ತಿಮ್ಮಾಪುರ: ಹುನಗುಂದ ತಾಲೂಕಿನ ಹಿರೇಮಾಗಿ ಸರಕಾರಿ ಕನ್ನಡ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ಕಾರ್ಯಕ್ರಮವು ಅದ್ದೂರಿಯಾಗಿ, ಸಡಗರ ಸಂಭ್ರಮದಿಂದ ಜರುಗಿತು.
ಶಾಲಾ ಮಕ್ಕಳಿಗೆ ಹೂ ನೀಡಿ, ಚಾಕಲೇಟ್ ವಿತರಿಸಿ ಸ್ವಾಗತ ಮಾಡಿಕೊಳ್ಳಲಾಯಿತು. ಮಕ್ಕಳಿಗೆ ಬಲೂನನ್ನ ನೀಡಿ ಚಟುವಟಿಕೆಯ ಮೂಲಕ ಮಕ್ಕಳನ್ನು ಸ್ವಾಗತಿಸಿ, ಕಲಿಕೆಗೆ ಪ್ರೇರಣೆ ನೀಡಲಾಯಿತು. ಶಾಲಾ ಪ್ರಾರಂಭೋತ್ಸವ ಮತ್ತು ದಾಖಲಾತಿ ಆಂದೋಲನ ವ್ಯಾಪಕ ಪ್ರಚಾರ ಕುರಿತು ಕರಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ SDMC ಅಧ್ಯಕ್ಷರು ಮಕ್ಕಳಿಗೆ ಪುಷ್ಪ ನೀಡಿ ಸ್ವಾಗತಿಸಿ, ಮಾತನಾಡಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಪ್ರಧಾನ ಗುರುಗಳಾದ ಗುರುರಾಜ ರಜಪೂತ ಮಾತನಾಡಿ, ಸರ್ಕಾರದ ಉಚಿತ ಸೌಲಭ್ಯಗಳನ್ನು, ಉಚಿತ ಶಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ಸಮುದಾಯದ ಪಾತ್ರ ಬಹಳ ಪ್ರಮುಖವಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ SDMC ಸದಸ್ಯರು, ಗ್ರಾ ಪಂ ಸದಸ್ಯರು, ಊರಿನ ಹಿರಿಯರು, ಶಾಲಾ ಶಿಕ್ಷಕರ ಬಳಗ, ಅಡುಗೆ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದು, ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ:
ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿನಿಯರು ಕುಂಭ ಹೊತ್ತು ದಾಖಲಾತಿ ಆಂದೋಲನದ ಪ್ರಭಾತಪೇರಿಯಲ್ಲಿ ಭಾಗವಹಿಸಿದ್ದರ ಮೂಲಕ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು ಶಾಲೆಯ ಹಳೆಯ ವಿದ್ಯಾರ್ಥಿನಿಯರು ಕುಂಭ ಹೊತ್ತು ದಾಖಲಾತಿ ಆಂದೋಲನದ ಪ್ರಭಾತ ಫೇರಿಯಲ್ಲಿ ಭಾಗವಹಿಸಿದ್ದರು. ತಾಯಂದಿರು ಹಾಗೂ ಶಿಕ್ಷಕರು ನೂತನವಾಗಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಆರತಿ ಬೆಳಗಿ ಸ್ವಾಗತಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ವೀರನಗೌಡ ಮಾಗಿ, ಬಿ ಆರ್ ಪಿ ಗಿರಿಯಪ್ಪ ಆಲೂರ, ಸಿಆರ್‌ಪಿ ಸಂಗಪ್ಪ ಚಲವಾದಿ, ಎಸ್‌ಡಿಎಂಸಿ ಅಧ್ಯಕ್ಷ ರಾಮನಗೌಡ ಪವಾಡಿಗೌಡ್ರ ಮುಖ್ಯಗುರು ಎಂ ಜಿ ಬಡಿಗೇರ, ಸಂಗಪ್ಪ ಈರಣ್ಣವರ, ಬಸವಂತಪ್ಪ ಕೊಣ್ಣೂರ ಶಿಕ್ಷಕ ಅಶೋಕ ಬಳ್ಳಾ ಸಿಬ್ಬಂದಿ ಉಪಸ್ಥಿತರಿದ್ದರು.
ತಿಮ್ಮಾಪುರ: ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ದಿನಾಂಕ 31-5- 024ರಂದು ಮುಂಜಾನೆ 10 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ಪ್ರಾರಂಭೋತ್ಸವ, ಜರುಗಿತು. ನಂತರ ಗ್ರಾಮದ ತಾಯಂದಿರು ಶಿಕ್ಷಕರು ನೂತನವಾಗಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ಸಿಹಿ ನೀಡುವ ಮೂಲಕ ಸ್ವಾಗತಿಸಲಾಯಿತು ನಂತರ ದಾಖಲಾತಿ ಆಂದೋಲನದ, ಪ್ರಭಾತಫೇರಿ, ಮೆರವಣಿಗೆಯು ಗ್ರಾಮದಾದ್ಯಂತ ಸಂಚರಿಸಿ ಜಾಗೃತಿ ಮೂಡಿಸುತ್ತ, ಶಾಲಾ ದ್ವಾರದ ಬಾಗಿಲಿಗೆ ಬಂದು ತಲುಪಿತು. ಈ ಸಂದರ್ಭದಲ್ಲಿ ಮುಖ್ಯ ಗುರು ಮಾತೆ ಕಸ್ತೂರಿ ಬೆಲ್ಲದ, ಸಹಶಿಕ್ಷಕರಾದ ಮಂಜುನಾಥ್ ಟಕ್ಕಳಿಕಿ ಬಸವರಾಜ, ತೋಟಿಗೇರ ಗೀತಾ ತಾರಿವಾಳ, ಎಂ ಬಿ ಮನಿಯರ್, ಕೆ ಕೆ ಮಿಂಚಿನಾಳ, ಹಾಗೂ ಅಡಿಗೆ ಸಿಬ್ಬಂದಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ