ಉಜಿರೆ: ವಿದ್ಯಾರ್ಥಿಗಳು ಪ್ರಕಟಿಸುವ ಸಂಶೋಧನಾ ಬರಹಗಳು ಉನ್ನತ ವೇತನ ಶ್ರೇಣಿಯ ವೃತ್ತಿ ಅವಕಾಶಗಳನ್ನು ಪಡೆದುಕೊಳ್ಳುವಲ್ಲಿ ಉಪಯುಕ್ತವಾಗುತ್ತವೆ ಎಂದು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಸುಧಾಕರ್ ವೈ.ಎನ್. ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಕಾಲೇಜಿನ ಸಂಶೋಧನೆ ಮತ್ತು ಅಭಿವೃದ್ಧಿ ಘಟಕವು ಸಂಶೋಧನಾ ಚಟುವಟಿಕೆಗಳ ಪ್ರಚಾರ ಕಾರ್ಯದಡಿಯಲ್ಲಿ ಎಸ್.ಡಿ.ಎಮ್. ಸ್ನಾತಕೋತ್ತರ ಕೇಂದ್ರದಲ್ಲಿ ಶನಿವಾರದಂದು ಆಯೋಜಿಸಿದ್ದ 'ವೈಜ್ಞಾನಿಕ ಸಂಶೋಧನಾ ಪ್ರಕಟಣೆಯ ಸ್ವರೂಪ ಮತ್ತು ವ್ಯಾಪ್ತಿ' ಎಂಬ ವಿಷಯದ ಕುರಿತು ವಿಷೇಶ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇವರು ಮಾತನಾಡಿದರು.
ವಿದ್ಯಾರ್ಥಿಗಳು ಗಳಿಸಿದ ಅಂಕಗಳಿಗಿಂತ ಪ್ರಕಟಣೆಯಾದ ಸಂಶೋಧನಾ ಬರಹಗಳ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು, ಸಂಶೋಧನಾ ಬರಹಗಳು ವೃತ್ತಿಯಲ್ಲಿ ಉನ್ನತ ವೇತನ ಶ್ರೇಣಿಯನ್ನು ಪ್ರಭಾವಿಸುವುದರಿಂದ ವಿಜ್ಞಾನದ ವಿಭಾಗಗಳಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಈಗಿನಿಂದಲೇ ಸಂಶೋಧನಾ ಬರಹಗಳನ್ನು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.
ತಾಂತ್ರಿಕ ಬುದ್ಧಿಮತ್ತೆ ವೃತ್ತಿ ಜೀವನದ ಬಹುತೇಕ ಎಲ್ಲಾ ಕ್ಷೇತ್ರಗಳನ್ನೂ ಆಕ್ರಮಿಸಿಕೊಂಡಿದೆ. ಆದರೆ ವಿಮರ್ಶಾತ್ಮಕ ಚಿಂತನೆಯ ಸೃಜನಶೀಲತೆಯು ತಾಂತ್ರಿಕ ಬುದ್ಧಿಮತ್ತೆಗಿಂತ ಮಾನವನನ್ನು ವೈಶಿಷ್ಟ್ಯ ಪೂರ್ಣವಾಗಿರಿಸುತ್ತದೆ. ಇಂತಹ ವಿಮರ್ಶಾತ್ಮಕ ಸಂಶೋಧನಾ ಬರಹಗಳು ಔದ್ಯೋಗಿಕ ವಲಯದಲ್ಲಿ ಪ್ರಾಧಾನ್ಯತೆ ಪಡೆದಿವೆ ಎಂದರು.
ವೈಜ್ಞಾನಿಕ ಸಂಶೋಧನಾ ಬರಹಗಳನ್ನು ಬರೆಯುವ ಮತ್ತು ಪ್ರಕಟಿಸುವ ಕಾರ್ಯತಂತ್ರಗಳನ್ನ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ, ಭೌತಶಾಸ್ತ್ರ ವಿಭಾಗಗಳ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಧ್ಯಯನ ವಿಭಾಗಗಳ ಡೀನ್ ಡಾ. ವಿಶ್ವನಾಥ್ ಪಿ, ಸಂಶೋಧನೆ ಮತ್ತು ಅಭಿವೃದ್ಧಿ ಘಟಕಗಳ ನಿರ್ದೇಶಕರಾದ ಡಾ. ಸೌಮ್ಯ ಬಿ.ಪಿ. ಹಾಗು ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ ಶಶಿಪ್ರಭಾ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ಕಲ್ಪಿತಾ ನೆರೆದವರನ್ನು ಸ್ವಾಗತಿಸಿದರು, ನಂದನಾ ವಂದಿಸಿದರು, ಕುಶಾಲ್ ಗೌಡ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ