ಹಿಂದೂ ರಾಷ್ಟ್ರಕ್ಕೆ ಜನಾಂದೋಲನದ ಸ್ವರೂಪ ನೀಡುವ ಹಿಂದೂ ರಾಷ್ಟ್ರ ಅಧಿವೇಶನ

Upayuktha
0

ಜೂನ್ 24 ರಿಂದ 30, 2024 ಈ ಸಮಯದಲ್ಲಿ ನಡೆಯುವ 'ವೈಶ್ವಿಕ ಹಿಂದೂ  ರಾಷ್ಟ್ರ ಮಹೋತ್ಸವ'ದ ಪ್ರಯುಕ್ತ ವಿಶೇಷ ಲೇಖನ ಮಾಲಿಕೆ




ಕೆಲವು ವರ್ಷಗಳ ಹಿಂದೆ `ಹಿಂದೂ ರಾಷ್ಟ್ರ' ಈ ಶಬ್ದದ ಉಚ್ಚಾರಣೆಯೂ ಅಪರಾಧವೆಂಬ ಪರಿಸ್ಥಿತಿಯಿತ್ತು; ಆದರೆ ಈಗ ಹಿಂದೂ ರಾಷ್ಟçದ ಚರ್ಚೆ ಕೇವಲ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಕೇಳಿ ಬರುತ್ತಿದೆ. ಇದು ಕಾಲದ ಮಹಿಮೆಯೇ ಆಗಿದೆ. ಯಾವುದಾದರೂ ಘಟನೆ ಸ್ಥೂಲದಲ್ಲಿ ಘಟಿಸುವ ಮೊದಲು ಸೂಕ್ಷ್ಮದಲ್ಲಿ ಘಟಿಸಿರುತ್ತದೆ, ಎಂದು ಶಾಸ್ತ್ರ ಹೇಳುತ್ತದೆ. ರಾಮಾಯಣ ಘಟಿಸುವ ಮೊದಲೇ ಅದನ್ನು ವಾಲ್ಮೀಕಿ ಋಷಿಗಳು ಬರೆದಿದ್ದರು. ಶ್ರೀರಾಮ ಮಂದಿರದ ನಿರ್ಮಾಣವೆಂದರೆ ಸೂಕ್ಷ್ಮದಲ್ಲಿ ರಾಮರಾಜ್ಯದ ಅಂದರೆ `ಹಿಂದೂ ರಾಷ್ಟ್ರ'ದ ಪ್ರಾರಂಭವೇ ಆಗಿದೆ. ಯಾವ ಶ್ರೀರಾಮನಿಗಾಗಿ ವಿಶ್ವಾದ್ಯಂತದ ಹಿಂದೂ ಭಕ್ತರು ಜಾತಿ-ಪಂಥ-ಪಕ್ಷ-ಸಂಪ್ರದಾಯ ಮುಂತಾದ ಎಲ್ಲಾ ಭೇದಗಳನ್ನು ಮರೆತು ಉತ್ಸಾಹದಲ್ಲಿ ಒಂದಾದರೋ, ಅದೇ ರೀತಿಯ ಸಂಘಟನೆ, ಸಮರ್ಪಣೆ ಹಿಂದೂ ರಾಷ್ಟç ಸ್ಥಾಪನೆಗಾಗಿ ಆಗಬೇಕಿದೆ. ಹಿಂದೂ ರಾಷ್ಟçದ  ಘೋಷಣೆ ಜನಸಾಮಾನ್ಯರ ಮನತಲುಪುವಲ್ಲಿ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ದೊಡ್ಡ ಪಾತ್ರ ವಹಿಸಿದೆ. ಹಾಗೆಯೇ ಈಗಿನ ವ್ಯವಸ್ಥೆಯಲ್ಲಿ  ಹಿಂದೂ ಹಿತದಲ್ಲಿ ಬದಲಾವಣೆಗಳಾಗಲು ಅಧಿವೇಶನದ ಮಹತ್ವಪೂರ್ಣ ಸಹಭಾಗವಿದೆ. ಇಂದು `ಸಿಎಎ'(ಪೌರತ್ವ ತಿದ್ದುಪಡಿ ಕಾಯಿದೆ) ಜಾರಿಯಾಗಿದೆ. ಹಿಂದೂ ನಿರಾಶ್ರಿತರಿಗೆ ಭಾರತೀಯ ನಾಗರಿಕತ್ವ ನೀಡುವ ಸಂದರ್ಭದಲ್ಲಿ ಮೊದಲ ಅಧಿವೇಶನದಿಂದಲೇ  ಸರ್ವಾನುಮತದಿಂದ  ಠರಾವನ್ನು (ನಿರ್ಣಯವನ್ನು)  ಅಂಗೀಕರಿಸಲಾಗಿತ್ತು. ಈ ಕಾನೂನಿನ ಕರಡನ್ನು ನಿರ್ಧರಿಸಲು ಕೇಂದ್ರ ಸರಕಾರ ಆಯೋಜಿಸಿದ್ದ ಸಭೆಗೆ ಹಿಂದೂ ಜನಜಾಗೃತಿ ಸಮಿತಿಯನ್ನು ಆಹ್ವಾನಿಸಲಾಗಿತ್ತು. 


ಅದರೊಂದಿಗೆ ಲವ್ ಜಿಹಾದ್ ಮತ್ತು ಹಲಾಲ್ ಜಿಹಾದ್ ವಿರುದ್ಧ ಅಧಿವೇಶನದಲ್ಲಿ ಚಿಂತನ-ಮಂಥನ ನಡೆಸಿ ಕ್ರಿಯಾಯೋಜನೆಯನ್ನು ಅಂತಿಮಗೊಳಿಸಿದ ಬಳಿಕ, ಇಂದು ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನುಗಳನ್ನು ರಚಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಹಲಾಲ್ ಉತ್ಪಾದನೆಗಳ ಮೇಲೆ ನಿಷೇಧ ಹೇರಲಾಗಿದೆ. ಕೇಂದ್ರ ಸರ್ಕಾರವು 'APEDA' (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪಾದನಾ ರಫ್ತು ಅಭಿವೃದ್ಧಿ ಪ್ರಾಧಿಕಾರ) ನಿಯಮಗಳಿಗೆ ತಿದ್ದುಪಡಿ ಮಾಡಿ, ಮಾಂಸ ಉತ್ಪಾದಕರು ಮತ್ತು ರಫ್ತುದಾರರಿಗೆ ಸೀಮಿತವಾಗಿದ್ದ 'ಹಲಾಲ್' ಶಬ್ದವನ್ನು ತೆಗೆದುಹಾಕಿದೆ. ಇದರೊಂದಿಗೆ ಅಧಿವೇಶನದಲ್ಲಿ ರಚನೆಯಾದ ಹಿಂದೂ ವಿಧಿಜ್ಞ ಪರಿಷತ್ತು ಸರಕಾರೀಕರಣವಾಗಿರುವ  ದೇವಸ್ಥಾನಗಳ ಭ್ರಷ್ಟಾಚಾರವನ್ನು ಬಹಿರಂಗಪಡಿಸಿತು. ಇಂದು, ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಹಿಂದೂ ವಿರೋಧಿ ಘಟನೆಗಳನ್ನು ತಡೆಯಲು ಚಿಂತನ-ಮAಥನ ನಡೆದು, ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು, ತದನಂತರ ಸರಿಸುಮಾರು 1 ಸಾವಿರಕ್ಕಿಂತ ಅಧಿಕ ದೇವಸ್ಥಾನಗಳಲ್ಲಿ ವಸ್ತçಸಂಹಿತೆ ಜಾರಿಯಾಗಿದೆ. ಕರ್ನಾಟಕದಲ್ಲಿ ದೇವಸ್ಥಾನಗಳಿಂದ ತೆರಿಗೆ ವಿಧಿಸುವ ನಿರ್ಧಾರವನ್ನು ರಾಜ್ಯ ಸರಕಾರ ರದ್ದುಗೊಳಿಸಬೇಕಾಯಿತು.


ಈ ಅಧಿವೇಶನದಲ್ಲಿ ದೇಶ-ವಿದೇಶಗಳ ಹಿಂದುತ್ವನಿಷ್ಠರು, ಹಾಗೆಯೇ ರಾಷ್ಟ್ರನಿಷ್ಠ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದು ಹಿಂದೂ ರಾಷ್ಟ್ರದ ಕಾರ್ಯಕ್ಕೆ ವೇಗ ನೀಡುತ್ತಿದ್ದಾರೆ. ಇದರ ಫಲವಾಗಿ ಇದುವರೆಗೆ ನಡೆದ ಅಧಿವೇಶನಗಳ ಮೂಲಕ 1000ಕ್ಕೂ ಹೆಚ್ಚು ಹಿಂದೂಪರ ಸಂಘಟನೆಗಳು ಸಂಘಟಿತರಾಗಿದ್ದಾರೆ, ಹಿಂದೂ ರಾಷ್ಟ್ರದ ಜಾಗೃತಿ ಮೂಡಿಸುವ  1800ಕ್ಕೂ ಹೆಚ್ಚು ಆಂದೋಲನಗಳು ನಡೆದಿವೆ,  2000ಕ್ಕೂ ಹೆಚ್ಚು ವ್ಯಾಖ್ಯಾನಗಳು, ಪ್ರಾಂತೀಯ ಮಟ್ಟದಲ್ಲಿ 200ಕ್ಕೂ ಹೆಚ್ಚು ಹಿಂದೂ ರಾಷ್ಟ್ರ ಅಧಿವೇಶನಗಳು ನಡೆದಿವೆ. ಹಿಂದೂ ರಾಷ್ಟ್ರ ಆಂದೋಲನವು ಜನಸಾಮಾನ್ಯರವರೆಗೆ ತಲುಪುವಲ್ಲಿ  ಹಿಂದೂ ರಾಷ್ಟ್ರ ಅಧಿವೇಶನದ ಪಾಲಿದೆ. ಇಂದು ಜಾಗತಿಕ ಮಟ್ಟದಲ್ಲಿ ಹಿಂದೂ ಪರಿಷತ್ತು ಆಯೋಜಿಸಲಾಗುತ್ತಿದೆ. ಆಧ್ಯಾತ್ಮಿಕ ಮಹೋತ್ಸವಗಳನ್ನು ಆಚರಿಸಲಾಗುತ್ತಿದೆ. ಸೈದ್ಧಾಂತಿಕ, ಸಾಂವಿಧಾನಿಕ ಹಾಗೆಯೇ ಕೃತಿಯ ಸ್ತರದಲ್ಲಿ ಹಿಂದೂ ರಾಷ್ಟ್ರದ ಬೀಜ ಬಿತ್ತುವುದರಲ್ಲಿ ಅಧಿವೇಶನದ ಮಹತ್ವದ ಪಾಲಿದೆ. `ಸಾಮರ್ಥ್ಯವಿದೆ ಚಳುವಳಿಯಲ್ಲಿ; ಆದರೆ ಅಲ್ಲಿ ಭಗವಂತನ ಅಧಿಷ್ಠಾನವಿರಬೇಕು' ಈ ಉಕ್ತಿಯಂತೆ ಸಂತರ ಆಶೀರ್ವಾದ ಮತ್ತು ಈಶ್ವರನ ಕೃಪೆಯಿಂದ ಈ ಅಧಿವೇಶನ ಯಶಸ್ವಿಯಾಗುತ್ತಿದೆ. 


ಈ ಬಾರಿಯ ಅಧಿವೇಶನ :  ಈ ಸಲ  ಜೂನ್ 24 ರಿಂದ 30 ರ ಕಾಲಾವಧಿಯಲ್ಲಿ ಗೋವಾದ ಫೋಂಡಾದಲ್ಲಿ 'ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ' ಅಂದರೆ ಹನ್ನೆರಡನೇ 'ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ' ನಡೆಯಲಿದೆ. ಸನಾತನ ಧರ್ಮದ ಸೈದ್ಧಾಂತಿಕ ರಕ್ಷಣೆ, ಹಿಂದೂ ಸಮಾಜದ ರಕ್ಷಣೆಯ ಉಪಾಯಗಳು, ಹಿಂದೂ ರಾಷ್ಟ್ರಕ್ಕಾಗಿ ಸಾಂವಿಧಾನಿಕ ಪ್ರಯತ್ನಗಳು, ದೇವಸ್ಥಾನ ಸಂಸ್ಕೃತಿಯನ್ನು ರಕ್ಷಿಸುವ ಕ್ರಮಗಳು, ಜಾಗತಿಕ ಮಟ್ಟದಲ್ಲಿ ಹಿಂದುತ್ವದ ರಕ್ಷಣೆ ಈ ಅಧಿವೇಶನದ ಪ್ರಮುಖ ಅಂಶಗಳಾಗಿವೆ. ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ,  ತಮಿಳುನಾಡಿನ ಹಿಂದೂ ಮಕ್ಕಳ ಕಚ್ಛಿ ಈ  ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ  ಅರ್ಜುನ ಸಂಪತ್, ಭಾಜಪದ ಹಿಂದುತ್ವನಿಷ್ಠ ಶಾಸಕ ಟಿ. ರಾಜಾಸಿಂಗ್, ಕಾಶಿ-ಮಥುರಾ ದೇಗುಲಗಳ ಮುಕ್ತಿಗಾಗಿ ಕಾನೂನು ಹೋರಾಟ ನಡೆಸುತ್ತಿರುವ ಸುಪ್ರೀಂ ಕೋರ್ಟ್ ವಕೀಲ ವಿಷ್ಣುಶಂಕರ ಜೈನ್ ಮೊದಲಾದ ಗಣ್ಯರು ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಅಧಿವೇಶನವನ್ನು ಹಿಂದೂ ಜನಜಾಗೃತಿ ಸಮಿತಿಯ www.hindujagruti.org ಈ ಜಾಲತಾಣದಿಂದ  ಆನ್‌ಲೈನ್ ವೀಕ್ಷಿಸಬಹುದು.  ಸಂತೋಷ-ಸಮಾಧಾನಿ-ಸುರಕ್ಷಿತ ಜೀವನಕ್ಕಾಗಿ ಹಿಂದೂ ರಾಷ್ಟ್ರವೊಂದೇ `ಗ್ಯಾರಂಟಿ' ಯಾಗಿರುವುದರಿಂದ ಹಿಂದೂ ರಾಷ್ಟ್ರದ ಚಳುವಳಿಯಲ್ಲಿ ಎಲ್ಲರೂ ಭಾಗವಹಿಸಿ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top