ಪಣಜಿ: "ಯೋಗ ನಮಗಾಗಿ ಯೋಗ ಸಮಾಜಕ್ಕಾಗಿ" ಈ ವರ್ಷದ ಯೋಗ ದಿನದ ವಿಷಯವಾಗಿದೆ. ಅದರಂತೆಯೇ ರಾಜ್ಯಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ರವರು ಯೋಗದ ಪ್ರಾಚೀನ ಕೊಡುಗೆಯನ್ನು ಜಗತ್ತಿಗೆ ಹೇಳಿದ್ದಾರೆ. ಮೊದಲು ಭಾರತವು ಕೆಲವು ವಿಷಯಗಳಿಗೆ ಮಾತ್ರ ಹೆಸರುವಾಸಿಯಾಗಿತ್ತು. ಆದರೆ ಈಗ ಭಾರತವು ಯೋಗ ಮತ್ತು ಆಯುರ್ವೇದಕ್ಕೆ ಹೆಸರುವಾಸಿಯಾಗಿದೆ. ಪ್ರಧಾನಿ ಮೋದಿಯವರ ಪ್ರಯತ್ನದಿಂದಾಗಿ ಸುಮಾರು 180 ದೇಶಗಳು ಇಂದು ಯೋಗ ದಿನವನ್ನು ಆಚರಿಸುತ್ತಿವೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಗೋವಾ ರಾಜ್ಯ ಸರ್ಕಾರದ ವತಿಯಿಂದ ಜೂನ್ 21 ರಂದು ಶುಕ್ರವಾರ ರಾಜ್ಯದ ವಿವಿಧೆಡೆ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಯೋಗ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಪ್ರಮೋದ ಸಾವಂತ್, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಸೇರಿದಂತೆ ಸಚಿವರು, ಶಾಸಕರು ಹಾಜರಿದ್ದು ತಮ್ಮ ತಮ್ಮ ಕ್ಷೇತ್ರದಲ್ಲಿ ಯೋಗ ದಿನಾಚರಣೆಯನ್ನು ನಡೆಸಿಕೊಟ್ಟರು. ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮುಖ್ಯಮಂತ್ರಿ ಸಾವಂತ್ ಮಾತನಾಡಿದರು.
ರಾಜ್ಯ ಸರ್ಕಾರದ ವತಿಯಿಂದ ಯೋಗ ದಿನಾಚರಣೆಯ ಮುಖ್ಯ ಕಾರ್ಯಕ್ರಮ ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂನಲ್ಲಿ ಬೆಳಿಗ್ಗೆ 6.30 ರಿಂದ 8.30 ರವರೆಗೆ ನಡೆಯಿತು. ಮುಖ್ಯಮಂತ್ರಿ ಪ್ರಮೋದ ಸಾವಂತ್ ಈ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವಿವಿಧ ತಾಲೂಕುಗಳಲ್ಲಿ ಬೆಳಿಗ್ಗೆ 7.30 ರಿಂದ 9.30 ರ ವರೆಗೆ ಯೋಗ ಕಾರ್ಯಕ್ರಮವನ್ನು ನಡೆಸಲಾಯಿತು.
ಆರೋಗ್ಯಕರ ಮತ್ತು ಸದೃಢ ಜೀವನಕ್ಕೆ ಯೋಗ ಬಹಳ ಮುಖ್ಯ. ಕೋವಿಡ್ ನಂತರ ನಾವು ಆರೋಗ್ಯದ ಕಾಳಜಿ ಬಗ್ಗೆ ತುಂಬಾ ಗಂಭೀರವಾಗಿದ್ದೇವೆ. ನಿಯಮಿತ ಯೋಗಾಭ್ಯಾಸ ಮಾಡುವವರು ಮಾತ್ರ ಕೋವಿಡ್‍ನಂತಹ ರೋಗದ ವಿರುದ್ಧ ಹೋರಾಡಬಹುದು. ಇದರಿಂದ ಯೋಗ ನಮ್ಮ ಜೀವನದಲ್ಲಿ ಎಷ್ಟು ಮುಖ್ಯ ಎಂದು ತೋರಿಸಿಕೊಡುತ್ತದೆ. ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಮಧುಮೇಹ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಇಂತಹ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು, ಇದರಿಂದ ದೇಹದಲ್ಲಿ ವಿಭಿನ್ನ ಶಕ್ತಿಯ ಸೃಷ್ಠಿಯಾಗುತ್ತದೆ. ಇದು ಜೀವನದಲ್ಲಿ ಅತ್ಯಂತ ಯಶಸ್ವಿಯಾಗಲು ಸಹಾಯ ಮಾಡುತ್ತದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ

