ನಾಟಕ ಪಿತಾಮಹ ಕೋಲಾಚಲಂ ಶ್ರೀನಿವಾಸ ರಾವ್ ರವರ 105ನೇ ಪುಣ್ಯಸ್ಮರಣೆ

Upayuktha
0


ಬಳ್ಳಾರಿ: ಬಳ್ಳಾರಿ ರಾಘವ ಕಲಾಮಂದಿರದಲ್ಲಿ, ರಾಘವ ಮೆಮೋರಿಯಲ್ ಅಸೋಸಿಯೇಷನ್, ವತಿಯಿಂದ 23-06-2024ರಂದು ಬೆಳಗ್ಗೆ 10 ಗಂಟೆಗೆ ಕೋಲಾಚಲಂ ಶ್ರೀನಿವಾಸ ರಾವ್ ರವರ 105ನೇ ವಾರ್ಷಿಕ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಸಂಸ್ಥೆಯ ಪದಾಧಿಕಾರಿಗಳು ಮತ್ತು ಕೋಲಾಚಲಂ ಶ್ರೀನಿವಾಸ ರವರ ಕುಟುಂಬದವರು ಸೇರಿ ಜ್ಯೋತಿ ಬೆಳಗಿಸಿ, ಪುಷ್ಪಾಂಜಲಿ ಅರ್ಪಿಸುವ ಮೂಲಕ ಪುಣ್ಯ ಸ್ಮರಣೆ ಕಾರ್ಯಕ್ರಮ ಆಚರಿಸಲಾಯಿತು.


ಕಾರ್ಯಕ್ರಮ ನಿರೂಪಣೆಯನ್ನು ಸಂಸ್ಥೆಯ ಕಾರ್ಯದರ್ಶಿ ಎನ್ ಪ್ರಕಾಶ್ ನಿರ್ವಹಿಸಿದರು. ನಂತರ ಕೋಲಾಚಲಂ ಶ್ರೀನಿವಾಸ ರವರ ಸಾಧನೆಗಳನ್ನು ಕಂಡಕ್ಟರ್ ಪೊಂಪಪತಿ, ಚೆಲ್ಲಾ ಅಮರೇಂದ್ರನಾಥ ಚೌದರಿ, ಎನ್ ಬಸವರಾಜ್, ಎಂ. ರಾಮಾಂಜನೇಯಲು ರವರಗಳು ಸ್ಮರಿಸಿದರು.


ಈ ಸಂದರ್ಭದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಕೆ ಚನ್ನಪ್ಪ, ಅಧ್ಯಕ್ಷ ಕೆ ಕೋಟೆಶ್ವರ ರಾವ್, ಗೌರವ ಕಾರ್ಯದರ್ಶಿ ಎನ್ ಪ್ರಕಾಶ್, ಕೆ ಕೃಷ್ಣ, ಕೆ ಸುರೇಂದ್ರ ಬಾಬು, ವಿ ರಾಮಚಂದ್ರ, ಶೇಷ ರೆಡ್ಡಿ, ಬಿ ಎಂ ಬಸವರಾಜ್, ಶಿವಶ್ವರ ಗೌಡ ಕಲ್ಲುಕಂಭ, ರಘುನಾಥ, ಭೀಮನೇನಿ ಭಾಸ್ಕರ್, ರಮಣಪ್ಪ ಭಜಂತ್ರಿ ಮತ್ತು ಕೋಲಾಚಲಂ ಕುಟುಂಬದರಾದ ಕೋಲಾಚಲಂ ಶ್ರೀಧರ್  ಮತ್ತು ಕುಟುಂಬದವರು, ಕಲಾವಿದರು ಭಾಗವಹಿಸಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
To Top