ಬದಿಯಡ್ಕದಲ್ಲಿ 'ರಂಗಸಿರಿ' ವತಿಯಿಂದ ಯಕ್ಷಗಾನ ನಾಟ್ಯ, ಹಿಮ್ಮೇಳ, ಶಾಸ್ತ್ರೀಯ ಸಂಗೀತ ತರಗತಿ

Upayuktha
0

ಪ್ರಾತಿನಿಧಿಕ ಚಿತ್ರ


ಬದಿಯಡ್ಕ: ರಂಗಸಿರಿ ಸಾಂಸ್ಕೃತಿಕ ವೇದಿಕೆ (ರಿ) ವತಿಯಿಂದ ಬದಿಯಡ್ಕದ ನವಜೀವನ ವಿದ್ಯಾಲಯದಲ್ಲಿ ಯಕ್ಷಗಾನ ನಾಟ್ಯ, ಹಿಮ್ಮೇಳ ತರಗತಿ ಹಾಗೂ ಶಾಸ್ತ್ರೀಯ ಸಂಗೀತ ತರಗತಿಗಳನ್ನು ನಡೆಸಲು ನಿರ್ಧರಿಸಲಾಗಿದೆ. ಯಕ್ಷಗಾನ ನಾಟ್ಯ, ಹಿಮ್ಮೇಳ ತರಗತಿಗಳು ಪ್ರತೀ ವಾರಕ್ಕೊಂದು (ಶನಿವಾರ/ಭಾನುವಾರ) ನಡೆಯಲಿದೆ. ಶಾಸ್ತ್ರೀಯ ಸಂಗೀತ ತರಗತಿ ಪ್ರತಿ ಭಾನುವಾರ ನಡೆಯಲಿದೆ.


ಈ ತರಗತಿಗಳಿಗೆ ಸೇರಲು ವಯಸ್ಸಿನ ಮಿತಿಯಿಲ್ಲ. ಆಸಕ್ತಿ ಮಾತ್ರವೇ ಮಾನದಂಡವಾಗಿರುತ್ತದೆ. ಯಕ್ಷಗಾನದ ಜೊತೆಗೆ ಯೋಗ, ವ್ಯಕ್ತಿತ್ವ ವಿಕಾಸ, ಕ್ರಾಫ್ಟ್ ಮುಂತಾದ ಕಾರ್ಯಾಗಾರಗಳನ್ನು ಉಚಿತವಾಗಿ ನಡೆಸಲಾಗುವುದು. ತರಬೇತಿ ಬಳಿಕ ರಂಗಸಿರಿಯ ಪ್ರದರ್ಶನ ತಂಡದಲ್ಲಿ ಊರಪರವೂರ ಕಾರ್ಯಕ್ರಮಗಳಲ್ಲಿ ಅವಕಾಶ ದೊರೆಯಲಿದೆ.


ಜೂನ್ ಎರಡನೇ ವಾರದಲ್ಲಿ ನೂತನ ಬ್ಯಾಚ್ ಉದ್ಘಾಟನೆ ನಡೆಸಲು ಉದ್ದೇಶಿಸಲಾಗಿದೆ. ತರಗತಿಗೆ ಸೇರಲಿಚ್ಛಿಸುವವರು ಕೂಡಲೇ ಈ ಕೆಳಗಿನ ಗೂಗಲ್ ಫಾರ್ಮ್ ಭರ್ತಿಗೊಳಿಸ ಬೇಕಾಗಿ ಕೋರಲಾಗಿದೆ.

https://forms.gle/YcMq63eva99VVwFe6


ಹೆಚ್ಚಿನ ವಿವರಗಳಿಗೆ: 9480147062 / 9633876833 ಸಂಪರ್ಕಿಸಬಹುದೆಂದು ರಂಗಸಿರಿ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
To Top