ಮೋದಿ 3.0: ಗೋವಾದಲ್ಲಿ ಸಂಭ್ರಮದ ವಿಜಯೋತ್ಸವ

Upayuktha
0


ಪಣಜಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿರವರ ನೇತೃತ್ವದಲ್ಲಿ ಮೂರನೇ ಬಾರಿ ಸರ್ಕಾರ ಸ್ಥಾಪನೆಯಾದ ಹಿನ್ನಲೆಯಲ್ಲಿ ಹಾಗೂ ಉತ್ತರ ಗೋವಾದಲ್ಲಿ ಸತತವಾಗಿ ಆರನೆಯ ಬಾರಿ ಜಯಗಳಿಸಿದ ಶ್ರೀಪಾದ ನಾಯಕ್ ರವರಿಗೆ ಕೇಂದ್ರದಲ್ಲಿ ಸಚಿವ ಸ್ಥಾನ ಲಭಿಸಿದ ಹಿನ್ನೆಲೆಯಲ್ಲಿ ಗೋವಾದ ವಾಸ್ಕೋ ಜುವಾರಿ ನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಗೋವಾ ಬಿಜೆಪಿ ಕರ್ನಾಟಕ ಸೆಲ್ ಕಾರ್ಯದರ್ಶಿ ಶಿವಾನಂದ ಬಿಂಗಿ ಮಾತನಾಡಿ, ಮೂರನೇ ಅವಧಿಗೆ ಪ್ರಧಾನಿಗಳಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಹ್ಯಾಟ್ರಿಕ್ ಸಾಧನೆಯನ್ನು ಮಾಡಿದ್ದಾರೆ. ಭಾರತದ ಹೆಸರನ್ನು ವಿಶ್ವ ಗುರುವನ್ನಾಗಿ ಮಾಡಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು. ಯಾವ ಪ್ರಧಾನಿಯೂ ಮಾಡದ ಸಾಧನೆಯನ್ನು ನಮ್ಮ ಪ್ರಧಾನಿ ಮೋದಿಯವರು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಗೋವಾದ ಜುವಾರಿನಗರದ ಬಿಜೆಪಿ ಕಾರ್ಯಕರ್ತರು ಕನ್ನಡಿಗರು ಪಟಾಕಿ ಸಿಡಿಸಿ ಸಂಭ್ರಮಿಸಿ ಸಿಹಿ ಹಂಚಿದ್ದಾರೆ ಎಂದರು.


ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರಾದ, ಚಂದ್ರಶೇಖರ ಬಿಂಗಿ, ಮಹಾದೇವಪ್ಪ ಬಾಲವಾಡ, ಸಂಗಮೇಶನಾಗೋಡ, ಮಾರುತಿ ಹಾದಿಮನಿ, ಹನಮಂತಗೌಡ ಬಿರಾದರ, ವೆಂಕಟೇಶ ರಾಠೋಡ, ಬಾಲಪ್ಪ ಬಾಲವಾಡ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top