ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಅಧ್ಯಯನ ಪೀಠ- ಕನಕದಾಸ ಸಂಶೋಧನ ಕೇಂದ್ರವು ಜೂ.25ರಂದು 'ಕನಕ ಸ್ಮೃತಿ' ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಇದೇ ಸಂದರ್ಭದಲ್ಲಿ 2023-24ನೇ ಸಾಲಿನ 'ಕನಕ ಪುರಸ್ಕಾರ ಪ್ರದಾನ' ಮತ್ತು ಕೀರ್ತನ ಪ್ರಸ್ತುತಿಯೂ ನಡೆಯಲಿದೆ.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಹಾಗೂ ವಿವಿ ಕುಲಸಚಿವ ಕೆ. ರಾಜು ಮೊಗವೀರ ಅವರು ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.
ಕಾಯಕ್ರಮವನ್ನು ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್ ಉದ್ಘಾಟಿಸಲಿದ್ದಾರೆ. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್ ಧರ್ಮ ಅಧ್ಯಕ್ಷತೆ ವಹಿಸಲಿದ್ದಾರೆ.
ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿವಿ ಸಿಂಡಿಕೇಟ್ ಸದಸ್ಯ ರಘುರಾಮ್ ಕದ್ರಿ ಗೌರವ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮವು ಜೂ.25ರ ಮಂಗಳವಾರ ಅಪರಾಹ್ನ 2:00 ಗಂಟೆಯಿಂದ ಮಂಗಳಗಂಗೋತ್ರಿಯ ಹಳೆಯ ಸೆನೆಟ್ ಸಭಾಂಗಣದಲ್ಲಿ (ಡಾ. ಯು.ಆರ್. ರಾವ್ ಸಭಾಂಗಣ) ನಡೆಯಲಿದೆ. ಕನಕ ಪುರಸ್ಕಾರ ಪಡೆದ ಆಯ್ದ ಗ್ರಾಹಕರಿಂದ ಕನಕ ಕೀರ್ತನ ಪ್ರಸ್ತುತಿ ನಡೆಯಲಿದೆ.
ಕನಕ ಪುರಸ್ಕಾರಕ್ಕೆ ಆಯ್ಕೆಯಾದವರು:
ಪ್ರೌಢಶಾಲಾ ವಿಭಾಗ:
1. ಪೂರ್ವಿ ಬಿ.ಎಸ್, 9ನೇ ತರಗತಿ, ಸರೋಜಿನಿ ಮಧುಸೂದನ್ ಕುಶೆ ಸ್ಕೂಲ್ ಅತ್ತಾವರ, ಮಂಗಳೂರು.
2. ತನ್ವಿ ಕಾವೂರು, 10ನೇ ತರಗತಿ, ಕೇಂದ್ರೀಯ ವಿದ್ಯಾಲಯ ನ>1, ಪಣಂಬೂರು, ಮಂಗಳೂರು.
3. ನಿಹಾಲ್, 9ನೇ ತರಗತಿ, ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಮೂಡಬಿದ್ರೆ.
ಪದವಿಪೂರ್ವ ವಿಭಾಗ:
1. ಸುದೀಕ್ಷ ಆರ್., ದ್ವಿತೀಯ ಪಿಯುಸಿ, ಗೋವಿಂದದಾಸ್ ಪಿಯು ಕಾಲೇಜು, ಸುರತ್ಕಲ್
2. ಮೇಧಾ ಉಡುಪ, ಪ್ರಥಮ ಪಿಯುಸಿ, ಕೆನರಾ ಪಿಯು ಕಾಲೇಜು, ಮಂಗಳೂರು
3. ಭೂಮಿಕ ಹೆಗಡೆ, ದ್ವಿತೀಯ ಪಿಯುಸಿ, ಶಾರದಾ ಪಿಯು ಕಾಲೇಜು, ಮಂಗಳೂರು.
ಪದವಿ ವಿಭಾಗ:
1. ಕೀರ್ತನ್ ನಾಯ್ಗ, ಪ್ರಥಮ ಬಿ.ಕಾಂ, ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟೆ
2. ಅಶ್ವೀಜಾ ಉಡುಪ, ಪ್ರಥಮ ಬಿ.ಎಸ್ಸಿ, ಆಳ್ವಾಸ್ ಪದವಿ ಕಾಲೇಜು, ಮೂಡಬಿದ್ರೆ
3. ಅನನ್ಯಲಕ್ಷ್ಮಿ ಎನ್. ತೃತೀಯ ಬಿ.ಎಸ್ಸಿ, ವಿವೇಕಾನಂದ ಕಾಲೇಜು ಪುತ್ತೂರು.
4. ರೋಹಿತ್ ಕಾಮತ್, ಅಂತಿಮ ಎಂಜಿನಿಯರಿಂಗ್, ಎನ್‌ಎಂಎಎಂಐಟಿ, ನಿಟ್ಟೆ, ಕಾರ್ಕಳ
ಸ್ನಾತಕೋತ್ತರ ವಿಭಾಗ:
1. ಸುಶಾನ್ ಸಾಲಿಯಾನ್, ಎಂಟೆಕ್, ಎಲೆಕ್ಟ್ರಿಕಲ್ ವೈಕಲ್ ಟೆಕ್ನಾಲಜಿ ಕಾಲೇಜು, ನಿಟ್ಟೆ
2. ಶ್ರೀವರದಾ ಪಿ. ದ್ವಿತೀಯ ಎಂಎಸ್ಸಿ, ಗಣಿತಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ
3. ವಿಭಾಶ್ರೀ ಎಂ.ಎಸ್, ಪ್ರಥಮ ಎಂ.ಸಿಎ., ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ ಪುತ್ತೂರು.
4. ಪ್ರಜ್ವಲ್, ಸಂಶೋಧನಾರ್ಥಿ, ಎಂಎಸ್‌ಡಬ್ಲ್ಯು ವಿಭಾಗ, ಮಂಗಳೂರು ವಿವಿ.
ಅಧ್ಯಾಪಕ ವಿಭಾಗ:
1. ಸ್ವಾತಿ ಎನ್.ಎಸ್, ಪ್ರಾಧ್ಯಾಪಕರು, ರಸಾಯನಶಾಸ್ತರ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪ್ಪಿನಂಗಡಿ.
2. ಪೃಥ್ವಿ ಶೆಣೈ, ಸಹಾಯಕ ಪ್ರಾಧ್ಯಾಪಕರು, ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗ, ಎಂ.ಐಟಿ. ಮಣಿಪಾಲ.
3. ಶೋಭಾ ಐತಾಳ್, ಶಿಕ್ಷಕಿ, ಸರಕಾರಿ ಪ್ರೌಢಶಾಲೆ, ಕಸಬ, ಬೆಂಗ್ರೆ.
ಅಧ್ಯಾಪಕೇತರ ವಿಭಾಗ:
1. ರವಿದಾಸ ಕಾರ್ಕಳ, ಸಿಬ್ಬಂದಿ, ಭುವನೇಂದ್ರ ಕಾಲೇಜು ಕಾರ್ಕಳ.
2. ಯಶವಂತ, ವಾಹನ ಚಾಲಕರು, ಮಂಗಳೂರು ವಿವಿ.
3. ಸುಮಂಗಲಿ, ಅಧೀಕ್ಷಕರು, ಆಡಳಿತ ವಿಭಾಗ, ಕುಲಸಚಿವರ ಕಚೇರಿ, ಮಂಗಳೂರು ವಿವಿ.
ಸಾರ್ವಜನಿಕ ವಿಭಾಗ- ಸಮೂಹ ಗಾಯನ:
1. ಬಂಟರ ಬಳಗ ಜಪ್ಪಿನಮೊಗರು
2. ನಾದಮೇದ ತಂಡ ಮಂಗಳೂರು
3. ರಾಮಾರ್ಪಣ ಭಜನಾ ಮಂಡಳಿ ಮುಡಿಪು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

