ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಿದ್ದರ ಬಗ್ಗೆ ಕಿಡಿಕಾರಿದ ವಿರೋಧಿ ಮುಖ್ಯಸ್ಥರು "ಪ್ರಧಾನಿಯವರು ತಮ್ಮ ಮನೆಯಲ್ಲಿ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡುವುದು ಒಂದು ಹೈ ಡ್ರಾಮಾ" ಎಂದು ಹೇಳಿದ್ದಾರೆ.
ಧ್ಯಾನ ನಾಟಕ ಅಲ್ಲ, ಧ್ಯಾನವನ್ನು ಪ್ರಶ್ನಿಸುವುದು ಹೈ ಡ್ರಾಮ!!!
ಈ ಪ್ರಶ್ನೆ ನಾಟಕ ಪುರಾಣದ ಋಷಿ ಮುನಿಗಳಿಗೆ, ಇತಹಾಸದ ವಿವೇಕಾನಂದ ಶಂಕರರಿಗೆ, ವರ್ತಮಾನದ ಮೋದಿ, ಸಿನಿಮಾ ನಟ ರಜನಿಕಾಂತ್ ಎಲ್ಲರಿಗೂ ಕೇಳಬೇಕು!! ಅಲ್ವಾ?
ಹೈ ಡ್ರಾಮಾ ಅಂತ ಹೇಳಿ ಪ್ರಶ್ನೆ ಕೇಳುವುದೇ ಆದರೆ, ಯುದ್ಧರಂಗದಲ್ಲಿ ಅರ್ಜುನನಿಗೆ ಧ್ಯಾನ ಯೋಗ (ಆತ್ಮ ಸಂಯಮ ಯೋಗ)ದ ಬಗ್ಗೆ ಹೇಳಿದ ಕೃಷ್ಣನನ್ನೇ ಪ್ರಶ್ನಿಸಬೇಕು. ಅಫ್‌ಕೋರ್ಸ್, ಆ ಪಕ್ಷದಲ್ಲಿ ಅದನ್ನೂ ಪ್ರಶ್ನಿಸುವವರು ಇದ್ದಾರೆ!!
ಭಗವಂತನ ಭಗವದ್ಗೀತೆ ಧ್ಯಾನ ಯೋಗವನ್ನು ಮಹಾ ಪ್ರಸಾದ ಅಂತ ತಿಳಿದ ಗಾಂಧೀಜಿಯವರು *ಧ್ಯಾನ ಯೋಗವನ್ನು ಅನಾಸಕ್ತಿಯೋಗ ಎಂದು ಹೆಸರಿಸಿ, ಧ್ಯಾನದ ಮಹತ್ವವನ್ನು ವಿವರಿಸಿದ್ದಾರೆ. ಗಾಂಧೀಜಿಯವರ ಬೇರೆ ವಿಚಾರಗಳನ್ನು ಬದಿಗಿಟ್ಟು, ಧ್ಯಾನದ ಬಗ್ಗೆ ಅವರ ಶ್ರದ್ದೆಯ ಬಗ್ಗೆ ನೋಡೋಣ. ಮೋದಿಯವರ ಧ್ಯಾನದ ಸಂದರ್ಭದಲ್ಲಿ ಅದು ಹೆಚ್ಚು ಪ್ರಸ್ತುತವಾಗಿ ಕಾಣುತ್ತಿದೆ.
ಗಾಂಧೀಜಿಯವರ ಪ್ರಕಾರ "ಅನಾಸಕ್ತಿಯೋಗ ನಿಷ್ಕ್ರಿಯೆಯನ್ನು ಬೋಧಿಸುತ್ತದೆಂದು ತಿಳಿದುಕೊಳ್ಳಬಾರದು. ಫಲದ ವಿಚಾರದಲ್ಲಿ ಇಲ್ಲದ ಆಸಕ್ತಿಯನ್ನು ಕೆರಳಿಸಿದಂಥ ಕಾರ್ಯಗಳನ್ನು ಮಾಡುವಾಗ ಸಹಜವಾಗಿ ಆಸಕ್ತಿಯೆಲ್ಲ ಕಾರ್ಯ ಮಾಡುವುದರಲ್ಲಿಯೇ ವಿನಿಯೋಗವಾಗುತ್ತದೆ. ಮೋಹ ಮಾತ್ಸರ್ಯಗಳ ಹೊರೆ ಮನಸ್ಸಿನ ಮೇಲಿಲ್ಲವೆಂದಾಗ ಮನಸ್ಸು ಸದಾ ಪ್ರಫುಲ್ಲವಾಗಿದ್ದು ಶಾಂತವಾಗಿರುತ್ತದೆ. ಅನಾಸಕ್ತಿಯಿಂದ ಮಾಡಿದ ಕೆಲಸಗಳು ಗುಣದಲ್ಲಿ ಕಡಿಮೆ ಇರುವುದಿಲ್ಲ. ಇಲ್ಲವೆ ಅವುಗಳಿಂದ ಬರಬೇಕಾದ ಫಲವೂ ಕಡಿಮೆಯಾಗುವುದಿಲ್ಲ- ಎಂಬುದೇ ಭಗವಂತನ ಆಶ್ವಾಸನೆ. ಅದರ ಫಲ ಕಡಿಮೆಯಾಗುವ ಬದಲು ನೂರ್ಮಡಿ ಹೆಚ್ಚುತ್ತದೆ, ಏಕೆಂದರೆ ನಿರಹಂಕಾರದಿಂದ ಮಾಡಿದ ಕೆಲಸದಲ್ಲಿ ಭಗವಂತನ ಕೃಪೆಗೆ ಪೂರ್ಣ ಅವಕಾಶವಿರುತ್ತದೆ. ಆಕಾರಣದಿಂದಲೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ, ನಿಷ್ಕಾಮ ಕರ್ಮಕ್ಕೆ ಯಥೇಚ್ಛವಾಗಿ ಫಲಕೊಡುವ ಹೊಣೆಯನ್ನು ತಾನೇ ವಹಿಸಿಕೊಂಡಿದ್ದಾನೆ. ಭಕ್ತನಾದ ಅನಾಸಕ್ತಿಯೋಗಿಗೆ ಈ ಅಭಯ ಒಂದು ವರವಿದ್ದಂತೆ." ಎಂದು ಹೇಳಿದ್ದಾರೆ.
ಗಾಂಧೀಜಿಯವರಿಗೆ ಅನಾಸಕ್ತಿಯೆಂಬುದು ಭಕ್ತಿ, ಜ್ಞಾನ, ಧ್ಯಾನ, ಯೋಗಗಳಿಗೆ ಹೊರತಾದ ಆತ್ಮಸಾಕ್ಷಾತ್ಕಾರದ ಬೇರೊಂದು ಮಾರ್ಗ ಎಂದು ಕಾಣಲಿಲ್ಲ. ಅವರ ಅನಾಸಕ್ತಿಯೋಗದಲ್ಲಿ ಭಕ್ತಿ, ಧ್ಯಾನ, ಮತ್ತು ಜ್ಞಾನಗಳು ಸಮಪ್ರಮಾಣದಲ್ಲಿ ಸಮನ್ವಯಗೊಳ್ಳುತ್ತವೆ. ಈ ಎಲ್ಲ ಯೋಗಗಳ ಸಾಮರಸ್ಯವಾದಾಗ ಮಾತ್ರ ಅನಾಸಕ್ತಿಯೋಗ ಸಿದ್ಧಿಸುತ್ತದೆಂದು ನಂಬಿದ್ದರು. (ಸಂಗ್ರಹದಿಂದ)
ಕಿಡಿ ಕಾರುವ ಪಕ್ಷದವರು, ಹೈ ಡ್ರಾಮಾ ಅಂತ ಹೇಳುವವರು, ಯುನಿವರ್‌ಸೆಲ್ ಐಕಾನ್-ಗ್ಲೋಬಲ್ ಲೀಡರ್ ಅಂತ ಗಾಂಧಿಯನ್ನು ಒಪ್ಪಿಕೊಂಡಿರುವವರು ಗಾಂಧಿಯನ್ನು ಪ್ರಶ್ನಿಸುತ್ತಾರಾ?
ಮೋದಿಯ ಧ್ಯಾನವನ್ನು ಪ್ರಶ್ನಿಸುವುದು ಒಂದು ಹೈ ಡ್ರಾಮ ಅಷ್ಟೆ.
ಅಧಿಕಾರ ಸಿಗುತ್ತಿಲ್ಲವೇನೋ ಎಂಬ ಹತಾಶೆ, ಅಹಂಕಾರ, ಧ್ಯಾನ ಮಾಡುವ ಮೋದಿಯನ್ನು ಟೀಕಿಸಿದರೆ ಸಿಗಬಹುದಾದ ಪ್ರಚಾರದ ಗುಂಗಿನಲ್ಲಿ ಕೆಲವರು ವಿವೇಕ ಕಳೆದುಕೊಂಡಿದ್ದಾರೆ ಅನಿಸುತ್ತದೆ. ಮಾತಿನಲ್ಲೇ ಡ್ರಾಮಾ ಡೈಲಾಗ್ ಹೊಡೆಯುತ್ತಿದ್ದಾರೆ ಅಷ್ಟೆ.
ಬಹುಷಃ ಈ ಚುನಾವಣೆಯಲ್ಲಿ 'ಮೋದಿ' ಹೆಸರನ್ನು ಮೋದಿ ಪಕ್ಷದವರಿಗಿಂತ, ಮೋದಿ ವಿರೋಧಿಗಳು, ಟೀಕಿಸುವ ಬರದಲ್ಲಿ ಹೆಚ್ಚು ಜಪಿಸಿದ್ದಾರೆ ಅನಿಸುತ್ತೆ!!! ಹೆಚ್ಚು ಸ್ಮರಣೆ ಮಾಡಿದ್ದಾರೆ ಅನಿಸುತ್ತೆ!! ವಿರೋಧ ಭಕ್ತಿಯಲ್ಲಿ ಮೋದಿಯನ್ನೇ ಧ್ಯಾನಿಸಿದ್ದಾರೆ ಅನಿಸುತ್ತೆ!!!
ಅವರ ಪ್ರಚಾರದಲ್ಲಿ "ಮೋದಿ ಸುಳ್ಳುಗಾರ, ಮೋದಿ 15 ಲಕ್ಷ ತಂದಿಲ್ಲ, ಮೋದಿ ಸಂವಿಧಾನ ಬದಲಿಸ್ತಾರೆ, ಮೋದಿಗೆ ಬಹುಮತ ಬರುವುದಿಲ್ಲ, ಮೋದಿ ಮುಸ್ಲಿಮ್ ವಿರೋಧಿ, ಮೋದಿ ಹಿಂದೂ ರಾಷ್ಟ್ರ ಮಾಡ್ತಾರೆ, ಮೋದಿ ಹಾಗೆ, ಮೋದಿ ಹೀಗೆ, ಮೋದಿ........ " ಅಂತ ಸದಾ ಮೋದಿ ಭಜನೆ, ಜಪ, ಸ್ಮರಣೆ, ಧ್ಯಾನ ಮಾಡಿದ್ದು ಮೋದಿ ವಿರೋಧಿಗಳೆ!!!!
ವಾಸ್ತವವಾಗಿ ಧ್ಯಾನ ಹೆಚ್ಚು ಬೇಕಿರುವುದು ಮನಸ್ಸು ಕಲ್ಮಶ ಆದವರಿಗೆ, ಹತಾಶೆಗೊಂಡು ಕಿಡಿ ಕಾರುವವರಿಗೆ, ಅಹಂಕಾರ ತುಂಬಿಸಿಕೊಂಡವರಿಗೆ, ಧ್ಯಾನ ಮಾಡುವ ಮೋದಿಯನ್ನು ಅನಗತ್ಯ ಟೀಕಿಸುವವರಿಗೆ.
ಸನಾತನ ಧರ್ಮ ಒಂದು ಕ್ಯಾನ್ಸರ್ ಅನ್ನುವವರು, ರಾಮಾಯಣವನ್ನು ಕಾಲ್ಪನಿಕ ಕಟ್ಟು ಕತೆ ಅನ್ನುವವರು.... ಧ್ಯಾನದ ಬಗ್ಗೆ ಇನ್ನೇನು ಹೇಳಲು ಸಾಧ್ಯ!!?
ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ