ಬಿಜೆಪಿ ಮುಖಂಡರು, ಕಾರ್ಯಕರ್ತರೇ ಕಾಂಗ್ರೆಸ್ ಸರಕಾರದ ಟಾರ್ಗೆಟ್ ಯಾಕೆ?: ಡಾ.ಭರತ್ ಶೆಟ್ಟಿ ವೈ ಪ್ರಶ್ನೆ

Chandrashekhara Kulamarva
0


ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತನ ಪರವಾಗಿ ಹೋಗಿದ್ದಾರೆ. ಯಾವುದೇ ಕಾನೂನು ಉಲ್ಲಂಘನೆಯಂತಹ ಕೆಲಸ ಮಾಡದೆ ಇದ್ದರೂ ಕಾಂಗ್ರೆಸ್ ಸರಕಾರ ಪೊಲೀಸ್ ಇಲಾಖೆಯನ್ನು ಬಳಸಿಕೊಂಡು ಸುಳ್ಳು ಕೇಸು ಹಾಕಿಸಿ ದ್ವೇಷ ಸಾಧನೆಯ ಕೆಲಸ ಮಾಡುತ್ತಿದೆ ಎಂದು ಮಂಗಳೂರು ಉತ್ತರ ಶಾಸಕ ಡಾ. ವೈ. ಭರತ್ ಶೆಟ್ಟಿ ಹೇಳಿದರು.


ಬಿಜೆಪಿ ನಾಯಕರನ್ನು ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಪಕ್ಷದ ಶಕ್ತಿ ಕುಂದಿಸುವ ಕೆಲಸ ಮಾಡುವುದನ್ನು ಬಿಡಿ. ನಿಮ್ಮ ಆಡಳಿತ ಶಾಶ್ವತ ಅಲ್ಲ, ನಮ್ಮ ಶಾಸಕರನ್ನು, ಕಾರ್ಯಕರ್ತರನ್ನು ಬಂಧನದ ಸಾಧನೆ ಮಾಡುವ ಮುನ್ನ ರಾಜ್ಯದಲ್ಲಿ ಆಗುತ್ತಿರುವ ಕೊಲೆ, ಸುಲಿಗೆ, ಭಯೋತ್ಪಾದನೆಯನ್ನು ಮಟ್ಟಹಾಕಿ ರಾಜ್ಯವನ್ನು ಮೊದಲು ರಕ್ಷಿಸಿ, ವಿಧಾನ ಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಹೇಳಿದವರನ್ನು ಬಂಧಿಸಿ ನಿಮ್ಮ ತಾಕತ್ತು ಪ್ರದರ್ಶಿಸಿ ಎಂದು ಅವರು ಆಗ್ರಹಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
To Top