ವಿವೇಕಾನಂದ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟನೆ

Upayuktha
0


      

ಪುತ್ತೂರು: ನಮ್ಮ ಜೀವನದಲ್ಲಿ ಶಿಕ್ಷಣ ಮಾತ್ರ ಮುಖ್ಯವಲ್ಲ ಶಿಕ್ಷಣದೊಂದಿಗೆ ಬದುಕಿಗೆ ಪೂರಕವಾದ ಅಂಶಗಳು ಬಹುಮುಖ್ಯ. ನಾವು ನಮ್ಮ ಪರಿಸರ, ದೇಶ ಮತ್ತು ಮಣ್ಣು ಇವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಅರಿಯಬೇಕು. ಈ ಶಿಬಿರದಿಂದ ನೀವು ಯಾವೆಲ್ಲ ವಿಷಯಗಳನ್ನು ಕಲಿಯುತ್ತೀರೋ ಅವುಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವಿಷ್ಯದಲ್ಲಿ ಮುನ್ನಡೆಯಬೇಕು ಎಂದು ಶ್ರೀಕ್ಷೇತ್ರ ಹನುಮಗಿರಿಯ ಧರ್ಮದರ್ಶಿ ಶಿವರಾಮ ಪಿ. ಇವರು ಹೇಳಿದರು.


ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಪುತ್ತೂರು ಇದರ ನೇತೃತ್ವದೊಂದಿಗೆ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಶ್ರೀ ಗಜಾನನ ವಿದ್ಯಾಸಂಸ್ಥೆಗಳು, ಶ್ರೀಕ್ಷೇತ್ರ ಹನುಮಗಿರಿ ಇದರ ಆಶ್ರಯದಲ್ಲಿ ವಿಜ್ಞಾನ ಮತ್ತು ವೈಜ್ಞಾನಿಕ ಮನೋಧರ್ಮಕ್ಕಾಗಿ ಯುವಜನತೆ ಎಂಬ ಶಿರೋನಾಮೆಯಲ್ಲಿ ಕೌಶಲ್ಯ ಮತ್ತು ಉದ್ಯಮಶೀಲತ್ವದ ಅಭಿವೃದ್ಧಿಯತ್ತ ನಮ್ಮ ಚಿತ್ತ ಎಂಬ ಘೋಷಣೆಯೊಂದಿಗೆ 2023-24 ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರವು ಶ್ರೀ ಗಜಾನನ ವಿದ್ಯಾಸಂಸ್ಥೆಗಳು ಮತ್ತು ಶ್ರೀಕ್ಷೇತ್ರ ಹನುಮಗಿರಿ, ಈಶ್ವರಮಂಗಲ ಇಲ್ಲಿ ನಡೆದ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.


ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಮುರಳೀಕೃಷ್ಣ ಕೆ. ಎನ್ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆ ಎಂಬುದು ದೇಶದ ಅತ್ಯಂತ ದೊಡ್ಡ ಸೇವಾಸಂಸ್ಥೆ. ಸೇವೆ ಎಂಬುದು ನಮ್ಮ ಬದುಕಿನ ಅಂಗವಾಗಬೇಕು. ನಮ್ಮ ನಿತ್ಯಜೀವನದಲ್ಲಿ ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ಬದ್ಧತೆ ಎಂಬುದಿದ್ದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ವಿಷ್ಣು ಗಣಪತಿ ಭಟ್ ಅವರು ಮಾತನಾಡಿ, ಸೇವೆಯೆಂಬ ಯಜ್ಞದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಏನೇ ಎದುರಾದರೂ ಧೈರ್ಯದಿಂದ ಎದುರಿಸುತ್ತೇನೆಂಬ ಮನೋಧೈರ್ಯ ನಮ್ಮಲ್ಲಿ ಮೂಡಬೇಕು. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶಿಬಿರವು ಸಹಕಾರಿಯಾಗಲಿ ಎಂದು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.


ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಅನಂತಕೃಷ್ಣ ನಾಯಕ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕರಾದ ಮಾನಸ ಎ, ವಿಘ್ನೇಶ್ವರ ಶಾಸ್ತ್ರಿ, ವರ್ಷಿತ್ ಮತ್ತು ಮೈತ್ರಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾಧಿಕಾರಿ ಡಾ. ಅರುಣ್ ಪ್ರಕಾಶ್ ಸ್ವಾಗತಿಸಿ, ಶಿಬಿರಾರ್ಥಿ ಪ್ರಣಮ್ಯ ಯು. ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ವಿದ್ಯಾ ಕೆ. ಎನ್. ವಂದಿಸಿದರು.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top