ಮೂಡುಬಿದಿರೆ: ಜೈನ ಕಾಶಿ ಮೂಡುಬಿದಿರೆಯಲ್ಲಿ ಹಸ್ತಪ್ರತಿ, ತಾಡೋಲೆ ಪ್ರತಿಸಂರಕ್ಷಣ ಕಾರ್ಯಾಗಾರದ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಪ.ಪೂ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಾದ ಉಪಸ್ಥಿತಿಯಲ್ಲಿ ಸಮಾಪನಗೊಂಡಿತು.
ಶ್ರೀ ಮಠದ ರಮಾ ರಾಣಿ ಗ್ರಂಥ ಭಂಡಾರದ ವಿವಿಧ ತಾಡವೋಲೆ ತಾಮ್ರ ಪತ್ರ, ಕೈಫಿಯತ್ತು, ಭೂರ್ಜಪತ್ರವನ್ನು ವಿದ್ಯಾರ್ಥಿಗಳಿಗೆ ಶಿಬಿರಾರ್ಥಿಗಳಿಗೆ ತೋರಿಸಲಾಯಿತು. ಪರಮ ಪುನೀತ ಜೈನ ಆಗಮ ಧವಳತ್ರಯ ಗ್ರಂಥಗಳನ್ನು ವಿದ್ಯಾರ್ಥಿಗಳು ಕುತೂಹಲದಿಂದ ವೀಕ್ಷಿಸಿದರು. ಪ್ರತಿನಿಧಿಗಳಾಗಿ ಭಾಗವಹಿಸಿದ ಎಲ್ಲಾ ಶಿಬಿರಾರ್ಥಿಗಳಿಗೆ ಜೈನಮಠದ ಧವಳತ್ರಯ ಜೈನಕಾಶಿ ಟ್ರಸ್ಟ್ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.
ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಉನ್ನತ ಸಮಿತಿ ಸದಸ್ಯ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ತಾಡವೋಲೆಪ್ರತಿ, ತಾಮ್ರದ ಶಾಸನಗಳ ಸಂರಕ್ಷಣ ಕ್ರಮಗಳನ್ನು ಜತನದಿಂದ ಕಾಪಾಡುತ್ತಿರುವ ಸ್ವಾಮೀಜಿ ಕಾರ್ಯ ಸ್ತುತ್ಯಹ೯ಎಂದರು. ಅವರನ್ನು ಸ್ವಸ್ತಿಶ್ರೀ ಭಟ್ಟಾರಕ ಶ್ರೀಗಳಿಂದ ಧವಳತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ಕೊಡಮಾಡಲ್ಪಟ್ಟ ಸನ್ಮಾನ ಪತ್ರದೊಂದಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಶ್ರೀಗಳವರು ಶಾಲು ಸ್ಮರಣಿಕೆ ನೀಡಿ ಅಭಿನಂದಿಸಿ ಹರಸಿ ಆಶೀರ್ವಾದ ಮಾಡಿದರು.
ಶ್ರೀ ಕೃಷ್ಣಯ್ಯ ಪ್ರಾಚ್ಯ ಸಂಶೋಧನಾ ಕೇಂದ್ರ ಉಡುಪಿ ವತಿಯಿಂದ ಪ.ಪೂ ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿಗಳವರಿಗೆ ಭರತ ಚಕ್ರವರ್ತಿಯ ಕಾವಿ ಕಲಾ ಕೃತಿ, ತಾಳೆ ವೃಕ್ಷ ಬೀಜದ ಮೂರು ಜಪಸರ ಬೆಳ್ಳಿ ದಾರದಿಂದ ರಚಿತ ಹಾಗೂ ತಾಳೆ ಪತ್ರ ನೀಡಿದರು. ಸ್ವಸ್ತಿಶ್ರೀ ಕಾಲೇಜು ಪ್ರಾಂಶುಪಾಲೆ ಸೌಮ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.
ಕೃಷ್ಣಯ್ಯ ಸ್ವಾಗತಿಸಿದರು. ಶ್ರೀಮತಿ ಗೀತಾ ಜೈನ್ ಮಂಗಳೂರು, ಎಸ್‌ಡಿಎಂ ತುಳು ಪೀಠ, ಜೈನ್ ಪ.ಪೂ ಕಾಲೇಜು ಪ್ರಾಂಶುಪಾಲ ಡಾ ಪ್ರಭಾತ್ ಬಲ್ನಾಡ್, ಡಾ ಅಮೃತ ಮಲ್ಲ, ಮಹಿಳಾ ಸಂಘದ ಶ್ರೀಮತಿ ಸುಧಾ ದಿವ್ಯಾ ವೀರೇಂದ್ರ, ಹರಿಣಿ, ವೀಣಾ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

