿಕೇತನ (ರಿ) ಕೊಲ್ಯ ಸೋಮೇಶ್ವರ ಇವರು ನಾಟ್ಯಾಚಾರ್ಯ ಉಳ್ಳಾಲ್ ಮೋಹನ್ ಕುಮಾರ್ ಇವರ 90 ವರ್ಷ ತುಂಬಿದ ಸಂಭ್ರಮಾಚರಣೆಯನ್ನು ಕಳೆದ ಐದು ತಿಂಗಳಿಂದ ಹಮ್ಮಿಕೊಂಡು ಬರುತ್ತಿದ್ದು ಅವರ ಹಿರಿಯ ಶಿಷ್ಯೆಯಂದಿರು ಗುರುಗಳ ಸಮ್ಮುಖದಲ್ಲಿ ಸಮರ್ಪಣೆ ಮಾಡುತ್ತಿದ್ದಾರೆ.
ಇದೀಗ ನೃತ್ಯಶ್ರೀ ಸರಣಿ ಮಾಲಿಕೆ-6 ಜೂನ್ 29ರ ಶನಿವಾರದಂದು ಸಂಜೆ 5.30 ರಿಂದ ನಾಟ್ಯನಿಕೇತನ ಸಭಾಗೃಹ ಕೊಲ್ಯ ಇಲ್ಲಿ ಆಯೋಜಿಸಲಾಗಿದೆ. ಅವತ್ತಿನ ನೃತ್ಯಾರ್ಪಣೆಯನ್ನು ಭರತಾಂಜಲಿ ನೃತ್ಯ ಸಂಸ್ಥೆ ಕೊಟ್ಟಾರ ಇಲ್ಲಿನ ನೃತ್ಯ ದಂಪತಿಗಳಾದ ಶ್ರೀಧರ ಹೊಳ್ಳ, ವಿದುಷಿ ಪ್ರತಿಮಾ ಶ್ರೀಧರ್ ಸಮರ್ಪಿಸಲಿದ್ದಾರೆ.
ಗುರುಗಳಾದ ವಿದ್ವಾನ್ ದೇವಸ್ಯ ಶಿವರಾಂ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ, ಹಾಡುಗಾರಿಕೆಯಲ್ಲಿ ವಿದ್ವಾನ್ ಸ್ವರಾಗ್ ಮಾಹೆ ಮೃದಂಗದಲ್ಲಿ ವಿದ್ವಾನ್ ಸುರೇಶ್ ಬಾಬು ಸಹಕರಿಸಲಿದ್ದು, ನಟುವಾಂಗದಲ್ಲಿ ಉಳ್ಳಾಲ್ ಮೋಹನ ಕುಮಾರ್ ರವರ ಹಿರಿಯ ಶಿಷ್ಯೆ ಕರ್ನಾಟಕ ಕಲಾಶ್ರೀ ಗುರು ಕಮಲ ಭಟ್ ಸಹಕರಿಸಲಿರುವರು. ಎಂದು ಸಂಘಟಕಿ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

