ಗೋವಿಂದ ದಾಸ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಶಿಬಿರ

Upayuktha
0


ಸುರತ್ಕಲ್‌: ರೆಡ್‌ಕ್ರಾಸ್ ಸಂಸ್ಥೆಯು ಸಮಾಜ ಸೇವೆಯ ಗುರಿಯನ್ನು ಹೊಂದಿದ್ದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಜಗತ್ತಿನಾದ್ಯಂತ ಸೇವೆಸಲ್ಲಿಸುತ್ತಿದೆ. ಅದರ ಅಂಗಸಂಸ್ಥೆಯಾದ  ಯುವ ರೆಡ್ ಕ್ರಾಸ್ ಸಂಸ್ಥೆಯು ಯುವ ಜನರನ್ನು ಸಮಾಜ ಸೇವೆಯತ್ತ ಆಕರ್ಷಿಸುವಂತೆ ಮಾಡಿದೆ ಎಂದು ಹಿಂದೂ ವಿದ್ಯಾದಾಯಿನೀ ಸಂಘ (ರಿ), ಸುರತ್ಕಲ್‌ನ ಕಾರ್ಯದರ್ಶಿ ಶ್ರೀರಂಗ ಹೆಚ್ ನುಡಿದರು. ಅವರು ಗೋವಿಂದ ದಾಸ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.


ದ.ಕ ಜಿಲ್ಲಾ ಐ.ಆರ್.ಸಿ.ಎಸ್ ನ ಪಿ.ಸಿ.ಎಂ ಸದಸ್ಯ ಸಚೇತ್ ಸುವರ್ಣ ಯುವ ರೆಡ್ ಕ್ರಾಸ್ ಘಟಕದ ಧ್ಯೇಯ ಉದ್ದೇಶಗಳನ್ನು ವಿವರಿಸಿದರು.


ಜಿಲಾ ವಿಪತ್ತು ನಿರ್ವಹಣಾ ಉಪಸಮಿತಿಯ ಅಧ್ಯಕ್ಷ ಮತ್ತು ಜಿಲ್ಲಾ ಪ್ರತಿನಿಧಿ ಯತೀಶ್ ಬೈಕಂಪಾಡಿಯವರು ಆಕಸ್ಮಿಕ ಪ್ರಕೃತಿ ವಿಕೋಪಗಳಾದಾಗ ತ್ವರಿತವಾಗಿ ಸರಳ ತಂತ್ರಗಳ ಮೂಲಕ ಕಾರ್ಯ ಪ್ರವೃತ್ತರಾಗುವುದರಿಂದ  ಹೆಚ್ಚಿನ ಹಾನಿ ಸಂಭವಿಸುವುದನ್ನು ತಪ್ಪಿಸಬಹುದೆಂದರು.


ಐ.ಆರ್.ಸಿ.ಎಸ್. ಸದಸ್ಯ ಶ್ರೀಕಾಂತ್ ಮತ್ತು ಕಾಲೇಜಿನ ಉಪಪ್ರಾಂಶುಪಾಲ ಪ್ರೊ. ನೀಲಪ್ಪ ವಿ. ಶುಭ ಹಾರೈಸಿದರು.


ಯುವ ರೆಡ್‌ಕ್ರಾಸ್ ಘಟದ ಸಂಯೋಜಕರಾದ ಪೂರ್ಣಿಮಾ  ಗೋಖಲೆ ಸ್ವಾಗತಿಸಿ ಅಶ್ವಿನಿ ವಂದಿಸಿದರು. ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.


ಸಚಿತ್ ಸುವರ್ಣ ಪ್ರಥಮ ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಜನಾರ್ಧನ್ ಕೆ. ಮತ್ತು ಓಬಯ್ಯ ಮೂಲ್ಯ ಅಗ್ನಿ ಶಾಮಕ ದಳದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಡಾ. ಅಜಿತೇಶ್ ನೆರಿಯಾರು ಯೋಗ ಮತ್ತು ಜ್ಞಾನದ ಮಹತ್ವದ ಬಗ್ಗೆ ಉಪನ್ಯಾಸ ನೀಡಿದರು. ಬಿ.ಎಂ. ತಿರುಮಲೇಶ್ ಮತ್ತು ತಂಡದವರು ಅಗ್ನಿ ಅನಾಹುತಗಳಿಂದ ಪಾರಾಗುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು. ಗೌರವ್ ಮತ್ತು ಯತೀಶ್ ಬೈಕಂಪಾಡಿಯವರು ಸಸಿಹಿತ್ಲು ಸಮುದ್ರ ತೀರದಲ್ಲಿ ಸರ್ಫಿಂಗ್ ಬಗ್ಗೆ ಮಾಹಿತಿ ನೀಡಿದರು.


ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ಶಿಬಿರದಲ್ಲಿ ವಿದ್ಯಾರ್ಥಿಗಳು ಅನೇಕ ಜೀವರಕ್ಷಣ ಕಲೆಗಳನ್ನು ಕಲಿತಿದ್ದು ಮುಂದಿನ ಜೀವನಕ್ಕೆ ಸಹಾಯವಾಗುತ್ತದೆ ಎಂದರು. 


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಯುವ ರೆಡ್ ಕ್ರಾಸ್ ಶಿಬಿರವು ವಿದ್ಯಾರ್ಥಿಗಳಿಗೆ ಮುಂದಿನ ಬದುಕಿಗೆ ಬೇಕಾದ ಆತ್ಮಸ್ಥೆöÊರ್ಯ, ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುವ ಮನೋಬಲವನ್ನು ನೀಡುತ್ತದೆ ಎಂದರು.


ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ. ವಿದ್ಯಾರ್ಥಿಗಳು ಈ ಶಿಬಿರದಲ್ಲಿ ಪಡೆದ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಶಿಬಿರದ ಮೌಲ್ಯವು ಹೆಚ್ಚುತ್ತದೆ ಎಂದರು.


ಯುವ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿ ಜನ್ಯ ಶಿಬಿರದ ವರದಿಯನ್ನು ವಾಚಿಸಿದರು.


ವರ್ಷ ಸ್ವಾಗತಿಸಿದರು. ಕಿಶನ್ ವಂದಿಸಿದರು. ಸಿಂಚನ ಕಾರ್ಯಕ್ರಮ ನಿರೂಪಿಸಿದರು.


ಯುವ ರೆಡ್‌ಕ್ರಾಸ್ ಘಟಕದ ಕಾರ್ಯದರ್ಶಿಗಳಾದ ದಿಯಾ ರವಿ ಹೊನ್ನಿ, ದಾಮೋದರ್ ಮತ್ತು ಹರೀಶ್ ಉಪಸ್ಥಿತರಿದ್ದರು.


ಸ್ಕಂದ ಐತಾಳ್ ಉತ್ತಮ ಶಿಬಿರಾರ್ಥಿ ಪ್ರಶಸ್ತಿ ಮತ್ತು ಜನ್ಯ, ದಾಮೋದರ, ಸುಮಂತ್ ಭಟ್, ಕಿಶನ್ ಮತ್ತು ಸೃಷ್ಟಿ ಕ್ರಿಯಾಶೀಲ ಶಿಬಿರಾರ್ಥಿ ಪ್ರಶಸ್ತಿಯನ್ನು ಪಡೆದುಕೊಂಡರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top