ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನೂಪುರ ನರ್ತನ ಕಾರ್ಯಕ್ರಮ

Upayuktha
0


ಬೆಂಗಳೂರು: ಕಲೆಗಳಲ್ಲಿ ಸರ್ವೋತ್ತಮ ಕಲೆ ಅಂದರೆ ನಾಟ್ಯಕಲೆ ಎಂದು ಭರತಮುನಿ ಅವರ ನಾಟ್ಯ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೇ ಜೂನ್ 15ರಂದು ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ನೂಪುರ ನರ್ತನ ಕಾರ್ಯಕ್ರಮವು ಸೇವಾ ಸದನ, ಮಲ್ಲೇಶ್ವರಂ ನಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. 


ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ಸಂಸ್ಥಾಪಕರು ಹಾಗೂ ಗುರುಗಳಾದ  ಸೋಮಶೇಖರ್ ಚೂಡನಾಥ್ ಹಾಗೂ ಸೌಮ್ಯ ಸೋಮಶೇಖರ್ ರವರ ನೇತೃತ್ವದಲ್ಲಿ ಅವರ ಶಿಷ್ಯರುಗಳಾದ  ಜೇನಿತ, ಪ್ರೀಜ ವಿನೋದ್,  ಮಮತಾ ಸಿ ಹಾಗೂ ನಂದಿನಿ ಎಂಸಿ ರವರು ನಟರಾಜನ ಪೂಜೆಯ ನಂತರ ಗುರುಗಳಿಂದ ಗೆಜ್ಜೆಯನ್ನು ಸ್ವೀಕರಿಸಿ ನೂಪುರ ನರ್ತನ ಕಾರ್ಯಕ್ರಮದಲ್ಲಿ ತಮ್ಮ ನೃತ್ಯದ ಮೂಲಕ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದರು. 


ಪುಷ್ಪಾಂಜಲಿ ಪ್ರದರ್ಶನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ದೇವರ ನಾಮ, ವರ್ಣಂ, ದೇವಸ್ತುತಿ, ತಿಲ್ಲನ ಹಾಗೂ ಮಂಗಳದೊಂದಿಗೆ ಯಶಸ್ವಿಯಾಯಿತು.


ವಿದ್ಯಾರ್ಥಿಗಳ ವಿಶೇಷತೆ ಎಂದರೆ ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸಲು ಆಗಮಿಸಿ, ಗುರುಗಳಿಂದ ಪ್ರೇರೇಪಣೆಗೊಂಡು ತಮ್ಮ ವೃತ್ತಿ ಜೀವನದ ಜೊತೆಯಲ್ಲಿ ಮನೆ ಹಾಗೂ ಮಕ್ಕಳ ಜವಾಬ್ದಾರಿಯಾದಿ ಯಾಗಿ ತಮ್ಮ ಆಸಕ್ತಿಯನ್ನು ಕೂಡ ಬಿಂಬಿಸಿದಂತಹ ಭರತನಾಟ್ಯ ಕಲಾವಿದರನ್ನು ಎಲ್ಲರೂ ಮನ ತುಂಬಿ ಹರಸಿ ಆಶೀರ್ವದಿಸಿದರು.


ಮುಖ್ಯ ಅತಿಥಿಗಳಾಗಿ ಶ್ರೀ ಲಲಿತ ಕಲಾ ನಿಕೇತನ ಸಂಸ್ಥಾಪಕಿ, ವಿದುಷಿ ರೇಖಾ ಜಗದೀಶ್ ರವರು ಕಲಾವಿದರ ಪ್ರದರ್ಶನವನ್ನು ವೀಕ್ಷಿಸಿ, ಆಶೀರ್ವದಿಸಿದರು. ಸೋಮಶೇಖರ್ ದಂಪತಿಗಳ ಗುರುಗಳಾದಂತಹ ಸುಪರ್ಣ ವೆಂಕಟೇಶ್ ರವರು ಹಾಗೂ ಅಂತರಾಷ್ಟ್ರೀಯ ನೃತ್ಯ ಉತ್ಸವಗಳ ಆಯೋಜಕರಾದ ಶ್ರೀ ಸಾಯಿ ವೆಂಕಟೇಶ್ ರವರ ಉಪಸ್ಥಿತಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು. 


ಸಂಗೀತ ಸಾಂಗತ್ಯ 

ನಾಟ್ಟುವಂಗಂ: ಆಚಾರ್ಯ ಸೌಮ್ಯ ಸೋಮಶೇಖರ್ 

ಗಾಯನ: ವಿದುಷಿ  ಭಾರತಿ ವೇಣುಗೋಪಾಲ್ 

ಮೃದಂಗ: ವಿದ್ವಾನ್  ವಿದ್ಯಾಶಂಕರ್ 

ಕೊಳಲು: ವಿದ್ವಾನ್  ರಘುಸಿಂಹ



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top