ಕದ್ರಿ: ಯಕ್ಷ ಶಿಕ್ಷಣ ಇಂದಿನ ಮಕ್ಕಳಲ್ಲಿ ವಿಶೇಷ ಶಕ್ತಿಯನ್ನು ನೀಡಿ ಸಮಾಜಮುಖಿ ಕಾರ್ಯಗಳನ್ನು ಮಾಡಲು ಅವರನ್ನು ಸಶಕ್ತಗೊಳಿಸುತ್ತದೆ. ಅಲ್ಲದೇ, ಅಲೆವೂರಾಯರಂತಹ ಯಕ್ಷಗುರುಗಳು ಶಾಲಾ/ಕಾಲೇಜುಗಳಲ್ಲಿ ನಾಟ್ಯ ತರಗತಿಗಳನ್ನು ನಡೆಸಿ ಹವ್ಯಾಸಿಗಳನ್ನೂ ವ್ಯವಸಾಯಿಗಳ ಹಂತವನ್ನು ತಲುಪಿಸುತ್ತಾರೆ. ನಮ್ಮ ವಿದ್ಯಾರತ್ನ ಸಂಸ್ಥೆಗಳಲ್ಲೂ ಪಠ್ಯದ ಜೊತೆಗೆ ಯಕ್ಷಗಾನವನ್ನೂ ಕಲಿಸುತ್ತೇವೆ. ಅವರು ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲೂ ಮುಂದಿರುತ್ತಾರೆ. ಕಳೆದ ಇಪ್ಪತ್ತನಾಲ್ಕು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಶುಭ ಹಾರೈಸುತ್ತೇನೆ" ಎಂದು ವಿದ್ಯಾರತ್ನ ಸಂಸ್ಥೆಗಳ ಅಧ್ಯಕ್ಷ ಉಳಿದೊಟ್ಟು ರವೀಂದ್ರ ಶೆಟ್ಟಿ ಅವರು ಹೇಳಿದರು.
ಅವರು ಸರಯೂ ಮಕ್ಕಳ ಮೇಳದ ಸಪ್ತಾಹದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕ ವರ್ಕಾಡಿ ರವಿ ಅಲೆವೂರಾಯ ಪ್ರಸ್ತಾವನೆ ಮಾಡಿ ಅತಿಥಿಗಳನ್ನು ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ್ ರವರು ಚೇತನಾ ವಿಕಾಸ ಕೇಂದದ ಬಗ್ಗೆ ಅಭಿನಂದಿಸಿದರು. ಅಮ್ಮುಂಜೆ ಜನಾರ್ಧನರು ಪಟ್ಟಗುತ್ತು ಮಹಾಬಲ ಶೆಟ್ಟರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು.
ಕದ್ರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್ರೀಮತಿ ಕುಸುಮಾ ದೇವಾಡಿಗರು ಸಂಸ್ಥೆಯ ಬೆಳವಣಿಗೆಯ ಬಗ್ಗೆ ಶ್ಲಾಘಿಸಿದರು. ಸಂಸ್ಥೆಯ ಗೌರವ ಸಂಚಾಲಕ ಧರ್ಮದರ್ಶಿ ಡಾ|| ಹರಿಕೃಷ್ಣ ಪುನರೂರು ಅಧ್ಯಕ್ಷತೆ ವಹಿಸಿದ್ದರು. ದಿವ್ಯಾಂಗ ಮಕ್ಕಳ ಶಾಲೆಯ ಚೇತನಾ ವಿಕಾಸ ಕೇಂದ್ರ ಶಾಲೆಯನ್ನು ಒಂದು ಸಂಸ್ಥೆಯ ನೆಲೆಯಲ್ಲಿ ಗೌರವಿಸಿ- ಸನ್ಮಾನಿಸಲಾಯಿತು. ಅಂತೆಯೇ ಯಕ್ಷಗಾನದ ಮೇಳದ ಯಜಮಾನರೂ, ಸಂಘಟಕರೂ ಆದ ಪಟ್ಲಗುತ್ತು ಮಹಾಬಲ ಶೆಟ್ಟಿಯವರನ್ನು "ಯಕ್ಷ ಸರಯೂ" ಬಿರುದಿತ್ತು ಸನ್ಮಾನಿಸಲಾಯಿತು.
ಶೀಗಳಾದ ಗಣರಾಜ್ ,ವರ್ಕಾಡಿ ಮಧುಸೂದನ ಅಲೆವೂರಾಯ, ಸಂತೋಷ್, ವರ್ಕಾಡಿ ಮಾಧವ ನಾವಡ, ಶ್ರೀಪ್ರಭಾಕರ ರಾವ್, ಪೇಜಾವರ್, ಕೃಪಾ ಖಾರ್ವಿ, ಮನ್ವಿತ್ ಬಿ.ಶೆಟ್ಟಿ, ಕಾವ್ಯ, ಲಿಖಿತಾ, ಕೃತಿ, ನಿತ್ಯಶ್ರೀ ಉಪಸ್ಥಿತರಿದ್ದರು. ಶೋಭಾ ಪೇಜಾವರರು ಧನ್ಯವಾದವಿತ್ತರು. ಸಭಾರಂಭದ ಮೊದಲು ಸರಯೂ ಸಂಸ್ಥೆ ಹಾಗೂ ಅತಿಥಿಗಳ ಕೂಡುವಿಕೆಯಿಂದ ಮೇದಿನಿ ನಿರ್ಮಾಣ ಸಭೆಯ ಬಳಿಕ ಮಹಿಷ ವಧೆ ಬಯಲಾಟ ನಡೆಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ