ಹಿರಿಯ ಕಾದಂಬರಿಕಾರ್ತಿ ಲಲಿತಾ ಆರ್ ರೈಯವರಿಗೆ ಎಸ್‌ಸಿಐ ಪುತ್ತೂರು ಲಿಜನ್ ವತಿಯಿಂದ ಗೌರವ ಸತ್ಕಾರ

Upayuktha
0


ಮಂಗಳೂರು: ಚಿತ್ತಗಾಂಗಿನ ಕ್ರಾಂತಿವೀರರು (ಅನುವಾದ- 1949), ಮತ್ತೆ ಬೆಳಗಿತು ಸೊಡರು (ಕಥಾ ಸಂಕಲನ- 2005), ಇಂಟರ್ನೆಟ್ಟಿನ ಒಳಗೆ ಮತ್ತು ಇತರ ಕಥೆಗಳು (ಕಥಾ ಸಂಕಲನ- 2007), ಸೌಪರ್ಣಿಕ ಕಡತ್ ದ್ ವೈತರಣಿಗ್ (ತುಳು ಕಥಾ ಸಂಕಲನ- 2007), ದೇಸಾಂತರ (ತುಳು ಕಾದಂಬರಿ- 2009), ಬೋಂಟೆ ದೇರ್ಂಡ್ (ತುಳು ಕಾದಂಬರಿ- 2011), ಗ್ರಹಣ ಕಳೆಯಿತು (ಕಥಾ ಸಂಕಲನ- 2013), ಇವೆಲ್ಲದರ ಬರಹಗಾರ್ತಿ ಹಾಗೂ ಕಾದಂಬರಿ ಕರ್ತೃ ಇವರು ಪುತ್ತೂರಿಗೆ ಸೊಸೆಯಾಗಿ ಬಂದವರು.


ಪ್ರಸ್ತುತ ಮಂಗಳೂರಿನ ಮಡಿಲಲ್ಲಿ ವಾಸಿಸುತ್ತಿರುವ ಲಲಿತಾ ಆರ್ ರೈ ಅವರ ಸಾಧನೆಯ ಮೆಟ್ಟಿಲು ತುಂಬಾ ಜಟಿಲವೇ ಆಗಿತ್ತು. ಅವರ ಇಳಿ ಹರೆಯದ ಹೊತ್ತಲ್ಲಿ ಅವರನ್ನು ಅಂಕಣಕಾರ್ತಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ (SCI) ಪುತ್ತೂರು ಲೀಜನ್ ಅಧ್ಯಕ್ಷೆ ಮಲ್ಲಿಕಾ ಜೆ ಆರ್ ರೈ ಯವರು ತಮ್ಮ SCI ಪುತ್ತೂರು ತಂಡದೊಂದಿಗೆ ಶಾಲು, ಹಣ್ಣು ಹಂಪಲು ಹಾಗೂ ಪುಸ್ತಕವನ್ನು ನೀಡಿ ಲಲಿತಾ ಆರ್ ರೈ ಅವರನ್ನು ಸ್ವಗೃಹದಲ್ಲಿ ಸತ್ಕರಿಸಿದರು. ಸಂದರ್ಭದಲ್ಲಿ ಲಲಿತಾ ಆರ್ ರೈ ಯವರ ಕಿರಿಯ ಪುತ್ರಿ ಶ್ರೀಮತಿ ಕೃಪಾ ಅವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top