ಧರ್ಮ, ನಂಬಿಕೆಯ ಮೇಲೆ ಯಕ್ಷಗಾನ ಬೆಳೆದಿದೆ: ವೇ. ಮೂ. ವೆಂಕಟ್ರಮಣ ಅಸ್ರಣ್ಣ

Upayuktha
0

ಮಂಗಳೂರು: ಯಕ್ಷಗಾನವು ಶುದ್ಧ ಧಾರ್ಮಿಕ ಕಲೆ. ಧರ್ಮಪ್ರಸಾರದ ಜೊತೆ ಜೊತೆಯಲ್ಲೇ ನಮ್ಮ ಪೌರಾಣಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಸಾಗಿವೆ. ದೇವಿ ಮಹಾತ್ಮ್ಯೆಯು ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲು ಅದೇ ಕಾರಣ. ಕ್ಷೇತ್ರಗಳ ಮೂಲಕ ಹೊರಡುವ ಮೇಳಗಳೂ ಇದೇ ಸಂದೇಶವನ್ನು ಸಾರುತ್ತಿವೆ. ಸರಯೂ ಮಕ್ಕಳ ಮೇಳವೂ ಇದೇ ತತ್ತ್ವದ ಮೇಲೆ ಬೆಳಗಲಿ" ಎಂದು ಸರಯೂ ಸಪ್ತಾಹದ ಮೂರನೇ ದಿನದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು.


ಕಟೀಲು ಮೇಳದ ಪ್ರಧಾನ ಸ್ತೀ ವೇಷಧಾರಿ  ಅರುಣ್ ಕುಮಾರ್ ಕೋಟ್ಯಾನ್‌ರನ್ನು ಯಕ್ಷ ಸರಯೂ ಬಿರುದಿತ್ತು ಸನ್ಮಾನಿಸಲಾಯಿತು. ಪೂರ್ಣಿಮಾ ಪ್ರಭಾಕರ ರಾವ್ ಅಭಿನಂದನಾ ಪತ್ರ ವಾಚಿಸಿದರು.


ಪ್ರದೀಪಕುಮಾರ್, ಕಲ್ಕೂರ,ಕದ್ರಿ ದೇವಳದ ಆಡಳಿತ ಮಂಡಳಿಯ ಸದಸ್ಯೆ ನಿವೇದಿತಾ ಶೆಟ್ಟಿ, ಜನಾರ್ದನ ಹಂದೆ, ಮಾಧವ ನಾವಡ, ಸುಧಾಕರ ರಾವ್, ಪೇಜಾವರ ಉಪಸ್ಥಿತರಿದ್ದರು. ಬಳಿಕ ಶೂರ್ಪನಖಾ ವಧೆ ಪ್ರಸಂಗ ಸಂಪನ್ನಗೊಂಡಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top