ಸಿಂಪಲ್ ಸುನಿ ಸರಳ ಕಥೆ..

Upayuktha
0


ಲ್ಲಾ ಸಿನಿಮಾ ಪ್ಯಾನ್ ಇಂಡಿಯಾ ಸಾಲಿನಲ್ಲೆ ಬರಬೇಕು, ಎಲ್ಲಾ ಚಿತ್ರ ಕೆಜಿಫ್, ಆರ್ ಆರ್ ಆರ್ ನಂತೆ ಆಕ್ಷನ್ ಕಟ್ ಇದ್ದಲಿ ಹಿಟ್ ಆಗುವುದು ಅನ್ನುವುದು ಆದರೆ!!


ಕನ್ನಡ ಚಿತ್ರರಂಗದ ಫ್ಯಾಮಿಲಿ ಕಥಾಧಾರಿತ ಚಿತ್ರಗಳದ " ಅಮೃತ ವರ್ಷಿಣಿ, ಮಿಲನ, ತುತ್ತ ಮುತ್ತ ಈ ಚಿತ್ರಗಳ ಯಶಸ್ಸಿಗೆ ಕಾರಣ ಏನು?


ಹೊಡಿ ಬಡಿ ಯುಗದಲ್ಲಿ ಸಿಂಪಲ್ ಆಗಿ ತೆರೆಗೆ ತಂದು ಪ್ರೇಕ್ಷರರ ಗಮನ ಸೆಳೆದು ಮನೆ ಮಾತಾದ ಸಿನಿಮಾ ಈ "ಒಂದು ಸರಳ ಪ್ರೇಮ ಕಥೆ"


ಚಿತ್ರದ ಸುತ್ತ ಒಂದು ಹಾಡಿನ ಆವರಣ ಕೊಟ್ಟು ಪೂರ್ತಿ ಕಥೆಯನ್ನು ಒಂದು ಇಂಚು ಕಥೆ  ದಾರಿ ಕೆಡದೆ ಸಾಗಿಸುವ ಕಲೆ ಸುನಿಯವರಿಗೆ ಮಾತ್ರ ಸೀಮಿತ ಅನಿಸುತ್ತದೆ. ಎಷ್ಟೋ ದಿವಸಗಳದ ಬಳಿಕ ಸಂಗೀತಾ ಪ್ರೇಮ ಕಥಾ ಮತ್ತೊಮೆ ಕಾಣದೊರಕಿದೆ.


ಆರಂಭದಿಂದ ಕುಟುಂಬ ಎಂದರೆ ಏನು, ಅಪ್ಪ ಮಗನ ಬಾಂಧವ್ಯ, ಅಜ್ಜಿಯ ಕಿವಿ ಮಾತು, ಟ್ವಿಸ್ಟ್ ಪ್ರೀತಿ ಕಲಹ, ನಡು ನಡುವಿನಲ್ಲಿ ಹಾಸ್ಯ, ಚಿತ್ರದಲ್ಲಿ ಅಚ್ಚುಕಟ್ಟಾಗಿ ರೂಪಕವಾಗಿದೆ.


ಎರಡು ಬೇರೆ ಬೇರೆ ಕುಟುಂಬ ಒಂದಾಗಿ ಒಂದೇ ಮನೆಯಲ್ಲಿ ಸಾಗುವ ರೀತಿ ಇದು ಒಂದು ಹೊಸ ರೀತಿಯ ಅನುಭವ.


ಆಯ್ಕೆ ಮಾಡಿದ ನಟರು, ನಟನೆ ಅವರ ಪಾತ್ರಗಳನ್ನು ಒಂದರ ಮೇಲೆ ಒಂದು ಬಹಳ ಚೆನ್ನಾಗಿ ನೆಯಿದಿದ್ದಾರೆ.


ಕಥೆಯ ಜೊತೆಗೆ ನಾಟಿ ಬೆಂಗಳೂರಿನ ಭಾಷೆ ಇನ್ನಷ್ಟು ಮಜಾ ತಂದಿದೆ.


ಎಲ್ಲಿಯೂ ಕೂಡ ಅನವಶ್ಯಕ ಘಟನೆ ತಂದ್ದಿದಾರೆ ಎಂದು ಅನಿಸುವುದು ಇಲ್ಲ.


ಚಿತ್ರದಲ್ಲಿ ನೋಡುವುದು ಆದರೆ " ಅತಿ" ಎಂಬ ಪಾತ್ರದಲ್ಲಿ ಕಂಡು ಬರುವ ವಿನಯ್ ರಾಜಕುಮಾರ್ ಅವರ ಪಾತ್ರ ಪರಿಚಯ ಬಹಳ ಹಿಡಿಸಿತು. ಬಹಳ ಸಾಧಾರಣವಾಗಿ  ತೆಗೆದು ಕೊಂಡಿದ್ದರು ವಿಪರೀತ ನಾಟು ವಂತದ್ದು. " ನನ್ನ ಎದೆ ಒಳಗಡೆ ಒಂದು ಫೀಲ್ ಇದೆ ಆ ಫೀಲ್ ಯಿಗೆ ಮ್ಯಾಚ್ ಆಗೋರು ಸಿಗಬೇಕು " ಅನ್ನುವ ಸಿಂಪಲ್ ಲೈನ್ಯಿಂದ ಇಟ್ಟು ಕೊಂಡು ಕಥೆ ಮುಂದುವರೆಯುತ್ತದೆ.


ಹಿರಿಯ ಸಾಧು ಮಹಾರಾಜ್ ಅವರನ್ನು ಸಂಗೀತಾ ನಿರ್ದೇಶಕರ ಪಾತ್ರದಲ್ಲಿ ಮೂಡಿಸಿದ್ದಾರೆ. 2-3 ಸಾರಿ ಪರದೆ ಮೇಲೆ ಬಂದು ಹೋದರು ಜನರನ್ನು ನಗಿಸುವಲ್ಲಿ ಮತ್ತೊಮ್ಮೆ ಗೆದ್ದಿದಾರೆ. 


ಮೂಕನಗಬೇಕು, ಜಗದೊಳು ಜ್ವಖ್ಯಾ ಗಿರಬೇಕು. ಈ ಪದ್ಯಕ್ಕೆ ಹೊಸ ಕಳೆ ಹಾಕಿ ಜನರನ್ನು ಮತ್ತೆ ರಂಜಿಸುವಂತೆ ಮಾಡಿದ್ದಾರೆ. ಎಷ್ಟೇ ಸಾರಿ ಬಂದು ಹೋದರು ಏನು ಅನಿಸದ ನನಗೆ ಕೊನೆಯಲ್ಲಿ ಬಿಜಿಮ್ ನೊಂದಿಗೆ ಈ ಹಾಡು ಪ್ರಸಾರವಾದಾಗ ಮೈ ಜುಮ್ ಎನಿಸಿತು. ಚಿತ್ರದಲ್ಲಿ ಕಂಡು ಬರುವ ಪ್ರತಿ ಗೀತೆಯೂ ಮನಸ್ಸಿಗೂ ಹಾಗೂ ಕಿವಿಗೂ ಕೇಳಲು ಬಹಳ ಹಿತ ಅನಿಸುತ್ತದೆ.


ಚಲನಚಿತ್ರದ ನಾಯಕಿ ನಟಿ ಸ್ವಸಿಷ್ಠ ಕೃಷ್ಣನ್ ಮೂಲತಃ ಟಾಲಿವುಡ್ ನವರು ಆದರೂ ನಟನೆಯಲ್ಲಿ ಪ್ರಸ್ತುತ ಘಟನೆಗೆ ಕೊಡುವ ಭಾವಭಿನಯ ನಮ್ಮವರೆ ಎಂದು ಭಾಸ ಪಡಿಸುತ್ತದೆ.

ಅನುರಾಗ ಎಂಬ ಪಾತ್ರದಲ್ಲಿ ಕಂಡು ಬರುವ ಇವರು ಪತ್ರಿಕೋದ್ಯಮಿ ಆಗಿ ಮೂಡಿಬರುತ್ತಾರೆ. ಸಮಾಜದ ಆಗೂ ಹೋಗುಗಳ ವಿರುದ್ಧ ಧ್ವನಿ ಎತ್ತುತ ತನ್ನ ಜೇವನ ಸಂಗತಿ " ನಿಸ್ವಾರ್ಥಿಯಾಗಿ " ಇರಬೇಕು ಎಂದು ಆಶಿಸುತ್ತ ಇರುವಳು.

ಆ ಅಂದರೆ ಅಂತ್ಯಕ್ಷರಿ ಎಂಬ ಕಾರ್ಯಕ್ರಮದಲ್ಲಿ " ಮೂಕನಗಬೇಕು ಎಂಬ ಸಂಗೀತಾ ಹಾಡುವರು ಇದನ್ನು ಹುಡುಕುತ್ತ ; ಹಿಂಬಾಲಿಸುತ್ತ ಹೋಗುವಗ ಸಿಗುವ ಹಂತಗಳು ಪ್ರೀತಿಸುವ ಹುಡುಗಿ, ಅದರ ನಡುವೆ ನಾಯಕನ ಮದುವೆ ಎಲ್ಲವೂ ನಾಯಕನ ಕಡೆಯಿಂದ ಸಿಗುವ ಕಥೆಯ ತಿರುಳು.

ಇನ್ನು ನಾಯಕಿ ಕಡೆಯಿಂದ ಸಾಕಷ್ಟು ಇವೆ ಇದನ್ನು ನೀವೇ ಖುದ್ದಾಗಿ ನೋಡಬೇಕು.


ಸಿನಿಮಾ ನೋಡಿ ಮುಗಿಸಿದಾಗ ಒಂದು ಫೀಲ್ ಇರುತ್ತದೆ. " ಅಬ್ಬಾ ಎಂತ ಸಿನಿಮಾ! ಹೀಗೆ ಆಗಿದ್ರೆ, ಹಾಗೆ ಆಗಿದ್ರೆ? ಅನ್ನೋ ಪ್ರಶ್ನೆ ಇದ್ದೆ ಇರುತ್ತೆ. ಈ ಚಿತ್ರದಲ್ಲಿ ಪ್ರಶ್ನೆ ಪದಕ್ಕೆ ಜಾಗವಿಲ್ಲ. ಎಲ್ಲಾ ಬದಿ ಇಂದಲೂ ಸೂಕ್ತ ಚಿನ್ನೆ ಇಟ್ಟು ಕಥೆ ಮುಗಿಸಿದ್ದಾರೆ.


ಕಥೆಯಲ್ಲಿ ಎಲ್ಲಾ ಭಾವನೆಗಳನ್ನು ಪೂರ್ತಿಯಾಗಿ ಒಪ್ಪಿಸುವಲ್ಲಿ ಸಿಂಪಲ್ ಸುನಿ ಈ ಸಿನಿಮಾದಲ್ಲಿ ಗೆದ್ದಿದರೆ. ಚಲನಚಿತ್ರ ಸಿನಿಮಾ ಮಂದಿರದಲ್ಲಿ ಜನಕ್ಕೆ ತಲುಪದಿದ್ದರೂ ಓ.ಟಿ.ಟಿ ಪ್ಲಫಾರ್ಮ್ ನಲ್ಲಿ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದು ಸಿಂಪಲ್ ಸುನೀಯ ಒಂದು ವಿರಳ, ಅಲ್ಲ ಸರಳ ಪ್ರೇಮ ಕಥೆ.



-ರಕ್ಷಿತ್ ಆರ್ ಪಿ



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top