ಹಾಸನ: ನಮ್ಮ ಭೂಮಿ ನಮ್ಮ ಭವಿಷ್ಯ ಎಂಬ ಮಾತು ಅತೀ ಅಗತ್ಯವಾಗಿದೆ. ಭವಿಷ್ಯದ ಜನಾಂಗದ ಉಳಿವು ಇಂದಿನ ಜನಾಂಗದ ಕರ್ತವ್ಯವಾಗಿದೆ. ಅದಕ್ಕಾಗಿ ನಾವು ಸಸ್ಯ ಸಂಪತ್ತನ್ನು ಉಳಿಸುವತ್ತು ಇಂದಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸಬೇಕು.
ಶಾಲೆಯಲ್ಲಿ ಪೂರ್ವ ಸಿದ್ಧತಾ ಕಾರ್ಯಕ್ರಮಗಳು ವಾರ್ಷಿಕ ಶೈಕ್ಷಣಿಕ ಮಾರ್ಗಸೂಚಿಯಂತೆ ನಡೆಯುಬೇಕು. ಮಕ್ಕಳ ಕಲಿಕೆಯನ್ನು ದೃಢೀಕರಿಸಲು ದಾಖಲೆಗಳು ಪ್ರಮುಖವಾಗಿರುವುದರಿಂದ ಅವುಗಳ ನಿರ್ವಹಣೆ ಸೂಕ್ತ ರೀತಿಯಲ್ಲಿ ಇರಬೇಕು ಎಂದು ಜಿಲ್ಲಾ ಉಪನಿರ್ದೇಶಕರ ಕಛೇರಿಯ ಶಿಕ್ಷಣಾಧಿಕಾರಿ ಹೆಚ್.ಬಿ.ಮೋಹನ್ ಕುಮಾರ್, ಶಿಕ್ಷಣಾಧಿಕಾರಿ ಜೆ.ಬಿ.ತಮ್ಮಣ್ಣ ಗೌಡರು ಮತ್ತು ವಿಷಯ ಪರಿವೀಕ್ಷಕರಾದ ಬಿ.ಎನ್. ಕಾಂತರಾಜ್ ಮತ್ತು ಶೇಖರೇಗೌಡ ರವರ ತಂಡವು ಮಾರ್ಗದರ್ಶನ ನೀಡಿತು.
ನಗರದ ವಿದ್ಯಾನಗರ ಸರ್ಕಾರಿ ಪ್ರೌಢಶಾಲೆಗೆ ಅನಿರೀಕ್ಷಿತ ಭೇಟಿ ನೀಡಿದ ಶಿಕ್ಷಣಾಧಿಕಾರಿಗಳು ಮತ್ತು ವಿಷಯ ಪರಿವೀಕ್ಷಕರ ತಂಡವು ಶಾಲೆಯಲ್ಲಿ ಪೂರ್ವಸಿದ್ಧತಾ ಕ್ರಮಗಳನ್ನು ಪರಿಶೀಲಿಸಿ ಮೆಚ್ಚಿಗೆ ವ್ಯಕ್ತಪಡಿಸಿತು ಹಾಗೂ ಮಾರ್ಗದರ್ಶನ ನೀಡಿತು. ಮುಖ್ಯ ಶಿಕ್ಷಕರ ಸಭೆಯಲ್ಲಿ ಈಗಾಗಲೇ ತಿಳಿಸಿರುವಂತೆ ಜೂನ್ 5 ರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಕನಿಷ್ಠ ಇಪ್ಪತ್ತು ಸಸಿಗಳನ್ನಾದರೂ ನೆಡಬೇಕು ಎಂಬ ಉಪನಿರ್ದೇಶಕರ ಆದೇಶಾನುಸಾರ ಇಂದು ಶಾಲೆಯಲ್ಲಿ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಶಾಲಾ ಪರಿಸರ, ಶೈಕ್ಷಣಿಕ ವಾತಾವರಣ, ತರಗತಿ ಕೊಠಡಿಗಳ ಸ್ವಚ್ಚತೆ, ವಿವಿಧ ರೀತಿಯ ವೇಳಾಪಟ್ಟಿಗಳು, ವಾರ್ಷಿಕ ಕಾರ್ಯ ಹಂಚಿಕೆ, ಅಕ್ಷರ ದಾಸೋಹ ಕಾರ್ಯಕ್ರಮದ ಸಿದ್ಧತೆ ಹಾಗೂ ಶೌಚಾಲಯ ವ್ಯವಸ್ಥೆಗಳನ್ನು ಸಮಗ್ರ ಅಧ್ಯಯನದ ರೀತಿಯಲ್ಲಿ ಪರಿಶೀಲಿಸಿ ಮಾರ್ಗದರ್ಶನ ನೀಡಿದರು. ಪ್ರಸ್ತುತ 2024 - 25 ನೇ ವರ್ಷವು " *ಶೈಕ್ಷಣಿಕ ಬಲವರ್ಧನೆ ವರ್ಷ * " ಆಗಿರುವುದರಿಂದ ಈ ವರ್ಷದಲ್ಲಿ ಮಕ್ಕಳ ದಾಖಲಾತಿಗೆ ಹೆಚ್ಚಿನ ಆದ್ಯತೆ ಮತ್ತು ಗುಣ ಮಟ್ಟದ ಕಲಿಕೆಗೆ ಆದ್ಯತೆ ನೀಡಿ ಎಲ್ಲಾ ಶಿಕ್ಷಕರೂ ಶಾಲಾಭಿವೃದ್ಧಿಗೆ ಪೂರಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಉಚಿತ ಸಮವಸ್ತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಶಶಿಧರ್ ದೈಹಿಕ ಶಿಕ್ಷಣ ಶಿಕ್ಷಕರಾದ ಚಕ್ರಪಾಣಿ ಗಣಿತ ವಿಷಯ ಶಿಕ್ಷಕರಾದ ಗಾಯಿತ್ರಿ ಹಾಗೂ ಇಂಗ್ಲಿಷ್ ಭಾಷಾ ವಿಷಯ ಶಿಕ್ಷಕರಾದ ಕಮಲಾಕ್ಷ ಮುಂತಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ