ವಿರೋಧ ಪಕ್ಷದಲ್ಲಿರುವಾಗ ಜನ ಪರವಾದ ಮಾತು....
ವಿರೋಧ ಪಕ್ಷದಲ್ಲಿರುವಾಗ ಆಡಳಿತದಲ್ಲಿರುವವರಿಗೆ "ಬೆಲೆ ಏರಿಸಿದರೆ ಸಾಮಾನ್ಯ ಜನ ಜೀವನ ಮಾಡುವುದು ಹೇಗೆ? ತಪ್ಪು ಮಾಹಿತಿ ಕೊಟ್ಟು ಸುಳ್ಳು ಹೇಳಿ ಅಧಿಕಾರ ನೆಡೆಸುತ್ತಿದ್ದೀರಿ. ನಿಮಗೆ ಅಧಿಕಾರದಲ್ಲಿರುವುದಕ್ಕೆ ಯಾವ ಯೋಗ್ಯತೆಯೂ ಇಲ್ಲ. ನಾಚಿಕೆ ಆಗೋಲ್ವಂಡ್ರಿ ನಿಮಗೆ? ಜನರ ರಕ್ತ ಹೀರ್ತಿದಿರಲ್ರಿ, ನಾಚಿಕೆ ಆಗೋಲ್ವಾ ನಿಮಗೆ?"
ಅಂತ ಹೇಳುವವರೇ ಅಧಿಕಾರಕ್ಕೆ ಬಂದಾಗ....?
ಅದೇ ತೈಲ ಬೆಲೆ ಏರಿಕೆ ಮಾಡಿಸಿ, ಪರಿಣಾಮ ಅದೇ ಅಗತ್ಯ ವಸ್ತುಗಳ ಬೆಲೆ ಏರಿಕೆ. ಅಡಿಗೆ ಎಣ್ಣೆ, ದವಸ ಧಾನ್ಯ, ತರಕಾರಿ, ಹಣ್ಣು, ರೈತರು ಕೊಂಡುಕೊಳ್ಳುವ ಪದಾರ್ಥಗಳು, ಎಲ್ಲ ಬೆಲೆಗಳು ಕೂಡ ಏರುವಂತೆ ಮಾಡ್ತಾರೆ!!!
*
ಅಧಿಕಾರ ಇಲ್ಲದ ಜಾಗದಲ್ಲಿ ಕೂತಾಗ ಜನಪರ!!
ಅಧಿಕಾರ ಇರುವಲ್ಲಿ ಕುಳಿತಾಗ....?
ಈಗ ವಿರೋಧದಲ್ಲಿ ಕುಳಿತವರು "ಯೋಗ್ಯತೆ ಇಲ್ಲ, ನಾಚಿಕೆ ಆಗಲ್ವೇಂಡ್ರಿ?" ಅಂತ ಡೈಲಾಗ್ ಹೊಡೆದು, ಪ್ರತಿಭಟನೆ ಮಾಡಬಹುದು!!?
ವಿರೋಧ ಪಕ್ಷದವರ ಅಭಿಪ್ರಾಯದ ಪ್ರಕಾರ ಯೋಗ್ಯತೆ ಇಲ್ಲದೆ, ನಾಚಿಕೆ ಇಲ್ಲದೆ ಆಡಳಿತದಲ್ಲಿ ಕುಳಿತವರು ವಿರೋಧ ಪಕ್ಷದವರ ಕಟು ಮಾತಿಗೆ 'ಮಣಿದು', ಏರಿಸಿದ ಮೂರು ರುಪಾಯಿಲ್ಲಿ ಐವತ್ತು ಪೈಸೆ ಇಳಿಸಿ, ದಿನದ ನಾಟಕದ ಪ್ರಹಸನಕ್ಕೆ ಪರದೆ ಇಳಿಸಬಹುದು
**
ರಾಜಕಾರಣ ಅಂದ್ರೆ ಇದೇನಾ? ರಾಜಕಾರಣ ಅಂದ್ರೆ ರಿಯಾಲಿಟಿ ಸಿನಿಮವಾ!!?
**
ಅದು ಆ ಕಡೆ.
ಈ ಕಡೆ....
ಸಿನಿಮಾ ಹೀರೋ ಒದ್ದಿದ್ದು ಹೇಗೆ? ಎಷ್ಟು? ನಟ ನಟಿಯರು ಡೈವೋರ್ಸ್ ಯಾಕೆ ಮಾಡಿದರು? ಯಾವ ನಟನ ನಟನೆಗೆ ಬೇಯಿಲ್ ಸಿಗುತ್ತೆ? ಆತ/ಆಕೆ ಬಿರಿಯಾನಿ ತಿಂದ್ರಾ? ಶೆಡ್‌ನಲ್ಲಿ ಮಾಡಿದ ಷಡ್ಯಂತ್ರ ಏನು? ಪೆನ್‌ಡ್ರೈವ್ ಕ್ಲೈಮ್ಯಾಕ್ಸ್ ಏನಾಗಬಹುದು? ಅಂತ ನ್ಯೂಸ್ ಟಿವಿಯವರು ದಿನವಿಡೀsssss ತೋರಿಸತಿದಾರೆ!!!
ಅರ್ಥ ಆಗದೇ ಇರುವುದು ಅಂದರೆ...
ಅಧಿಕಾರದಲ್ಲಿರುವ ಮತ್ತು ವಿರೋಧ ಪಕ್ಷದಲ್ಲಿರುವ ರಾಜಕಾರಣಿಗಳು ನಟನೆ ಮಾಡ್ತಾ ಇದ್ದಾರೆ...
ನಟನೆ ಮಾಡಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದ್ದವರು ರಿಯಾಲಿಟಿ ಷೋ ನಲ್ಲಿದ್ದಾರೆ.....
ರಾಜಕಾರಣಿಗಳ ನಟನೆಗೆ ದಿನ ಬಳಕೆ ವಸ್ತುಗಳನ್ನು ಕೊಂಡುಕೊಂಡು ಹೆಚ್ಚಿದ ಮನರಂಜನಾ ತೆರಿಗೆ ಕೊಡ್ತಾ ಇದ್ದೇವೆ! (ಅಲ್ಲಿ ಕೊಳ್ಳೆ ಹೊಡೆಯಲಾಗುತ್ತಿದೆಯಾ?)
ನಟ-ನಟಿಯರ ರಿಯಾಲಿಟಿ ಷೋ ಗಳ ದುರಂತ ಕ್ಲೈಮ್ಯಾಕ್ಸ್‌ಗಳಿಗೆ ಕಣ್ಣು ಸಮಯಗಳನ್ನು ಟಿವಿಗೆ ಕೊಡ್ತಾ ಇದ್ದೇವೆ!
ಮನೆಯ ವಾಣಿಜ್ಯ ಮಂಡಳಿ ಸೊರಗಿದೆ. ಗೃಹ ಖಾತೆ ಏರಿದ ಅಕ್ಕಿ, ತರಕಾರಿ, 'ಎಣ್ಣೆ'ಗಳ ಬೆಲೆಗೆ ಎಂದಿನಂತೆ 'ಪರಿಶೀಲನೆ, ಮಾಹಿತಿ ಸಂಗ್ರಹ, ಸೂಕ್ತ ಕ್ರಮಗಳ ಬಗ್ಗೆ' ಚಿಂತನೆ ಮಾಡುತ್ತಿದೆ.
ಜನರಿಗೆ ಯಾರನ್ನು ಬ್ಯಾನ್ ಮಾಡುವ ಅವಕಾಶ ಇಲ್ಲ!
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ