ಮಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಸುಖ ಮತ್ತು ನಮ್ಮ ಮಾತಿನ ಮುಖ ಆಗಬೇಕು ಎಂದು ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ತಾರನಾಥ್ ನುಡಿದರು.
ಅವರು ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಸದಸ್ಯ ನೋಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕರ್ನಾಟಕದ ಗಾಳಿ, ನೀರು ಪರಿಸರದಲ್ಲಿ ಇರುವ ಜನರು ಕ.ಸಾ.ಪ ಆಜೀವ ಸದಸ್ಯರಾಗುವುದು ಕಡ್ಡಾಯ ಆಗಬೇಕು. ಅಷ್ಟು ಸೇವೆ ಕನ್ನಡಕ್ಕೆ ಮಾಡಲೇಬೇಕು ಎಂದರು.
ದ.ಕ. ಜಿಲ್ಲಾ ಕ.ಸಾ.ಪ ಆಧ್ಯಕ್ಷ ಡಾ. ಎಂ.ಪಿ ಶ್ರೀನಾಥ ಅಭಿಯಾನದ ಬಗ್ಗೆ ಮಾಹಿತಿ ನೀಡಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡಿಮೆ ಸದಸ್ಯರು ಇದ್ದಾರೆ. ಇಪ್ಪತ್ತು ಸಾವಿರ ಆದರೂ ನೋಂದಾವಣೆ ಮಾಡುವ ಗುರಿ ಇದೆ ಎಂದರು.
ನಂತರ ಎಸ್.ಡಿ.ಎಂ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆ ಮಾಹಿತಿಯನ್ನು ನೀಡಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನೋಂದಾವಣೆ ಮಾಡಲಾಯಿತು. ಮಂಗಳೂರು ತಾಲೂಕು ಅಧ್ಯಕ್ಷ ಮಂಜುನಾಥ ಎಸ್. ರೇವಣ್ಕರ್, ಹೋಬಳಿ ಅಧ್ಯಕ್ಷರಾದ ಎಸ್.ಡಿ.ಎಂ ಕಾಲೇಜಿನ ಪ್ರಾಧ್ಯಾಪಕ ಪುಷ್ಪರಾಜ್ ಕೆ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ.ಮಾಧವ ಎಂ.ಕೆ , ಡಾ. ಮೀನಾಕ್ಷಿ ರಾಮಚಂದ್ರ, ಹಿರಿಯ ಸಾಹಿತಿ ಸದಾನಂದ ನಾರಾವಿ, ಸಾಹಿತಿ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ, ಮಹಾವಿದ್ಯಾಲಯದ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ನಂತರ ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಗಳು, ಕೈರಂಗಳ ಮಹಾಗಣಪತಿ ಶಿಕ್ಷಣ ಸಂಸ್ಥೆಗಳು, ಅಸೈಗೋಳಿ ರತ್ನಾ ಶಿಕ್ಷಣ ಸಂಸ್ಥೆಗಳಲ್ಲಿ ಹೋಗಿ ಮಾಹಿತಿ ಮತ್ತು ನೋಂದಣಿ ಮಾಡಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


