ತಿಮ್ಮಾಪುರ ಗ್ರಾಮದಲ್ಲಿ ಸಡಗರದಿಂದ ಕಾರಹುಣ್ಣಿಮೆ ಆಚರಣೆ

Upayuktha
0

ಹುನಗುಂದ: ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ರೈತರ ಪ್ರೀತಿಯ ಹಬ್ಬವಾದ ಕಾರ ಹುಣ್ಣಿಮೆಯನ್ನು ಜೂ.22ರಂದು ಸಾಯಂಕಾಲ ಸಡಗರದಿಂದ ಆಚರಿಸಲಾಯಿತು.


ನಗರೀಕರಣದಿಂದ ನಮ್ಮ ಈ ಜಾನಪದ ಸಂಸ್ಕೃತಿ ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ತಿಮ್ಮಾಪುರ್ ಹುನಗುಂದ ತಾಲೂಕ ಗ್ರಾಮದಲ್ಲಿ ಕಾರ ಹುಣ್ಣಿಮೆಯ ದಿನ ಹೋರಿ ಓಡಿಸುವುದು ಕರಿ ಹರಿಯುವದು ಸಂಪ್ರದಾಯ ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದರೂ ಇಂದಿನ ನಮ್ಮ ಗ್ರಾಮೀಣ ಸಂಸ್ಕೃತಿಗಳು ಯಾವುದೇ ಆಚರಣೆಯಿಂದ ಹಿಂದೆ ಸರಿದಿಲ್ಲ. ಕಾರು ಹುಣ್ಣಿಮೆಯ ದಿನ ಗ್ರಾಮದ ಹಿರಿಯರು ಸೇರಿ ಬಾಬದ ಮನೆಗಳಾದ ರಾಟಿಯವರ ಮನೆ ಗೌಡರ ಹಳಮನೆಯವರ ಮನೆ ಹಾದಿಮನಿಯವರ ಮನೆ ಕೆಂಚನಗೌಡರ ಮನೆ ಹಾಗೂ ಪಿಂಜಾರರ ಮನೆಗಳಿಗೆ ಬಾಜಾ ಭಜಂತ್ರಿಗಳೊಂದಿಗೆ ತೆರಳಿ ಸಂಜೆ ಕರಿ ಹರಿಯುವುದಕ್ಕೆ ಕರೆ ತರಲಾಯಿತು.


ಊರ ಮುಂದಿನ ಅಗಸಿಯಲ್ಲಿ ಎಲ್ಲ ಎತ್ತುಗಳನ್ನು ಒಂದೇ ಸಾರಿ ಐದು ಸುತ್ತು ಬಿಡಲಾಯಿತು ಅಗಸಿಗೆ ಅಡ್ಡಲಾಗಿ ಹಾಕಿರುವ ಬೇವಿನ ಸೊಪ್ಪಿನ ಮಧ್ಯೆ ಇರುವ ಕೊಬ್ಬರಿ ಬಟ್ಟಲನ್ನು ಯುವಕರು ಸಾಹಸ ಮಾಡಿ ಹರಿದರು ಯಾವ ಬಣ್ಣದ ಎತ್ತು ಕರೆ ಹರಿಯುತ್ತದೆಯೋ ಅದರ ಮೇಲೆ ರೈತರು ಬೆಳೆಯ ಸೂಚನೆ ನೀಡುತ್ತಾರೆ. ಐದು ಎತ್ತುಗಳಲ್ಲಿ ಬಿಳಿ ಎತ್ತು ಮೊದಲು ಬಂದ ಕಾರಣ ಬಿಳಿ ಜೋಳ ಸಂಭ್ರಮದಿಂದ ಬೆಳೆಯಲಿದೆ ಎಂದು ರೈತರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.



ಕರಿ ಹರಿದ ನಂತರ ಇಲ್ಲಿಯ ಯುವಕರಿಂದ ಗುಂಡು ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಾಹಸ ಮೆರೆದರು.


ಕಾರ ಹುಣ್ಣಿಮೆಯ ಬಗ್ಗೆ ಪತ್ರಕರ್ತ ಜಗದೀಶ್ ಹದ್ಲಿ ಮಾತನಾಡಿ, ಆಧುನಿಕತೆಯ ಭರಾಟೆಯ ಮಧ್ಯೆಯ ವೀಲಕ್ಷಣವೆನಿಸಿದರು ಗ್ರಾಮೀಣದ ಸೊಡುಗು ಜಾನಪದ ಸಂಸ್ಕೃತಿ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅಳಿವಿನಂಚಿನಲ್ಲಿರುವ ಈ ಸಂಸ್ಕೃತಿಗಳನ್ನು ಸರ್ಕಾರ ಪ್ರೋತ್ಸಾಹಿಸುವುದರ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top