ಪುತ್ತೂರು: ನರಿಮೊಗರಿನ ಪಾದೆ ಎಂಬಲ್ಲಿರುವ ಪ್ರಸಾದಿನೀ ಅಯುರ್ನಿಕೇತನ ಆಯುರ್ವೇದ ಆಸ್ಪತ್ರೆಯ ಯೋಗ ಸಭಾಂಗಣದಲ್ಲಿ ಪ್ರತೀ ದಿನ ಸಂಜೆ 6 ಗಂಟೆಗೆ, ಜೂ.14ರ ಶುಕ್ರವಾರದಿಂದ ಜೂ.20ರ ಗುರುವಾರದ ತನಕ ಉಚಿತ ಯೋಗ ತರಬೇತಿ ನಡೆಯಲಿರುವುದು. ಯೋಗ ಶಿಕ್ಷಕರಾದ ಚಂದ್ರಶೇಖರ ಎನ್. ತರಬೇತಿ ನೀಡಲಿರುವರು.
ಜೂ.21ರ ಶುಕ್ರವಾರದಂದು ಯೋಗ ದಿನಾಚರಣೆಯ ನಿಮಿತ್ತ ಬೆಳಿಗ್ಗೆ 7 ಗಂಟೆಗೆ ಕಾರ್ಯಕ್ರಮವಿದೆ. ತರಬೇತಿಯು ಸರಳ ಆಸನ, ಪ್ರಾಣಾಯಾಮ ಹಾಗೂ ಧ್ಯಾನವನ್ನು ಒಳಗೊಂಡಿರುವುದು. ಪುರುಷರು ಮತ್ತು ಮಹಿಳೆಯರು ಭಾಗವಹಿಸಬಹುದು. "ಎಲ್ಲರೂ ಪಾಲ್ಗೊಳ್ಳಿ. ಯೋಗದ ಈ ಆನಂದದಲ್ಲಿ ನೀವೆಲ್ಲ ಭಾಗಿಗಳಾಗಿ. ಸುಖದುಃಖಮಯ ಜೀವನದಿಂದ ಆನಂದಮಯ ಜೀವನದೆಡೆಗೆ ಹೋಗುವ ದಾರಿಯೇ ಯೋಗ. ಅದುವೇ ಮಾನವನ ಗುರಿ ಆಗಿರಬೇಕು" ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕರು ಹಾಗೂ ಖ್ಯಾತ ಆಯುರ್ವೇದ ತಜ್ಞ ವೈದ್ಯರೂ ಆಗಿರುವ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ತಿಳಿಸಿದ್ದಾರೆ.
ಗೂಗಲ್ ಫಾರ್ಮ್ ತುಂಬಿ ನೋಂದಾಯಿಸಿಕೊಳ್ಳಲು, ಹೆಚ್ಚಿನ ಮಾಹಿತಿಗೆ ಮೊಬೈಲ್ ನಂಬರ್ 9740545979 ಸಂಪರ್ಕಿಸಲು ಕೋರಲಾಗಿದೆ. ತರಬೇತಿ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ