ಕೆನರಾ ಕಾಲೇಜಿನಲ್ಲಿ 'ರಿಸರ್ಚ್ ಮೆಥಡಾಲಜಿ ಎಸೆನ್ಶಿಯಲ್' ಕಾರ್ಯಾಗಾರ

Upayuktha
0




ಮಂಗಳೂರು: ಕೆನರಾ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶ ಹಾಗೂ ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ 'ರಿಸರ್ಚ್ ಮೆಥಡಾಲಜಿ ಎಸೆಂಶಿಯಲ್' ಈ ವಿಚಾರವಾಗಿ ಎರಡು ದಿನಗಳ ಕಾರ್ಯಾಗಾರ ಉದ್ಘಾಟನೆಗೊಂಡಿತು. ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಡೀನ್  ಹಾಗೂ ಪ್ರೊಫೆಸರ್ ಡಾ. ಪ್ರಕಾಶ್ ಪಿಂಟೊ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಸಂಶೋಧನೆಯು ಆಲೋಚನಾ ಕೌಶಲ, ತಾಂತ್ರಿಕ ಹಾಗೂ ಸಂವಹನ ಎಂಬ ಮೂರು ವರ್ಗಗಳ ಕೌಶಲ್ಯಗಳ ಅಗತ್ಯವಿರುವ ಒಂದು ದಂಡಯಾತ್ರೆ ಯಾಗಿದೆ. ಸಂಶೋಧನೆ ಬೇಟೆಗಾರನ ರೋಮಾಂಚನವನ್ನು ಮೂಡಿಸುತ್ತದೆ. ಇದು ಜ್ಞಾನವನ್ನು ಉಂಟುಮಾಡುವ ಶಕ್ತಿ. ಅದರಲ್ಲೂ ವಿಶೇಷವಾಗಿ ಕೃತಕ ಬುದ್ಧಿಮತ್ತೆ ಪ್ರತಿಯೊಂದು ಸಂಶೋಧನಾ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ವಿಸ್ತರಿಸಿಕೊಂಡಿದೆ. ಸಂಶೋಧನೆ ನಮ್ಮ ಬೆಳವಣಿಗೆಯ ಉದ್ದೇಶದ ಸಲುವಾಗಿರಬೇಕು ಇಲ್ಲವಾದರೆ ಕ್ಯಾನ್ಸರ್ ಕೋಶದ ಸಿದ್ಧಾಂತದಂತೆ ಸಂಶೋಧನೆಯಿಂದ ಯಾವುದೇ ಪ್ರಯೋಜನವಿಲ್ಲ. ಸಂಶೋಧನೆಯು ಸಾಮಾಜಿಕ ಸಮಸ್ಯೆಗಳು ಪರಿಹಾರಕ್ಕೆ ಮಾರ್ಗದರ್ಶಿಯಾಗಲಿ ಎಂದು ನುಡಿದರು.


ಕಾಲೇಜು ಸಂಚಾಲಕ ಸಿಎ ಎಂ ಜಗನ್ನಾಥ ಕಾಮತ್ ಅಧ್ಯಕ್ಷತೆ ವಹಿಸಿದ್ದು ಸಂಶೋಧನೆಯು ಪ್ರಗತಿಯ ಜೀವನಾಡಿಯಾಗಿದೆ. ಪಿ.ಎಚ್.ಡಿಯನ್ನು ಚಿಕ್ಕ ವಯಸ್ಸಿನಲ್ಲಿ ಪೂರ್ಣಗೊಳಿಸಬೇಕು. ಇದರಿಂದ ಅವರು ತಮ್ಮ ವೃತ್ತಿಪರ ಪ್ರಗತಿಯ ಹಾದಿಯಲ್ಲಿ ಬಹಳ ಪ್ರಯೋಜನವನ್ನು ಪಡೆಯಬಹುದು. ಅಲ್ಲದೆ ಇಂದು ಸ್ಪರ್ಧಾತ್ಮಕ ಪ್ರಪಂಚದಲ್ಲಿ ಅನೇಕ ಸವಾಲುಗಳು ಇವೆ. ಇದು ವಾಸ್ತವವಾಗಿ 'ಸರ್ವೈವಲ್ ಆಫ್ ದಿ ಫಿಟ್ಟೆಸ್ಟ್' ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ಸ್ವಾಗತಿಸಿ, ಎಂ ಕಾಂ ವಿಭಾಗದ ಸ್ವಾತಿ ನಾಯಕ್ ವಂದಿಸಿದರು.


ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿಕೋಶದ ಸಂಯೋಜಕಿ ಶ್ರೀಮತಿ ಅನಸೂಯ ಭಾಗವತ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಮೇಘ ನಿರೂಪಿಸಿದರು. ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಒಳಪಟ್ಟ ಅನೇಕ ಕಾಲೇಜುಗಳ ಉಪನ್ಯಾಕರು ಈ ಕಾರ್ಯಾಗಾರದಲ್ಲಿ ಪಾಲ್ಗೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top