ಮಂಗಳೂರು: ಒಲಿಂಪಿಕ್ ಆಂದೋಲನದ ಸಂಸ್ಥಾಪಕ ಪಿಯರೆ ಡಿ ಕೂಬರ್ಟಿನ್ ಅವರ ಬದುಕು ಮತ್ತು ಪರಂಪರೆಯನ್ನು ಸಂಭ್ರಮಿಸುವ ಮತ್ತು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪಾಲ್ಗೊಳ್ಳುವಿಕೆಯ 100ನೇ ವರ್ಷದ ಸಂಭ್ರಮವನ್ನು ಸ್ಮರಿಸುವ ಉದ್ದೇಶದಿಂದ ಸಲುವಾಗಿ ಈ ಬಾರಿಯ ಒಲಿಂಪಿಕ್ಸ್ ಆತಿಥ್ಯ ವಹಿಸುವ ಪ್ಯಾರಿಸ್ ನಲ್ಲಿ ಇತ್ತೀಚೆಗೆ ಜೆಎಸ್‍ಡಬ್ಲ್ಯೂ ಗ್ರೂಪ್ ವತಿಯಿಂದ ಒಲಿಂಪಿಕ್ ದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನದಲ್ಲಿ ಜೆಎಸ್‍ಡಬ್ಲ್ಯೂ ಫೌಂಡೇಶನ್ ಅಧ್ಯಕ್ಷೆ, ಸಂಗೀತಾ ಜಿಂದಾಲ್ ಮತ್ತು ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋಟ್ರ್ಸ್ ಸಂಸ್ಥಾಪಕ ಪಾರ್ಥ್ ಜಿಂದಾಲ್, ಐಓಸಿ ಅಧ್ಯಕ್ಷ ಥಾಮಸ್ ಬಾಚ್, ಸಂಸ್ಕ್ರತಿ ಸಚಿವರಾದ ಮೇಡಮ್ ರಚಿದಾ ದಾತಿ, ಫ್ರಾನ್ಸ್ ರಾಯಭಾರಿ ಜಾವೇದ್ ಅಶ್ರಫ್ ಮತ್ತು ಪಿಯರೆ ಡಿ ಕೂಬರ್ಟಿನ್ ಫ್ಯಾಮಿಲಿ ಅಸೋಸಿಯೇಶನ್ ಅಧ್ಯಕ್ಷೆ ಅಲೆಕ್ಸಾಂಡ್ರಾ ಡಿ ನವಸೆಲ್ಲೆ ಭಾಗವಹಿಸಿದ್ದರು.
ಈ ಪ್ರದರ್ಶನವು ಸೆಪ್ಟೆಂಬರ್‍ನಲ್ಲಿ ನಡೆಯಲಿರುವ 2024ರ ಪ್ಯಾರಿಸ್ ಬೇಸಿಗೆ ಪ್ಯಾರಾಲಿಂಪಿಕ್ ಅಂತ್ಯದವರೆಗೆ ನಡೆಯಲಿದೆ. ಮುಂದಿನ ತಿಂಗಳು ಪ್ಯಾರಿಸ್‍ನಲ್ಲಿ ನಡೆಯುವ ಒಲಿಂಪಿಕ್ಸ್ ಗೇಮ್ಸ್‍ನಲ್ಲಿ ಟೀಮ್ ಇಂಡಿಯಾದ ಭಾಗವಾಗಿ ಸುಮಾರು 30 ಕ್ರೀಡಾಪಟುಗಳು ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ಅನ್ನು ಪ್ರತಿನಿಧಿಸುತ್ತಾರೆ ಮತ್ತು ಮುಂದೆ ನಡೆಯಲಿರುವ ಪ್ರತಿ ಒಲಿಂಪಿಕ್ ಕ್ರೀಡಾಕೂಟದಲ್ಲಿ ಆ ಭಾಗವಹಿಸುವವರ ಸಂಖ್ಯೆಯನ್ನು ಹೆಚ್ಚಿಸುವುದು ನಮ್ಮ ಪ್ರಯತ್ನವಾಗಿದೆ ಮತ್ತು ಗುರಿಯಾಗಿದೆ. ಆರ್ಥಿಕ ಶಕ್ತಿಯಾಗಿ ಭಾರತದ ಉದಯವು ಸ್ಪಷ್ಟವಾಗಿದೆ. ಜೊತೆಗೆ ಕ್ರೀಡೆಯ ಮೂಲಕ ದೇಶದ ಅಪ್ರತಿಮ ಶಕ್ತಿಯನ್ನು ನಿಜವಾಗಿಯೂ ಪ್ರದರ್ಶಿಸಲಾಗುತ್ತದೆ ಮತ್ತು ಅದನ್ನು ಅದ್ಭುತವಾಗಿ ಮಾಡಿ ತೋರಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದು ಸಂಗೀತಾ ಜಿಂದಾಲ್ ಹೇಳಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


