ಕಲ್ಬುರ್ಗಿ: ವಿಶ್ವ ಯೋಗ ದಿನದಂದು ಅನುಗ್ರಹ ಆಯುರ್ವೇದಾಲಯ ಶುಭಾರಂಭ

Upayuktha
0


ಕಲ್ಬುರ್ಗಿ: ನಗರದ ಸೂಪರ್ ಮಾರ್ಕೆಟ್‌ನ ಚಂದ್ರಪ್ಪ ಕಾಮರ್ಸ್ ಬಿಲ್ಡಿಂಗ್‌ನಲ್ಲಿ ನೂತನವಾಗಿ ಪ್ರಾರಂಭಿಸಿದ ಅನುಗ್ರಹ ಆಯುರ್ವೇದಾಲಯ ಆಸ್ಪತ್ರೆ ವಿಶ್ವ ಯೋಗ ದಿನವಾದ ಜೂನ್ 21ರಂದು ಶುಭಾರಂಭಗೊಂಡಿತು.


ಪತಂಜಲಿ ಚಿಕಿತ್ಸಾಲಯದ ಆಯುರ್ವೇದ ವೈದ್ಯರಾದ ಡಾ. ರಾಜಶ್ರೀ ಪ್ರಸನ್ನ ಕಟ್ಟಿ ಅವರು ಆರಂಭಿಸಿದ ಪಂಚಕರ್ಮ ಸೌಲಭ್ಯ ಸೇರಿದಂತೆ ವಿವಿಧ ರೋಗಗಳಿಗೂ ಉಪಶಮನ ನೀಡುವ ಆಯುರ್ವೇದಾಲಯವನ್ನು ಹಿರಿಯ ವೈದ್ಯರಾದ ಡಾ. ಸುರೇಂದ್ರ ಸಿದ್ದಾಪುರಕರ್, ಹಾಗೂ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿಗಳಾದ ಡಾ. ಸದಾನಂದ ಪೆರ್ಲ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು. ಹಿರಿಯರಾದ ಲಕ್ಷ್ಮಿ ನಿವಾಸ್ ತಪಾಡಿಯ, ಸಂಪತ್ ತಪಾಡಿಯ ಹನುಮಂತ ರಾವ್ ಕುಲಕರ್ಣಿ ಡಾ. ಪ್ರಸನ್ನ ಕಟ್ಟಿ ಯೋಗ ಶಿಕ್ಷಕರಾದ ಶಿವಾನಂದ ಸಾಲಿಮಠ, ಪತಂಜಲಿ ಕೇಂದ್ರದ ಅಶೋಕ್ ಈ ಸಾಲಿಮಠ ಹಾಗು ಗೀತಾ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.


ನಿರೋಗಿಯಾಗಲು ಆಯುರ್ವೇದ ಜೀವನ ಶೈಲಿ ಉತ್ತಮ: ಪೆರ್ಲ 

ವಿಶ್ವ ಯೋಗ ದಿನದಂದು ಆಯುರ್ವೇದ ಆಲಯ ಆರಂಭಿಸಿ ನೂತನ ಕೊಡುಗೆ ನೀಡಲಾಗಿದ್ದು ನಿರೋಗಿಯಾಗಿ ಬದುಕಲು ಮತ್ತು ಒತ್ತಡದ ಈ ಯುಗದಲ್ಲಿ ಮಾನಸಿಕ ವ್ಯಾಧಿಗಳಿಂದ ಮುಕ್ತಿ ಹೊಂದಲು ಯೋಗ ಮತ್ತು ಆಯುರ್ವೇದ ಪದ್ಧತಿಯ ಜೀವನ ಶೈಲಿ ಅತ್ಯಂತ ಉಪಯುಕ್ತವಾಗಿದ್ದು ಸಾರ್ವಜನಿಕರು ಇದರ ಲಾಭವನ್ನು ಪಡೆಯಲು ಉತ್ತಮ ಅವಕಾಶ ನೀದಿರುವುದಕ್ಕೆ ಡಾ. ರಾಜಶ್ರೀ ಪ್ರಸನ್ನ ಕಟ್ಟಿ ಅವರಿಗೆ ಡಾ. ಸದಾನಂದ ಪೆರ್ಲ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.


ಆಯುರ್ವೇದಾಲಯದಲ್ಲಿ ಪಂಚಕರ್ಮ ಚಿಕಿತ್ಸೆ ಮಹಿಳೆಯರ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಕೀಲು ನೋವು ಮೊಣಕಾಲು ನೋವು, ಸಂಧಿ ವಾತ, ಬೆನ್ನು ನೋವು, ಸಿಯಾಟಿಕಾ, ವೆರಿಕೋಸ್ ವೇನ್ಸ್, ಚರ್ಮರೋಗ ಮುಂತಾದ ತೊಂದರೆಗಳಿಗೆ ಉಪಚಾರ ನೀಡುವ ಸೌಲಭ್ಯವನ್ನು ಆಯುರ್ವೇದಾಲಯ ದಲ್ಲಿ ಹೊಂದಲಾಗಿದೆ ಎಂದು ಡಾ. ರಾಜೇಶ್ರೀ ಪ್ರಸನ್ನ ಕಟ್ಟಿ ಈ ಸಂದರ್ಭದಲ್ಲಿ ತಿಳಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top