ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ‘ಏಕಶೂನ್ಯಂ’ ಫೆಸ್ಟ್
ಉಜಿರೆ: ಕೃತಕ ಬುದ್ಧಿಮತ್ತೆ ತನ್ನದೇ ಆದ ಯೋಚನಾ ಲಹರಿ ಹೊಂದಿದ್ದು ನೈತಿಕತೆಯ ಬಲದಿಂದ ಅದನ್ನು ಹಿಡಿತದಲ್ಲಿ ಇಟ್ಟುಕೊಳ್ಳದಿದ್ದರೆ ಮುಂದೊಂದು ದಿನ ತಡೆಯಲು ಅಸಾಧ್ಯವಾಗಬಹುದು ಎಂದು ಸಾಫ್ಟ್ವೇರ್ ಆರ್ಕಿಟೆಕ್ಟ್, ಟೆಡ್‌ಎಕ್ಸ್ ಮಾತುಗಾರ ಹಾಗೂ ಸಂಶೋಧಕ ಆಶ್ರಿತ್ ಶೆಟ್ಟಿ ಅಭಿಪ್ರಾಯಪಟ್ಟರು.
ಉಜಿರೆಯ ಎಸ್‌ಡಿಎಂ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಟಿ ಸೆಲ್ ಮಂಗಳವಾರ ಜಂಟಿಯಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಅಂತರಕಾಲೇಜು ಐಟಿ ಫೆಸ್ಟ್ ‘ಏಕಶೂನ್ಯಂ' ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಚಾಲ್ತಿಯಲ್ಲಿರುವ ಡೀಪ್ ಫೇಕ್ ತಂತ್ರಜ್ಞಾನ ನೈತಿಕ ಮೌಲ್ಯಗಳ ಕೊರತೆಯಿಂದ ಹಲವು ರೀತಿಯಲ್ಲಿ ದುರುಪಯೋಗವಾಗುತ್ತಿದೆ. ಇದು ಸಮಾಜದ ಸ್ವಾಸ್ಥ್ಯ ಹಾಳುಗೆಡವಿ ಸಂಘರ್ಷಗಳಿಗೆ ದಾರಿಯಾಗಬಹುದು, ಮೌಲ್ಯಾಧಾರಿತ ಎಐ ಬಳಕೆಯೇ ಇದಕ್ಕೆ ಪರಿಹಾರ ಎಂದು ದೂರದರ್ಶಿಕೆಯ ನಿಲುವು ವ್ಯಕ್ತಪಡಿಸಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷೀಯ ನುಡಿಗಳನ್ನಾಡಿದರು. ಕಾಲೇಜಿನಲ್ಲಿ ಈ ರೀತಿಯ ಫೆಸ್ಟ್ಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿ ಇರುವ ವೈವಿಧ್ಯಮಯ ಪ್ರತಿಭೆಗಳು ಹೊರಗೆ ಬರುತ್ತವೆ ಮತ್ತು ಅವರ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ವೃದ್ಧಿಯಾಗುತ್ತದೆಎಂದು ನುಡಿದರು.
ಕಾರ್ಯಕ್ರಮದಲ್ಲಿ ಉಜಿರೆ ಎಸ್.ಡಿ.ಎಂ. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಶೈಲೇಶ್ ಉಪಸ್ಥಿತರಿದ್ದರು. ವಿಭಾಗದ ಪ್ರಾಧ್ಯಾಪಕಿ ದಿವ್ಯಾ ಯಾದವ್ ಸ್ವಾಗತಿಸಿದರು. ವಿದ್ಯಾರ್ಥಿನಿ ನಿಸರ್ಗ ಕೆ., ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಪ್ರಾಧ್ಯಾಪಕಿ ಅಕ್ಷತಾ ಕೆ., ವಂದಿಸಿದರು.
ಕಾರ್ಯಕ್ರಮದಲ್ಲಿ ವೆಬ್‌ಡಿಸೈನಿಂಗ್, ಐಟಿ ಮ್ಯಾನೇಜರ್, ಐಟಿ ಕ್ವಿಜ್-ನಂತಹ 8 ಕೌಶಲ್ಯ ವೃದ್ಧಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 13ಕ್ಕೂ ಅಧಿಕ ಕಾಲೇಜುಗಳ ತಂಡ ಫೆಸ್ಟ್ನಲ್ಲಿ ಭಾಗವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ