ರಾಜ್ಯ ಬಿಜೆಪಿಗೆ ಹಿಡಿದ ಗ್ರಹಣದಿಂದ ಮುಕ್ತಿಯನ್ನು ಪ್ರಬುದ್ಧ ಮತದಾರರೇ ನೀಡಬೇಕಾಗಿದೆ. ಯಾವ ಶಾಸಕ ನಾಯಕ ಧುರೀಣ ಸಂಘ ಪರಿವಾರದಿಂದಲೂ ಸಾಧ್ಯವಾಗಲ್ಲ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮದೇವರ ಮಂಡಲೋತ್ಸವ ನಿಮಿತ್ತ ಎರಡು ತಿಂಗಳಿದ್ದೆವು. ಆಗಾಗ್ಗೆ ಆ ರಾಜ್ಯದ ರಾಜಧಾನಿ ಲಕ್ನೋಗೂ ಹೋಗಿ ಬರ್ತಾ ಇದ್ದೆವು. ಹೀಗಿರುವಾಗ ಅಲ್ಲಿನ ಪೋಲೀಸರು, ಜನರನ್ನ ಹೀಗೇ ಮಾತಾಡಿಸ್ತಾ ಇರ್ಬೇಕಾದ್ರೆ ಆಪ್ ಕಿದರ್ ಸೇ (ನೀವೆಲ್ಲಿಯವರು?) ಅಂತ ಕೇಳ್ತಾ ಇದ್ರು. ನಾವು ಕರ್ನಾಟಕದವ್ರು ಅಂತಾ ಇದ್ದೆವು. ಕೂಡ್ಲೇ ಆ ಕಡೆಯಿಂದ ಪ್ರಶ್ನೆಯ ಬಾಣ ನಮ್ಮೆಡೆಗೆ... ಕ್ಯಾ ಹೋಚುಕಾ ಹೇ ಕರ್ನಾಟಕ್ ಕಾ ಬಿಜೆಪಿ ಮೇ? ಇದರ್ ಸಬೀ ರಾಜ್ಯೋಂ ಮೇ ಬಿಜೆಪಿ ಜೀತ್ ಗಯೀಹೆ..ಮಗರ್ ಕರ್ನಾಟಕ್ ಮೇ ಬಿಜೆಪಿಮೇ ಪಾರ್ಟಿ ಕಾ ಹಾಲತ್ ಏಸಾ ಕ್ಯಾ ಹೇ? (ಏನಾಗಿದೆ ಕರ್ನಾಟಕದ ಬಿಜೆಪಿಗೆ? ಉತ್ತರದ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸ್ತದೆ. ಆದ್ರೆ ದಕ್ಷಿಣದಲ್ಲಿ ಸ್ವಲ್ಪ ಕರ್ನಾಟಕದಲ್ಲಿ ಚೆನ್ನಾಗಿತ್ತು. ಆದ್ರೆ ಯಾಕೆ ಈಗ ಅಲ್ಲಿ ಯಾಕೆ ಪಕ್ಷದ ಹೀನಾಯ ಸ್ಥಿತಿ?!! ಇಂಥ ಪ್ರಶ್ನೆ ನನಗೊಬ್ಬನಿಗೆ ಮಾತ್ರವಲ್ಲ; ನೂರಾರು ಜನರಿಗೆ ಆಗಿದೆ. ಅಲ್ಲಿನ ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಸ್ತೆ ಬೀದಿಗಳಲ್ಲಿ ಎಲ್ಲೇ ಸಂಚರಿಸುವಾಗ ನೂರಾರು ಕರ್ನಾಟಕದ ಪ್ರವಾಸಿಗರಿಗೆ ಇಂಥ ಪ್ರಶ್ನೆಗಳು ಎದುರಾಗಿದೆ ಅದರಲ್ಲೂ ಅನೇಕ ಮಿಲಿಟರಿ ಅಧಿಕಾರಿಗಳು ಪೊಲೀಸ್ ಅಧಿಕಾರಿಗಳು, ರಾಮಮಂದಿರದ ಸಿಬಂದಿ ಅಧಿಕಾರಿಗಳು ಈ ಪ್ರಶ್ನೆ ಕೇಳ್ತಾರೆ !!! ಹಾಗಾದ್ರೆ ಇಲ್ಲಿನ ಬಿಜೆಪಿಯ ಹದಗೆಟ್ಟ ಸ್ಥಿತಿಯ ಬಗ್ಗೆ ಇಡೀ ದೇಶದ ಬಿಜೆಪಿ ಅಭಿಮಾನಿಗಳಲ್ಲಿ ಅದೆಷ್ಟು ನೋವು ಹತಾಶೆ ಸಿಟ್ಟು ಆಕ್ರೋಶ ಕಳವಳ ಇದೆ ಅನ್ನೋದು ಸ್ಪಷ್ಟ.
ಆದ್ರೆ ಇದನ್ನು ಇಲ್ಲಿನ ಯಾವ ನಾಯಕರೂ ಸಂಘ ಪರಿವಾರವೂ, ಶಾಸಕರೂ ಪರಿಹರಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಇನ್ನೇನಿದ್ರೂ ಪ್ರಬುದ್ಧ ಮತದಾರರೇ ಪಕ್ಷಕ್ಕೆ ಸರಿಯಾದ ದಿಕ್ಕು ದೆಸೆ ತೋರಬೇಕಷ್ಟೆ. ಅದರ ಆರಂಭ ಶೀಘ್ರ ಆಗಬೇಕಾಗಿದೆ. ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆ ಯಲ್ಲಿ ಬಿಜೆಪಿಯ ಕಾರ್ಯಕರ್ತರ ಮತ್ತು ಕ್ಷೇತ್ರದ ಪದವೀಧರ ಮತದಾರರ ಧ್ವನಿಯಾಗಿ ಸ್ಪರ್ಧಿಸುತ್ತಿರುವ ಕೆ ರಘುಪತಿ ಭಟ್ರಿಗೆ ಮತನೀಡಿ ಗೆಲ್ಲಿಸುವ ಮೂಲಕ ಪಕ್ಷಕ್ಕೆ ರಾಜ್ಯದಲ್ಲಿ ಅಂಟಿದ ಗ್ರಹಣದಿಂದ ಮುಕ್ತಿ ಕೊಡಲು ಆರಂಭಿಸಬಹುದು ಅನ್ಸುತ್ತೆ. ಏನಿದ್ರೂ ಪ್ರಬುದ್ಧ ಮತದಾರರು ಈ ಬಗ್ಗೆ ಯೋಚಿಸಬೇಕಷ್ಟೆ.
- ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ