ಉಡುಪಿ: ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಭಾರತೀಯ ಜನ ಔಷಧಿ ಕೇಂದ್ರ ಮತ್ತು ರೋಟರಿ ಕ್ಲಬ್ ಬ್ರಹ್ಮಾವರ ಇದರ ಸಂಯುಕ್ತ ಆಶ್ರಯದಲ್ಲಿ ಮಳೆ ಬೆಳೆಗಾಗಿ 'ಪ್ರಾಣಿ ಪಕ್ಷಿ ಸಂಕುಲ ಮನುಕುಲದ ಉಳಿವಿಗಾಗಿ ಪರಿಸರ ಜಾಗೃತಿ ವಿಚಾರ ಸಂಕಿರಣ ಮೇ 25 ರಂದು ರೋಟರಿ ಭವನದಲ್ಲಿ ನಡೆಯಿತು.
ಕಾಯ೯ಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಮಾತನಾಡಿ, ನಾಗಬನಗಳನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿರುವುದು ಸರಿಯಲ್ಲ. ಪ್ರಕೃತಿಯ ಉತ್ತಮ ಕೊಡುಗೆಯಾದ ಬನಗಳನ್ನು ಉಳಿಸುದರಿಂದ ಬಹಳಷ್ಟು ಜೀವಿಗಳನ್ನು ನಾಶವಾಗದಂತೆ ನೋಡಬಹುದು ಎಂದರು.
ಮುನಿಯಾಲು ಆಯುವೇ೯ದ ಕಾಲೇಜಿನ ಪ್ರಾಧ್ಯಾಪಕ ಡಾ. ಚಂದ್ರಕಾಂತ್ ಭಟ್ ರವರು ವಿವಿಧ ಆಯುವೇ೯ದ ಸಸ್ಯಗಳ ಪರಿಚಯ ಮತ್ತು ಅದರ ಉಪಯೋಗ ಕುರಿತು ಮಾಹಿತಿ ನೀಡಿದರು.
ಪರಿಸರ ಹೋರಾಟಗಾರ ಪ್ರೇಮಾನಂದ ಕಲ್ಮಾಡಿ ಮಾತನಾಡಿ, ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಬಹುದು ಹೀಗಾಗಿ ಈ ಬಗ್ಗೆ ಗಿಡಗಳನ್ನು ಬೆಳೆಸುವ ಕಾಯ೯ ಮಾಡಬೇಕು ಎಂದರು.
ರೋಟರಿ ಅಧ್ಯಕ್ಷ ಉದಯ ಕುಮಾರ್ ಕಾಯ೯ಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಜಯಂಟ್ಸ್ ಯುನಿಟ್ ನಿದೇ೯ಶಕ ವಿವೇಕಾನಂದ ಕಾಮತ್, ಕಾಯ೯ದಶಿ೯ ಮಿಲ್ಟನ್ ಒಲಿವೇರ್ ಮುಂತಾದವರಿದ್ದರು.
ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಸ್ತಾವನೆಗೈದರು. ಜಯಂಟ್ಸ್ ಅಧ್ಯಕ್ಷರಾದ ಸುಂದರ ಪೂಜಾರಿ ಮೂಡುಕುಕ್ಕುಡೆ ಸ್ವಾಗತಿಸಿದರು. ರಾಘವೇಂದ್ರ ಕವಾ೯ಲು ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ