ಸುರತ್ಕಲ್: ಸಂದರ್ಶನವು ವೃತ್ತಿ ಬದುಕಿನ ಪ್ರಥಮ ಹೆಜ್ಜೆಯಾಗಿದ್ದು ಸಮರ್ಪಕ ಪೂರ್ವ ತಯಾರಿಗಳೊಂದಿಗೆ ಸಂದರ್ಶವನ್ನು ಎದುರಿಸಿದರೆ ಉತ್ತಮ ಉದ್ಯೋಗವಕಾಶಗಳು ದೊರೆಯುತ್ತದೆ ಎಂದು ಗೋವಿಂದ ದಾಸ ಕಾಲೇಜು, ಸುರತ್ಕಲ್‌ನ ಆಡಳಿತಾತ್ಮಕ ನಿರ್ದೇಶಕ ಪ್ರೊ. ಗೋಪಾಲ ಎಂ. ಗೋಖಲೆ ನುಡಿದರು.
ಅವರು ಗೋವಿಂದ ದಾಸ ಕಾಲೇಜಿನ ಸ್ನಾತಕೋತ್ತ ವಾಣಿಜ್ಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಮತ್ತು ಎ-ವನ್ ಲಾಜಿಕ್ಸ್, ಮಂಗಳೂರಿನ ಸಹಾಭಾಗಿತ್ವದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವೃತ್ತಿ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎ-ವನ್ ಲಾಜಿಕ್ಸ್ ಕಂಪೆನಿಯ ಸ್ಥಾಪಕ ಪ್ರವೀಣ್ ಉಡುಪ ಅವರು ವಿದ್ಯಾರ್ಥಿಗಳು ಉದ್ಯೋಗ ಸಂದರ್ಶನವನ್ನು ಎದುರಿಸಲು ಮಾಡಬೇಕಾದ ಸಿದ್ಧತೆ, ಗಮನದಲ್ಲಿಟ್ಟುಕೊಳ್ಳಬೇಕಾದ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಕೃಷ್ಣಮೂರ್ತಿ ಪಿ. ಮಾತನಾಡಿ ಉನ್ನತ ಉದ್ಯೋಗ ದೊರೆಯಲು ವೃತ್ತಿ ಸಂದರ್ಶನವು ಅತೀ ಅಗತ್ಯವಾಗಿದ್ದು ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ಸಂದರ್ಶನವನ್ನು ಎದುರಿಸುವುದು ಮುಖ್ಯವಾಗಿದೆ. ಪತ್ರಿಕೆಗಳಲ್ಲಿ ಮತ್ತು ಜಾಲತಾಣಗಳಲ್ಲಿ ಸಂದರ್ಶನವನ್ನು ಎದುರಿಸುವ ಬಗ್ಗೆ ವಿಫುಲ ಮಾಹಿತಿಗಳು ಲಭ್ಯವಾಗುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದರು.
ಸಂದರ್ಶನವನ್ನು ಎದುರಿಸಲು ಪ್ರಾಯೋಗಿವಾಗಿ ಅಣಕು ಸಂದರ್ಶನವನ್ನು ಎ-ವನ್-ಲಾಜಿಕ್ಸ್ ಕಂಪೆನಿಯ ಮಾನವ ಸಂಪನ್ಮೂಲ ವ್ಯವಸ್ಥಾಪಕ ಪ್ರಶಾಂತ್ ಕಲಡ್ಕ ಮತ್ತು ಯೋಜನಾ ವ್ಯವಸ್ಥಾಪಕಿ ಶಿಲ್ಪಾ ಮುಲ್ಕಿ ನಡೆಸಿಕೊಟ್ಟರು.
ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಡಾ. ಗಣೇಶ ಆಚಾರ್ಯ ಬಿ. ಸ್ವಾಗತಿಸಿದರು. ಪೃಥ್ವಿ ವಂದಿಸಿದರು. ಗಾಯತ್ರಿ ಕಾರ್ಯಕ್ರಮ ನಿರೂಪಿಸಿದರು.
ಉಪನ್ಯಾಸಕಿಯರಾದ ಭಾರತಿ, ಹರ್ಷಾರಾಣಿ, ದೀಕ್ಷಾ, ಅಪೇಕ್ಷಾ, ಪುನೀತಾ, ಡಾ. ಶಿಲ್ಪರಾಣಿ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಶಾಂತ್ ಎಂ.ಡಿ. ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


