ಹೈಪರ್ ಟೆನ್ಷನ್ ನಿರ್ವಹಣೆ ಜಾಗೃತಿ

Upayuktha
0


ಮಂಗಳೂರು: ಹೃದಯಾಘಾತ, ಪಾರ್ಶ್ವ ವಾಯು ಮತ್ತು ಇತರ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುವ ಹೈಪರ್ ಟೆನ್ಷನ್ ಅಥವಾ ಅಧಿಕ ರಕ್ತದ ಒತ್ತಡ ಸಮಸ್ಯೆ ನಿರ್ವಹಣೆ ಬಗ್ಗೆ ಅದ್ಯತೆ ನೀಡುವಂತೆ ಕೇರ್ ಹೆಲ್ತ್ ಇನ್ಶೂರೆನ್ಸ್ ಜಾಗೃತಿ ಮೂಡಿಸುತ್ತಿದೆ.


ಫಾದರ್ಸ್ ಡೇ ಸಂದರ್ಭದಲ್ಲಿ ಹೈಪರ್ ಟೆನ್ಷನ್ ನಿರ್ವಹಣೆ ಮೂಲಕ ಪ್ರತಿಯೊಬ್ಬರೂ ತಮ್ಮ ತಂದೆಯ ಆರೋಗ್ಯಕ್ಕೆ ಆದ್ಯತೆ ನೀಡಬಹುದಾಗಿದೆ ಎಂದು ಕೇರ್ ಹೆಲ್ತ್ ಇನ್ಶೂರೆನ್ಸ್ ಮುಖ್ಯಸ್ಥ ಅಜಯ್ ಶಾ ಹೇಳಿದ್ದಾರೆ. ನಿಯತ ಮೇಲ್ವಿಚಾರಣೆ ಮತ್ತು ನಿರ್ವಹಣೆಯು ಅದರ ಗಂಭೀರ ಪರಿಣಾಮಗಳನ್ನು ತಡೆಗಟ್ಟಲು ಪ್ರಮುಖವಾಗಿದೆ. ಇದಕ್ಕಾಗಿಯೇ ವಿಶೇಷವಾಗಿ ರೂಪಿತವಾದ ಕೇರ್ ಸುಪ್ರೀಂ ಎಂಬ ಪಾಲಿಸಿ ಈ ನಿಟ್ಟಿನಲ್ಲಿ ಹಲವು ಪ್ರಯೋಜನಗಳನ್ನು ನೀಡುತ್ತದೆ ಎಂದು ವಿವರಿಸಿದ್ದಾರೆ.


ಕೇರ್ ಸುಪ್ರೀಮ್ ಮೊದಲೇ ಕಾಯಿಲೆಗಳನ್ನು ಹೊಂದಿರುವವರಿಗೂ ಸೂಕ್ತವಾಗುವಂತೆ ರೂಪಿತವಾಗಿದೆ ಮತ್ತು ಆರೋಗ್ಯ ತುರ್ತು ಸಂದರ್ಭಗಳಲ್ಲಿ ಅಗತ್ಯ ಕವರೇಜ್ ನೀಡುತ್ತದೆ. ಈ ಸಮಗ್ರ ಆರೋಗ್ಯ ವಿಮೆಯು ಕ್ಲೇಮ್‍ಗಳನ್ನು ಮಾಡಿದರು ಕೂಡಾ ಏಳು ಪಟ್ಟು ಅಧಿಕ ಕವರೇಜ್ ಒದಗಿಸುತ್ತದೆ. ಜತೆಗೆ ಆಧುನಿಕ ಅಥವಾ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಯಾವುದೇ ಉಪ ಮಿತಿಗಳನ್ನು ಹೊಂದಿರುವುದಿಲ್ಲ. ಕ್ಷೇಮ ಪ್ರಯೋಜನದ ಮೂಲಕ ನವೀಕರಣ ಪ್ರೀಮಿಯಂಗಳಲ್ಲಿ ಶೇಖಡ 30 ರ ವರೆಗೆ ರಿಯಾಯಿತಿಗಳನ್ನು ನೀಡುತ್ತದೆ ಮತ್ತು ನಿಯತವಾದ ಆರೋಗ್ಯ ತಪಾಸಣೆಗಳನ್ನು ಸೌಲಭ್ಯವನ್ನು ಒಳಗೊಂಡಿರುತ್ತದೆ. ಜತೆಗೆ ಪಾಲಿಸಿದಾರರು ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಸಶಕ್ತರನ್ನಾಗಿ ಮಾಡುತ್ತದೆ ಎಂದು ತಿಳಿಸಿದ್ದಾರೆ.


ಕಳೆದ ಎಂಟು ವರ್ಷಗಳಲ್ಲಿ ಪುರುಷರಲ್ಲಿ ಅಧಿಕ ರಕ್ತದ ಒತ್ತಡ ಸಮಸ್ಯೆ ಶೇಕಡ 6.9ರಷ್ಟು ಹೆಚ್ಚಿದೆ. ರಕ್ತದ ಅಧಿಕ ಒತ್ತಡ ಹೃದಯ, ಮೂತ್ರಪಿಂಡಗಳು ಮತ್ತು ಇತರ ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲೇ ರಕ್ತದೊತ್ತಡ ಸಮಸ್ಯೆಯ ಪರಿಣಾಮಕಾರಿ ನಿರ್ವಹಣೆಗೆ ಅಗತ್ಯವಿರುವ ಸಂಪನ್ಮೂಲ ಮತ್ತು ಬೆಂಬಲವನ್ನು ಒದಗಿಸಲಾಗುತ್ತದೆ ಎಂದು ಹೇಳಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top