ತಿಮ್ಮಾಪುರ: ತಿಮ್ಮಾಪೂರ (ತಾ||ಹುನಗುಂದ) ಗ್ರಾಮದಲ್ಲಿ ರೈತರು ವಿಶಿಷ್ಠ ರೀತಿಯಲ್ಲಿ ಜೋಡೆತ್ತುಗಳನ್ನು ಮೆರವಣಿಗೆ ಮಾಡುವ ಮೂಲಕ ಬಸವ ಜಯಂತಿಯನ್ನು ಸಂಭ್ರಮದಿoದ ಗ್ರಾಮದಲ್ಲಿ ಆಚರಿಸಿದರು.
ರೈತರ ಸಂಗಾತಿಗಳಾದ ಎತ್ತುಗಳನ್ನು ಬೆಳ್ಳಿಗೆಯಿಂದ ಶುಚಿಗೊಳಿಸಿ ಬಣ್ಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ನೀಡಲಾಯಿತು. ಮಾರುತೇಶ್ವರ ಓಣಿ, ಬಸವೇಶ್ವರ ಓಣಿ ಮತ್ತು ವಿವಿಧ ಓಣಿಯ ರೈತರು 5ಕ್ಕೂ ಹೆಚ್ಚು ಜೋಡುಗಳನ್ನು ಹಾಗೂ ಜಗಜ್ಯೋತಿ ಬಸವೇಶ್ವರರ ಬಾವಚಿತ್ರವನ್ನು ಗ್ರಾಮದಲ್ಲಿ ವಾದ್ಯ ಮೇಳದೊಂದಿಗೆ ವೈಭವದಿಂದ ಮೆರವಣಿಗೆ ಮಾಡಲಾಯಿತು. ಇದಕ್ಕೆ ಮೊದಲು ಮಾರುತೇಶ್ವರ ಹಾಗೂ ಬಸವೇಶ್ವರ ದೇವಾಲಯರಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮಧ್ಯಾಹ್ನ ಪ್ರಾರಂಭಗೊoಡು. ಸಾಯಂಕಾಲದವರಿಗೆ ಜರುಗಿದ ಜೋಡೆತ್ತುಗಳ ಮೆರವಣಿಗೆಯಲ್ಲಿ ಗ್ರಾಮದ ರೈತರು ಯುವಕರು ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ