ಮಂಗಳೂರು: ಮಂಗಳೂರು ಎ.ಜೆ.ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ನಿತೇಶ್ ಕೆ. ಅವರು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಯಲ್ಲಿ ಎಫೆಕ್ಟ್ ಆಫ್ ದಿ ಎಡಿಶನ್ ಆಫ್ ಕಾಪರ್ ಮತ್ತು ಝಿಂಕ್ ಟು ಎ356 ಅಲ್ಯೂಮಿನಿಯಂ ಎಲಾಯ್ ಆಂಡ್ ಇಟ್ಸ್ ಸರ್ಫೇಸ್ ಕ್ಯಾರೆಕ್ಟರಿಸ್ಟಿಕ್ಸ್ ಎಂಬ ಪ್ರಬಂಧ ಮಂಡಿಸಿದ್ದರು.
ಅವರಿಗೆ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೆಕ್ಯಾನಿಕಲ್ ಆಂಡ್ ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗದ ಸೀನಿಯರ್ ಪ್ರೊಫೆಸರ್ ಡಾ.ಸತ್ಯಶಂಕರ ಶರ್ಮ ಅವರು ಮಾರ್ಗದರ್ಶನ ಮಾಡಿದ್ದಾರೆ. ನಿತೇಶ್ ಅವರು ಮಂಗಳೂರು ಬಂದರು ಮೋಡರ್ನ್ ಆಗ್ರೋ ಟ್ರೇಡ್ಸರ್ಸ್ ಪಾಲುದಾರ, ಉದ್ಯಮಿ ಗಣೇಶ್ ಮೋಹನ್ ಕಾಶಿಮಠ ಮತ್ತು ಶ್ರೀದೇವೀ ಕಾಶಿಮಠ ದಂಪತಿಯ ಪುತ್ರ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ