ಶಿಶಿಲ ಬಸದಿಯಲ್ಲಿ ಕಲ್ಯಾಣ ಮಂದಿರ ಆರಾಧನೆ

Upayuktha
0


ಶಿಶಿಲ ಗ್ರಾಮದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಕಲ್ಯಾಣ ಮಂದಿರ ಆರಾಧನೆ ನಡೆಯಿತು.


ಉಜಿರೆ: ಶಿಶಿಲ ಗ್ರಾಮದಲ್ಲಿರುವ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಬಸದಿಯಲ್ಲಿ ಭಾನುವಾರ ಲೋಕಾಕಲ್ಯಾಣಕ್ಕಾಗಿ ಕಲ್ಯಾಣಮಂದಿರ ಆರಾಧನೆ ನಡೆಯಿತು.


ಪ್ರತಿಷ್ಠಾಚಾರ್ಯ ಜಯರಾಜ ಇಂದ್ರ ಹಾಗೂ ಸಹಪುರೋಹಿತರ ಸಹಕಾರದಲ್ಲಿ ಸಾಮೂಹಿಕ ಕಲ್ಯಾಣಮಂದಿರ ಆರಾಧನೆ, ಪದ್ಮಾವತಿ ಅಮ್ಮನವರ ವಿಶೇಷ ಪೂಜೆ ನಡೆಯಿತು.


ದಾನಿಗಳಾದ ವಿಜಯಕುಮಾರ್, ಕಣಿಯೂರು, ಸುರೇಂದ್ರ ಹೆಗ್ಡೆ ಮತ್ತು ಉಜಿರೆಯ ಶಶಿಪ್ರಭಾ ಅವರನ್ನು ಗೌರವಿಸಲಾಯಿತು.


ಬಸದಿಯ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸರ್ವಸದಸ್ಯರು ಮತ್ತು ಶಿಶುಗಲಿ ರಾಣಿ ಕಾಳಲಾದೇವಿ ಮಹಿಳಾ ಸಮಾಜದ ಸದಸ್ಯರು ಸಕ್ರಿಯ ಸಹಕಾರ ನೀಡಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top