ಪಾಣಾಜೆ ಸುಬೋಧ ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘ ರಚನೆ

Upayuktha
0


ಪಾಣಾಜೆ :
ಪಾಣಾಜೆ ಸುಬೋಧ ಪ್ರೌಢಶಾಲೆಯಲ್ಲಿ ಶಾಲಾ ಸಂಚಾಲಕ ಗಿಳಿಯಾಲು ಮಹಾಬಲೇಶ್ವರ ಭಟ್ಟರ ಅಧ್ಯಕ್ಷತೆಯಲ್ಲಿ ಮಕ್ಕಳ ಪೋಷಕರ ಸಭೆ ಜೂ 29ರಂದು ನಡೆಯಿತು. ಸಭೆಯಲ್ಲಿ  2024-2025ನೇ ಸಾಲಿನ ರಕ್ಷಕ ಶಿಕ್ಷಕ ಸಂಘ ಹಾಗೂ ಇತರ ಸಮಿತಿಗಳನ್ನು ರಚಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶಾಲಾ ಹಿರಿಯ ವಿದ್ಯಾರ್ಥಿ,ಡಾ. ಅಬೂಬಕ್ಕರ್ ಆರ್ಲಪದವು, ಉಪಾಧ್ಯಕ್ಷರಾಗಿ ಶಶಿಕಲ ಗುವೆಲುಗದ್ದೆ ಹಾಗೂ ಕಾರ್ಯದರ್ಶಿಯಾಗಿ ಜಯಶ್ರೀ ದೇವಸ್ಯ ಆಯ್ಕೆಯಾದರು. ಸದಸ್ಯರುಗಳಾಗಿ ಶ್ರೀಧರ ಮಣಿಯಾಣಿ ದೇವಸ್ಯ, ಆನಂದಿ ಮಾಯಿಲಕಾನ, ಇಸ್ಮಾಯಿಲ್ ಜೆ. ಎಸ್ ಜಾಲಗದ್ದೆ, ಶಶಿಧರ ಪಾಲ್ತಮೂಲೆ,  ಸುಜಾತ ಕೊಂದಲಡ್ಕ, ಸುಮತಿ ಅರ್ಧಮೂಲೆ, ನಳಿನಿ ಉದಯಗಿರಿ, ಬಾಲಗೋಪಾಲ ಗುವೆಲುಗದ್ದೆ, ಮೈಮೂನ ಆರ್ಲಪದವು, ಹಾಗೂ ಶಶಿಕಲ ಅರ್ಧಮೂಲೆ ಆಯ್ಕೆಯಾದರು.


 ತಾಯಂದಿರ ಸಮಿತಿ:

 ಪುಷ್ಪಲತ ಗುವೆಲುಗದ್ದೆ, ಲಲಿತ   ಸೂರಂಬೈಲ್, ಸೀತಾ ಕಾಕೆಕೊಚ್ಚಿ, ವಿದ್ಯಾಲಕ್ಷ್ಮಿ ಅರ್ಧಮೂಲೆ, ಲಲಿತ ಸೂರಂಬೈಲ್,ಚಂದ್ರಾವತಿ ಅರ್ಧಮೂಲೆ , ಸುಂದರಿ ಪಾರ್ಪಳ ಅವರನ್ನು ತಾಯಂದಿರ ಸಮಿತಿಗೆ ಆರಿಸಲಾಯಿತು.


 ಮಕ್ಕಳ ಸುರಕ್ಷಾ ಸಮಿತಿ: 

 ಅಣ್ಣಪ್ಪ ನಾಯ್ಕ ಭರಣ್ಯ, ಸಿದ್ದಿಕ್ ಕಲ್ಲಪದವು, ರಫೀಕ್ ಕಕ್ಕೂರು, ಪದ್ಮಾವತಿ ನೀರಮೂಲೆ, ಮಲ್ಲಿಕಾ ಪಡು, ಪುಷ್ಪ ಸ್ವರ್ಗ ಹಾಗೂ ಶಶಿಕಲಾ  ಬೊಳ್ಳುಕಲ್ಲು ಅವರನ್ನು ಮಕ್ಕಳ ಸುರಕ್ಷಾ ಸಮಿತಿಗೆ ಆರಿಸಲಾಯಿತು. 


ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಆರ್ಲಪದವು ಅವರನ್ನು ಸಂಚಾಲಕರು ಆದರದಿಂದ ವೇದಿಕೆಗೆ ಬರಮಾಡಿಕೊಂಡು ಅಭಿನಂದಿಸಿದರು. ನೂತನವಾಗಿ ಆಯ್ಕೆಯಾದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಶಾಲೆ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟನ್ನು ಪರಿಹರಿಸಲು ಎಲ್ಲಾ ಪೋಷಕರು  ಪ್ರಯತ್ನಿಸಬೇಕೆಂದು ಕರೆ ನೀಡಿದರು. ಮುಖ್ಯ ಶಿಕ್ಷಕ ಶ್ರೀಪತಿ ಭಟ್  ಪ್ರಾಸ್ತಾವಿಕವಾಗಿ  ಮಾತನಾಡಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ  ಸುಧೀರ್ ಎಸ್ ಪಿ ಅವರು ಶಾಲೆಯಲ್ಲಿ ಮಕ್ಕಳು ಅನುಸರಿಸಬೇಕಾದ ನಿಯಮಗಳು ಮತ್ತು ನಿಬಂಧನೆಗಳನ್ನು ಪೋಷಕರಿಗೆ ತಿಳಿಹೇಳಿ ವಂದಿಸಿದರು. ಸಹ ಶಿಕ್ಷಕಿ ನಿರ್ಮಲ ಕೆ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕರು ಸಹಕರಿಸಿದರು. 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top