ನೃತ್ಯ ಸಾಧನೆಯ ಹೆಜ್ಜೆ ಗುರುತು- ಭರತನಾಟ್ಯ ಯುವ ಪ್ರತಿಭೆ ದೇವಿಕಾ ರಾಜಮಣಿ

Upayuktha
0



ಮೊನ್ನೆ ಹಾಸನ ತಾ. ಬೂದೇಶ್ವರ ಮಠದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ದೇವಿಕಾ ಮತ್ತು ಮೇಘನಾ ಜೋಡಿಯ ಭರತನಾಟ್ಯ ಪ್ರದರ್ಶನ ಪ್ರೇಕ್ಷಕರ ಮನಸೆಳೆಯಿತು. ಕಾರ್ಯಕ್ರಮ ಮುಗಿದು ಇವರಿಗೆ ಹಾಸನದ ಶ್ರೀ ಶಾರದ ಕಲಾಸಂಘದ ಅಧ್ಯಕ್ಷರು ಸನ್ಮಾನಿಸಿದರು. ಇವರ ನೃತ್ಯಗುರು ಶ್ರೀಮತಿ ವಿದುಷಿ ಅಂಬಳೆ ರಾಜೇಶ್ವರಿ.


ಕು. ದೇವಿಕಾ ರಾಜಮಣಿ ಇವರು ಹಾಸನದ  ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಬಿ ಬಿ ಎ ಓದುತ್ತಿದ್ದಾರೆ. ಇವರ ತಂದೆ ಹೆಚ್.ಆರ್.ಗಿಡ್ಡೇಗೌಡರು ತಾಯಿ ರಾಜಮಣಿ ಎಸ್.ಆರ್. ತಾಯಿಯ ಪ್ರೋತ್ಸಾಹದಿಂದ 5 ನೇ ವಯಸ್ಸಿಗೆ ನೃತ್ಯ ಕಲಿಯಲು ಗೆಜ್ಜೆ ಕಟ್ಟಿ ಇಂದಿಗೂ ನೃತ್ಯದ ಹೆಜ್ಜೆ ಮುಂದುವರೆಸಿ ಈವರೆಗೆ ಸರಿಸುಮಾರು 500 ಕಾರ್ಯಕ್ರಮ ನೀಡಿದ್ದಾರೆ. 3 ನೇ ತರಗತಿ ಓದುತ್ತಿರುವಾಗಲೇ ಹಾಸನದ ಹೊಯ್ಸಳ ರೈನ್‌ಬೊ ಸಂಸ್ಥೆಯ ನೃತ್ಯ ಸ್ಫರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದರು.


ಶ್ರೀಮತಿ ಪ್ರಭಾಮಣಿ ಮಂಜುನಾಥ್ ಅವರಲ್ಲಿ ಸಂಗೀತದಲ್ಲಿ ಜೂನಿಯರ್ ಗ್ರೇಡ್ ಮುಗಿಸಿದ್ದಾರೆ. ಶಾಸ್ತೀಯ ನೃತ್ಯದಲ್ಲಿ ಜೂನಿಯರ್, ಸೀನಿಯರ್ ನಂತರ ಗಂಗೋತ್ರಿ ಹಾನಗಲ್ ಯೂನಿವರ್ಸಿಟಿಯ 2024ನೇ ಸಾಲಿನ ಭರತನಾಟ್ಯ ವಿದ್ವತ್ ಪಡೆಯಲು ಅಂತಿಮ ದರ್ಜೆಗೆ ತಯಾರಿ ನಡೆಸಿದ್ದಾರೆ. ತಮ್ಮ ಗುರು ವಿದುಷಿ ಅಂಬಳೆ ರಾಜೇಶ್ವರಿಯವರ ಮಾರ್ಗದರ್ಶನದಲ್ಲಿ ಜಾವಗಲ್‌ನ ಮಾಡೆಲ್ ಇಂಗ್ಲೀಷ್ ಸ್ಕೂಲ್‌ನಲ್ಲಿ ಒಂದು ವರ್ಷದಿಂದ ಭರತನಾಟ್ಯ ಹಾಗೂ ಸಂಗೀತ ತರಬೇತಿ ನೀಡುತ್ತಿದ್ದು, ಈ ವರ್ಷ ಫೆಬ್ರುವರಿಯಿಂದ ಹಾಸನದ ಶಾಸ್ತ ಪಬ್ಲಿಕ್ ಶಾಲೆಯಲ್ಲಿ ಭರತನಾಟ್ಯ ತರಬೇತಿ ಪ್ರಾರಂಭಿಸಿದ್ದಾರೆ.


ದೆಹಲಿ, ಹಂಪಿ, ಮೈಸೂರು, ಬೆಂಗಳೂರು, ಕಾರ್ಕಳ, ಬೇಲೂರು, ಹಳೇಬೀಡು, ಶಿವಮೊಗ್ಗ, ದಾವಣಗೆರೆ.. ಹೀಗೆ ನಾಡಿನಾದ್ಯಂತ ಸಮೂಹ ನೃತ್ಯ ಇಲ್ಲವೇ ಸೋಲೋ ನೃತ್ಯ ಪ್ರದರ್ಶನ ನೀಡಿದ್ದಾರೆ. ಹಾಸನದಲ್ಲಿಯೇ ಇವರ ಸುಮಾರು 900 ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದಿವೆ. ಬೇಲೂರು ಚನ್ನಕೇಶವ ದೇವಸ್ಥಾನದ ನವರಂಗ ಆವರಣದಲ್ಲಿ 2 ಬಾರಿ, ಹಾಸನ ಆದಿಚುಂಚನಗಿರಿ ಹುಣ್ಣಿಮೆ  ಉತ್ಸವದಲ್ಲಿ, ಕುಂದೂರು ಮಠದ ಜಾತ್ರೆಯಲ್ಲಿ ಇವರ ನೃತ್ಯ ಪ್ರದರ್ಶನ ನಡೆದಿದೆ. ಮಂಡ್ಯ ಜಿಲ್ಲೆ ಮದ್ದೂರು ಭಾರತಿ ಕಾಲೇಜಿನಲ್ಲಿ ನಡೆದ ಅಂತರ ಕಾಲೇಜು ಭರತನಾಟ್ಯ ಸ್ಫರ್ಧೆಯಲ್ಲಿ ತಮ್ಮ ಕಾಲೇಜು ಪ್ರತಿನಿಧಿಸಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಹಾಸನ ವಿಶ್ವವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಇವರ ನೃತ್ಯ ಮೆಚ್ಚುಗೆ ಪಡೆದಿದೆ. ಅಮ್ಮ ನಿನ್ನ ದೇವರಾಣೆ ಹಾಡಿಗೆ ಕೃಷ್ಣನ ಪಾತ್ರ ಗಮನ ಸೆಳೆದಿದೆ. ರಾಮಾಯಣ ನೃತ್ಯರೂಪಕದಲ್ಲಿ ಶೂರ್ಪನಖಿಯಾಗಿ ಲಕ್ಷ್ಮಣನನ್ನು ಕಾಡಿದ್ದಾರೆ. 2018 ರಲ್ಲಿ ಶ್ರವಣಬೆಳಗೊಳದಲ್ಲಿ ನಡೆದ ಮಹಾಮಸ್ತಾಕಾಭಿಷೇಕದಲ್ಲಿ ಭರತನಾಟ್ಯ ಕಾರ್ಯಕ್ರಮ ನೀಡಿದ್ದಾರೆ.

--

ಗೊರೂರು ಅನಂತರಾಜು, ಹಾಸನ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top