ಮುಂಡಿತ್ತಡ್ಕ ಶಾಲೆಯಲ್ಲಿ ವಾಚನ ವಾರದ ಸಮಾರೋಪ

Upayuktha
0


ಪೆರ್ಲ: ಎಸ್‌ಎಂಎಂಎ ಯುಪಿ ಮುಂಡಿತ್ತಡ್ಕ ಶಾಲೆಯಲ್ಲಿ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ, ಪ್ರಸಿದ್ದ ಸಾಹಿತಿ ಪಿ. ಎನ್ ಪಣಿಕ್ಕರ್ ಪುಣ್ಯತಿಥಿ ಸ್ಮರಣಾರ್ಥ ಒಂದು ವಾರಗಳ ತನಕ ನಡೆದ ವಾಚನಾ ವಾರದ ಸಮಾರೋಪ ಸಮಾರಂಭವು ಬುಧವಾರ ಜರಗಿತು.


ಮಕ್ಕಳ ರಂಗತಜ್ಞ, ಶಿಕ್ಷಕ  ಉದಯ ಸಾರಂಗ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಕ್ಕಳಿಗಾಗಿ ಹಾಡು ಹಾಗೂ ಅಭಿನಯದ ಮೂಲಕ ಮನರಂಜನೆಯನ್ನು ನೀಡಿ ಪುಸ್ತಕ ವಾಚನದ ಮಹತ್ವ ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಎಂ ವಹಿಸಿದ್ದರು, ಶಾಲಾ ಹಿರಿಯ ಅಧ್ಯಾಪಕ ಪದ್ಮನಾಭ ನಾಯಕ್ ಶುಭಾಶಂಸನೆಗೈದರು. ಶಿಕ್ಷಕ ಜೀವನ್ ಕುಮಾರ್ ಸ್ವಾಗತಿಸಿ ಹಿರಿಯ ಶಿಕ್ಷಕಿ ಉಷಾ ವಿ ವಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top