ಆಳ್ವಾಸ್ ಕಾಲೇಜಿನಲ್ಲಿ ‘ಶಿಕ್ಷಕ- ರಕ್ಷಕರ ಸಭೆ'

Upayuktha
0


ವಿದ್ಯಾಗಿರಿ: ‘ಮಕ್ಕಳಲ್ಲಿ ಕಲಿಕಾಸಕ್ತಿ ಮೂಡಿಸುವುದು ಶಿಕ್ಷಕರ ಹಾಗೂ ಪಾಲಕರ ಕರ್ತವ್ಯ' ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು. 


ಆಳ್ವಾಸ್ ಕಾಲೇಜಿನ ಪದವಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಪದವಿ ಕಾಲೇಜಿನ ದೃಶ್ಯ-ಶ್ರವಣ ಸಭಾಂಗಣದಲ್ಲಿ ಶನಿವಾರ ನಡೆದ 2024ನೇ ಸಾಲಿನ ‘ಶಿಕ್ಷಕ- ರಕ್ಷಕರ ಸಭೆ' ಯಲ್ಲಿ ಅವರು ಮಾತನಾಡಿದರು. 


ಪದವಿ ಕಲಿಯುವ ಹಂತವು ನಮ್ಮನ್ನು ಎತ್ತರಕ್ಕೇರಿಸುವ ಒಂದು ಮೆಟ್ಟಿಲು ಅಥವಾ   ಪಾತಾಳಕ್ಕಿಳಿಸುವ ಮೆಟ್ಟಿಲೂ ಆಗಬಹುದು. ಅದು ವಿದ್ಯಾರ್ಥಿಗಳ ಮೇಲೆ ನಿಂತಿರುತ್ತದೆ. ನಾವು ಇಲ್ಲೇಕೆ ಇದ್ದೇವೆ? ಈ ವಿಭಾಗವನ್ನು ಆಯ್ಕೆ ಮಾಡಿರುವುದು ಏಕೆ? ಇದೆಲ್ಲವನ್ನೂ ಸರಿಯಾಗಿ ಅರಿತಿರಬೇಕು. ಪ್ರತಿಯೊಬ್ಬರು ಅವರ ಬೆಳವಣಿಗೆ, ಏರಿಳಿತ, ಜ್ಞಾನದ ಮಟ್ಟ ಎಲ್ಲದಕ್ಕೂ ಅವರವರೇ ಕಾರಣರಾಗಿರುತ್ತಾರೆ ಎಂದರು. 


ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ‘ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಶೈಕ್ಷಣಿಕ ಸಂಸ್ಥೆ ಕಾರ್ಯನಿರ್ವಹಿಸಬೇಕು. ಕೇವಲ ಜ್ಞಾನ ನೀಡುವ ಕಾರ್ಯವಾಗದೇ ಮಕ್ಕಳ ಮನಸ್ಸು ಕಟ್ಟುವ ಕಾರ್ಯವಾಗಬೇಕು. ಪಾಲಕರೇ ಮಕ್ಕಳ ಮೊದಲ ಶಿಕ್ಷಕರಾಗಬೇಕು. ಶಿಕ್ಷಕರು ವಿದ್ಯಾರ್ಥಿಗಳ ಎರಡನೇ ಪಾಲಕರಾಗಬೇಕು. ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕ, ಪೋಷಕ, ವಿದ್ಯಾರ್ಥಿಗಳ ಪಾತ್ರದ ಹೊಣೆಯನ್ನು ಹೊತ್ತು ಸರಿಯಾಗಿ ನಡೆದರೆ ಜೀವನದಲ್ಲಿ ಒಳ್ಳೆಯ ಫಲಿತಾಂಶ ದೊರೆಯುತ್ತದೆ ಎಂದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಪಾಲಕರು, ‘ಮಕ್ಕಳಲ್ಲಿ ಆಚಾರ, ವಿಚಾರ ಒಳ್ಳೆಯ ಶಿಸ್ತನ್ನು ಕಲಿಸುವುದು ಕಾಲೇಜಿನ ಆದ್ಯ ಕರ್ತವ್ಯವಾಗಿದೆ. ನಾವು ಪದವಿ ತೇರ್ಗಡೆ ಹೊಂದಿದಾಗ ಖುಷಿಯಾಗಿತ್ತು. ಅದಕ್ಕಿಂತಲೂ ಹೆಚ್ಚು ಈಗ ಮಗಳು ತೇರ್ಗಡೆಯಾದಾಗ ಆಗಿದೆ ಎಂದು ಸಂತೋಷ ಹಂಚಿಕೊಂಡರು. 


‘ನಾವು ಕಲಿಯಬೇಕಾದರೆ ನಮಗೆ ಹೆಚ್ಚಿನ ಕಷ್ಟವಿತ್ತು,  ನಾವು ಕಲಿಯಲಿಲ್ಲವಾದರೂ ಇಂದು ಮೊದಲು ನಾವು ನಮ್ಮ ಮಕ್ಕಳಿಗೆ ಕಲಿಸಲು ಮುಂದಾಗಬೇಕು’ ಹಲವು ಪಾಲಕರು ಶಿಕ್ಷಣದ ಮಹತ್ವ ಸಾರಿದರು.


 ಮಂಗಳೂರು ವಿವಿ 2023ರ ಸಾಲಿನಲ್ಲಿ  ನಡೆಸಿದ  ಅಂತಿಮ ವಿವಿ ಪರೀಕ್ಷೆಯಲ್ಲಿ ಸೈನ್ಸ್ ವಿಭಾಗದಲ್ಲಿ ಕ್ರಮವಾಗಿ 7 ಹಾಗೂ 8 ನೇ ರ‍್ಯಾಂಕ್ ಗಳಿಸಿದ ಅರ್ಪಿತಾ  ಹಾಗೂ ನಿರೀಕ್ಷಾರನ್ನು ಸನ್ಮಾನಿಸಲಾಯಿತು. 


ಸಾಂಸ್ಕೃತಿಕ ಹಾಗೂ ಎನ್‌ಸಿಸಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ವನ್ಯಶ್ರೀ, ಮನೀಶ್ ಎಂ, ಮುಕ್ತ, ಶೃತಿ ಭಗವಾನ್ ಹಾಗೂ ವಿದ್ಯಾಶ್ರೀ ಅವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.  ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳಾದ ಸ್ಪರ್ಶ, ಅನಘ ಎಂ,  ರಕ್ಷಿತ್ ಕುಮಾರ್, ಸಿಮ್ರಾ ಹೆಸದಮ್, ಪ್ರಜ್ಞಾ ಶೆಟ್ಟಿ, ಶ್ರೇಯಾ, ದಿವ್ಯಶ್ರೀ, ತೇಜಸ್ವಿನಿ, ಅನ್ವಿತಾ, ಸುಧೀಕ್ಷಾ, ಅಂಕಿತಾ, ತೃಪ್ತಿ ಅವರಿಗೆ ಬಹುಮಾನ ನೀಡಲಾಯಿತು. 


ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷ ಜಯ ಗೌರಿ,  ಉಪಾಧ್ಯಕ್ಷ ಹರಿಣಾಕ್ಷಿ ಹಾಗೂ ಸಂಘದ ಸದಸ್ಯರಾದ ಶೋಭಾ, ಲೀಲಾಧರ್ ಶೆಟ್ಟಿಗಾರ್, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥೆ ಶ್ವೇತಾ ಡಿ ಶೆಟ್ಟಿ ಇದ್ದರು.  ಸೂಕ್ಷö್ಮ ಜೀವಶಾಸ್ತç ವಿಭಾಗದ ಮುಖ್ಯಸ್ಥೆ ರಮ್ಯಾ ರೈ ಎಂ. ಸ್ವಾಗತಿಸಿ, ಪದವಿ ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ದಿಶಾ ಶೆಟ್ಟಿ ವಂದಿಸಿ, ಸ್ಪರ್ಶಾ ಪಂಜಿಕಲ್ ನಿರೂಪಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top