ಉಜಿರೆ: ಸ್ವಸಾಮರ್ಥ್ಯದಕುರಿತ ಅಚಲವಾದ ನಂಬಿಕೆ ಮತ್ತು ನಕಾರಾತ್ಮಕ ಆಲೋಚನೆಗಳಿಂದ ದೂರವಿರುವಎಚ್ಚರಇದ್ದರೆ ಸಾಧನೆಯ ವಿಫುಲ ಅವಕಾಶಗಳು ದೊರಕುತ್ತವೆ ಎಂದು ಛಾಯಾಗ್ರಾಹಕ, ಸಂಕಲನಕಾರ ಹಾಗೂ ಸಾಕ್ಷ್ಯಚಿತ್ರ ಛಾಯಾಗ್ರಾಹಕ ವಿವೇಕ್‌ಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಉಜಿರೆಯಎಸ್.ಡಿ.ಎಮ್.ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಟಿ ಸೆಲ್‌ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಐಟಿ ಫೆಸ್ಟ್ ʼಏಕಶೂನ್ಯಂʼಕಾರ್ಯಕ್ರಮ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವನದಲ್ಲಿ ಗುರಿ ನಿಶ್ಚಯಿಸುವಾಗ ಆತ್ಮವಿಶ್ವಾಸ ಇರಬೇಕಾಗುತ್ತದೆ. ಇದರಿಂದ ಹಾದಿ ಯಾರಿಗೂ ಸೀಮಿತವಾಗದೇ ವಿಸ್ತಾರವಾಗುತ್ತದೆ. ಹೇರಳ ಅವಕಾಶಗಳು ದೊರಕುತ್ತವೆ. ಈ ನಿಟ್ಟಿನಿಲ್ಲಿ ವಿದ್ಯಾರ್ಥಿಗಳು ಆಲೋಚಿಸಬೇಕುಎಂದರು.
ಮುಂಬರುವ ವರ್ಷಗಳಲ್ಲಿಉತ್ತಮವೃತ್ತಿಜೀವನ ಸಿಗಬೇಕೆಂದಿದ್ದರೆ ಕೇವಲ ಒಂದು ಕೆಲಸ ಹಾಗೂ ಕೌಶಲ್ಯಅರಿತಿದ್ದರೆ ಸಾಲುವುದಿಲ್ಲ. ನಾವು ಮಲ್ಟಿಟಾಸ್ಕಿಂಗ್ ಆಗಿರುವುದುತುಂಬಾ ಅನಿವಾರ್ಯವಾಗಲಿದೆ. ಆದ್ದರಿಂದ ಆಲಸ್ಯ ದೂರವಿರಿಸಿ ಭವಿಷ್ಯದ ಬಗ್ಗೆ ಗಂಭೀರವಾಗಿ ವಿಚಾರ-ವಿನಿಮಯ ಮಾಡಿ, ಕಠಿಣ ಪರಿಶ್ರಮದ ಮಂತ್ರವೊಂದು ಇದ್ದರೆ ಯಶಸ್ಸಿನ ಕನಸು ನನಸಾಗುವುದು ಎಂದು ನುಡಿದರು.
ಉಜಿರೆ ಎಸ್.ಡಿ.ಎಮ್ ಕಾಲೇಜಿನ ಉಪಪ್ರಾಂಶುಪಾಲ ಪ್ರೊ.ಎಸ್.ಎನ್.ಕಾಕತ್ಕರ್ ಸಮಾರೋಪದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದರು. ಈ ರೀತಿಯ ಫೆಸ್ಟ್ ಗಳ ಆಯೋಜನೆಯ ಹಿಂದಿರುವ ಮೂಲ ಉದ್ದೇಶ ಭಾಗವಹಿಸುವ ಹಾಗೂ ಆಯೋಜಿಸುವ ವಿದ್ಯಾರ್ಥಿಗಳನ್ನು ತಮ್ಮ ಕಾಲಲ್ಲಿ ತಾವು ನಿಲ್ಲುವಂತೆ ಮಾಡಿ ಅವರ ಸರ್ವತೋಮುಖ ಬೆಳವಣಿಗೆಗೆ ದಾರಿ ಮಾಡಿಕೊಡುವುದೇ ಆಗಿದೆಎಂದು ಹೇಳಿದರು.
ಏಕಶೂನ್ಯಂ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 13ಕ್ಕೂ ಅಧಿಕ ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ವಿದ್ಯಾರ್ಥಿಗಳ ತಂಡ ಓವರ್‌ಆಲ್ ಚಾಂಪಿಯನ್ ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡರು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ತಂಡ ಕಾರ್ಯಕ್ರಮರನ್ನರ್ ಅಪ್ ಆಗಿ ಹೊರಹೊಮ್ಮಿದರು.
ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಶೈಲೇಶ್‌ಕುಮಾರ್, ಕಾರ್ಯಕ್ರಮದ ಉಪನ್ಯಾಸಕ ಸಂಯೋಜಕಿ ಅಕ್ಷತಾಕೆ, ಉಪನ್ಯಾಸಕಿ ದಿವ್ಯಾಯಾದವ್, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ಮನೀಶ್‌ಕುಮಾರ್ ಹಾಗೂ ರಕ್ಷಿತಾದಾಸ್ ಮತ್ತಿತರು ಉಪಸ್ಥಿತರಿದ್ದರು. ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ರಕ್ಷಿತಾದಾಸ್ ಸ್ವಾಗತಿಸಿ, ವಿದ್ಯಾರ್ಥಿ ಸಂಯೋಜಕ ಮನೀಶ್‌ಕುಮಾರ್ ವಂದಿಸಿದರು. ವಿಭಾಗದ ಅಧ್ಯಾಪಕಿ ಹರಿಣಿ ವಿಜೇತರನ್ನು ಘೋಷಿಸಿ ಮೋನಲ್‌ಜೆ.ಆರ್.ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ