ಹಾಸನ: ಹಾಸನದ ಕಲಾಭವನದಲ್ಲಿ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಸಾಂಸ್ಕೃತಿಕ ಕಲಾಸಂಘ ಮತ್ತು ಶ್ರೀ ಅನ್ನಪೂರ್ಣೆಶ್ವರಿ ಕಲಾಸಂಘ ಇವರಿಂದ ಏರ್ಪಡಿಸಿರುವ 2ನೇ ವರ್ಷದ ನಾಟಕೋತ್ಸವದಲ್ಲಿ 10 ಕಲಾತಂಡಗಳು ಹತ್ತು ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಿವೆ. ಭಾನುವಾರ ಹಾಸನ ಚನ್ನಪಟ್ಟಣದ ದ್ಯಾವಮ್ಮ ಕೃಪಾಪೋಷಿತ ನಾಟಕ ಮಂಡಳಿಯವರು ಬೆಳ್ಳೂರು ಕ್ರಾಸ್ ಡಿ.ಎಂ.ಮಂಜುನಾಥ್ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು. ಕೃಷ್ಣನ ಪಾತ್ರದಲ್ಲಿ ಸಿಗರನಹಳ್ಳಿ ಚಂದ್ರಶೇಖರ್ ಮತ್ತು ಕರ್ಣನ ಪಾತ್ರದಲ್ಲಿ ಸುಳುಗೋಡು ಲಕ್ಷ್ಮಣ ನಟಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ