ಎಳವೆಯಲ್ಲಿ ಬರುವ ಸಂಸ್ಕಾರ ಭವ್ಯ ಭಾರತದ ಅಡಿಪಾಯ ಡಾ.ವೈ ಭರತ್ ಶೆಟ್ಟಿ

Upayuktha
0


ಮಂಗಳೂರು: ಎಳವೆಯಲ್ಲಿ ಬರುವ ಸಂಸ್ಕಾರ ಭವ್ಯ ಭಾರತದ ಅಡಿಪಾಯ ಸನಾತನ ಧರ್ಮದ ಮೌಲ್ಯಗಳು ಸಮಾಜವನ್ನು ಗಟ್ಟಿಗೊಳಿಸುವ ಮೂಲಕ ರಾಷ್ಟ್ರವನ್ನು ಬಲಿಷ್ಠ ಗೊಳಿಸುತ್ತದೆ. ಹಿಂದೂ ತನ್ನ ಸದ್ವಿಚಾರದ ಶಿಕ್ಷಣ, ಬಾಂಧವ್ಯದ ನೆಲೆಗಟ್ಟನ್ನು ಶ್ರೀಮಂತಗೊಳಿಸಬೇಕಾಗಿದೆ, ಆ ನಿಟ್ಟಿನಲ್ಲಿ ಸಂಸ್ಕಾರ- ಸಂಸ್ಕೃತಿಯ ಉದ್ದಿಪನಕ್ಕೆ ಬಾಲಗೋಕುಲ ಅತ್ಯಮೂಲ್ಯ ಕಾಣಿಕೆ ನೀಡುತ್ತಿದೆ ಎಂದು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು  ಹೇಳಿದರು. ಅವರು ಮುಚ್ಚೂರು ಶ್ರೀರಾಮ ಶ್ರೀ ರಾಮ ಯುವಕ ಸಂಘ ಇದರ ಸಂಯೋಜಿತ ಶ್ರೀ ರಾಮ ಬಾಲಗೋಕುಲದ ಶಿಕ್ಷಾರ್ಥಿಗಳ ಸುಮಾರು 90 ಸಾವಿರ ಮೌಲ್ಯದ ಪುಸ್ತಕ ಮತ್ತು ಪ್ರತಿಭಾ ಗೌರವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನುಡಿದರು.


ಗ್ರಾಮಾಂತರ ಪ್ರದೇಶದಲ್ಲಿ ಬಾಲ ಗೋಕುಲದ ಹಿಂದೂ ಧರ್ಮದ ಬೌದ್ಧಿಕ ಶಿಕ್ಷಣ ಕೇಂದ್ರ ಬೆಳೆಯಬೇಕು, ಮಕ್ಕಳ ಶಿಕ್ಷಣದ ಅವಶ್ಯಕತೆಗಾಗಿ ಇಡೀ ಸಮಾಜ ಸ್ಪಂದಿಸಬೇಕು, ಶಿಕ್ಷಾರ್ಥಿಗಳ ಪ್ರತಿಭೆ ಅನಾವರಣ ಗೊಳ್ಳುವ ಜೊತೆಯಲ್ಲಿ  ಸಮಾಜದ ಅಮೂಲ್ಯ ವ್ಯಕ್ತಿಗಳಾಗಿ  ಹೊರಬರಲು ಬಾಲವಿಕಾಸ ಕೇಂದ್ರಗಳು ಕಾರಣವಾಗುತ್ತದೆ , ಪೋಷಕರು ಕೇವಲ ಮಕ್ಕಳ ಅಂಕದ ಕಡೆಗೆ‌ ಗಮನ ಕೊಡುವ ಜೊತೆಗೆ  ಸನಾತನ ಧರ್ಮದ ಅರಿವು ಮೂಡಿಸುವ ಕೆಲಸ , ಹಿಂದೂ ಪ್ರಜ್ಞೆ ಜಾರಿಗೊಳಿಸುವ  ಸುಂದರ ಕಾರ್ಯಕ್ಕೆ ಸಮಾಜ ಮುಂದಾಗಬೇಕಿದೆ.


ಶ್ರೀರಾಮ ಯುವಕ ಸಂಘ ಇದರ ಸಂಚಾಲಕರಾದ ಜನಾರ್ದನ ಗೌಡ ಅಧ್ಯಕ್ಷತೆ ವಹಿಸಿದ್ದರು, ಅತಿಥಿಗಳಾಗಿ ಮುಚ್ಚೂರು ಪಂ.ಅಧ್ಯಕ್ಷ ನಾರಾಯಣ ಪೂಜಾರಿ, ಮಾಜಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಸಾದ್ ಎಡಪದವು, ಮಾಜಿ ಸದಸ್ಯ ಸಂದೇಶ್ ಡೇಸಾ,ಧನಂಜಯ ಗುರಿಕಾರ, ಲಕ್ಷ್ಮಿಶ ಮುತ್ತೂರು, ಭಾಗವಹಿಸಿದ್ದರು, NMMS ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿ ಉತ್ತೀರ್ಣರಾದ ಬಾಲಗೋಕುಲ ಶಿಕ್ಷಾರ್ಥಿ ಕು‌.ನೇಹಾ ಇವರನ್ನು ಸನ್ಮಾನಿಸಲಾಯಿತು, ಬಾಲ ಗೋಕುಲದ ಮಾತಾಜಿಗಳಾದ ಕು .ಸರಿತಾ, ಕು.ಕುಸುಮಾವತಿ, ಕು.ದಿವ್ಯಾ,ಕು.ಧನ್ಯಶ್ರೀ, ಕು‌, ಪೂಜಾ ಭಾಗವಹಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top