ಎಕ್ಸ್-ರೇ ತೆಗೆಯುವ ಹುಚ್ಚು ಮತ್ತು ಅದರ ಅಪಾಯ

Upayuktha
0


ಕ್ಸ್-ರೇ ಯನ್ನು ಕಂಡುಹಿಡಿದಾಗ ಅದರಿಂದ ಆಗುವ ದೀರ್ಘಕಾಲೀನ ದುಷ್ಪರಿಣಾಮಗಳ ಬಗೆಗೆ ಯಾರಿಗೂ ಗೊತ್ತಿರಲಿಲ್ಲ. 1950  ರ ಹೊತ್ತಿಗೆ, ಶೂ-ಚಪ್ಪಲ್ ಅಂಗಡಿಗಳಲ್ಲೂ ಕೂಡಾ, ಪಾದಗಳ ಎಕ್ಸ್-ರೇ ಚಿತ್ರಗಳನ್ನು ನೋಡಬಹುದಾಗಿತ್ತು.


ಆ ದಿನಗಳಲ್ಲಿ, ಗರ್ಭಿಣಿಯರ ಹೊಟ್ಟೆಯ ಎಕ್ಸ್-ರೇ ಸರ್ವೇಸಾಮಾನ್ಯವಾಗಿತ್ತು. ಕೊನೆಯದಾಗಿ,  1947ಮತ್ತು, 1964ರ ನಡುವೆ, 37 ಹೆರಿಗೆ ಆಸ್ಪತ್ರೆಗಳಲ್ಲಿ ಜನಿಸಿದ  7,00,000  ಮಕ್ಕಳನ್ನು (ಮಕ್ಕಳ ತಾಯಂದಿರು ಎಕ್ಸ್-ರೇ ಪರೀಕ್ಷೆಗೆ ಒಳಗಾಗಿದ್ದರು) ಎಕ್ಸ್-ರೇ ಪರೀಕ್ಷೆಗೆ  ಒಳಗಾಗದ ತಾಯಂದಿರ ಮಕ್ಕಳೊಂದಿಗೆ ಹೋಲಿಸಿ ಅಧ್ಯಯನ ನಡೆಸಿದರು.   ಎಕ್ಸ್-ರೇ ಪರೀಕ್ಸೆಗೆ ಒಳಗಾದ ತಾಯದಿಂರ ಮಕ್ಕಳಲ್ಲಿ  40%ದಷ್ಟು ಕ್ಯಾನ್ಸರಿನಿಂದ ಉಂಟಾದ ಮರಣದ ಪ್ರಮಾಣ ಹೆಚ್ಚು ಎಂಬುದಾಗಿ ಕಂಡುಬಂತು.


ಪ್ರಸ್ತುತ ವೈದ್ಯಕೀಯ ವಲಯದಲ್ಲಿ, ಕೊರೊನರಿ ಆ್ಯಂಜಿಯೋಗ್ರಾಫಿ ವಿಧಾನ ಮಾಡುವಾಗ, ಮಾಹಿತಿಯನ್ನು ಕಲೆಹಾಕಲು, ನಿರಂತರವಾಗಿ ಎಕ್ಸ್-ರೇ ಚಿತ್ರಗಳನ್ನು ತೆಗೆಯುತ್ತಾರೆ. ಕನಿಷ್ಠ  460 ರಿಂದ 1,580  mem  ನಷ್ಟು ತೀವ್ರ ಪ್ರಮಾಣದ ಎಕ್ಸ್-ರೇ ಬಳಸುತ್ತಾರೆ. ಸಾಮಾನ್ಯವಾದ ಇತರ, ರೂಢಿಯ ಎಕ್ಸ್-ರೇ ಚಿತ್ರಗಳಿಗೆ ಬಳಸಲಾಗುವ ಪ್ರಮಾಣ 2 mem ನಷ್ಟು. ಎಕ್ಸ್-ರೇ ವಿಕಿರಣವನ್ನು ಹೃದಯದ ರಕ್ತನಾಳಗಳ ಆ್ಯಂಜಿಯೋಗ್ರಾಫಿಗೆ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತದೆ, ನೋಡಿ. ಎಕ್ಸ್-ರೇ ವಿಕಿರಣವು ಶರೀರದಲ್ಲಿ ಸಂಗ್ರಹವಾಗುತ್ತದೆ. ಮತ್ತು ಜೀವಕೋಶಗಳ ವಂಶವಾಹಿ (ಜೀನ್) ಗಳಲ್ಲಿ ಹಠಾತ್ತಾದ ವಿಕೃತಿಗಳನ್ನು ಸೃಷ್ಠಿಸುತ್ತದೆ.


ಡಾ|| ಜೌನ್ ಗಾಫ್‌ಮನ್ ಎಂಬುವರು 45ವರ್ಷಗಳ ಕಾಲ ಎಕ್ಸ್-ರೇ ವಿಕಿರಣ ಆರೋಗ್ಯದ ಮೇಲೆ ಮಾಡುವ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಿದರು. ಯುರೇನಿಯಂ 233 ಎಂಬ ವಿಕಿರಣಪಟುತ್ವ ಹೊಂದಿರುವ ಧಾತುವನ್ನು ಅನ್ವೇಷಿಸಿದ ಹಾಗೂ ಪ್ಲುಟೋನಿಯಂ ಎಂಬ ಅಂಥದ್ದೇ ಮತ್ತೊಂದನ್ನು ಪ್ರತ್ಯೇಕಿಸಿದ ವಿಜ್ಞಾನಿ ಅವರು. ವೈಜ್ಞಾನಿಕವಾಗಿ ದಾಖಲಿತವಾದ 5 ಪುಸ್ತಕಗಳಲ್ಲಿ, ವೈದ್ಯಕೀಯ ತಂತ್ರಜ್ಞಾನಗಳಾದ ಎಕ್ಸ್-ರೇ, ಸಿ.ಟಿ.ಸ್ಕ್ಯಾನ್, ಮ್ಯಾಮೋಗ್ರಾಫಿ (ಸ್ತನವಿಕೃತಿಗಳ ಸಂದರ್ಭದಲ್ಲಿ ), ಪರೀಕ್ಷೆಗಳು75%  ದಷ್ಟು ಹೊಸ ಕ್ಯಾನ್ಸರ್‌ಗಳನ್ನು ಉಂಟುಮಾಡಿವೆ. ಈ ತಪಾಸಣೆಗಳೇ ಇನ್ನೊಂದು ಕ್ಯಾನ್ಸರ್‌ನ್ನು ಹುಟ್ಟಿಸುತ್ತದೆ ಎಂಬ ಅರಿವು ನಮ್ಮಲ್ಲಿ ಬಹಳ ಜನರಿಗೆ ಗೊತ್ತಿಲ್ಲ. ಆತ 2000ದಲ್ಲಿ ಒಂದು 700 ಪುಟಗಳ ವರದಿ ನೀಡಿದ. ಅದರಲ್ಲಿ-"ಒಂದು ಭೌಗೋಲಿಕ ಪ್ರದೇಶದಲ್ಲಿ ವೈದ್ಯರ ಸಂಖ್ಯೆ ಮತ್ತು ಅವರು ಬಳಸುವ ಎಕ್ಸ್-ರೇ ಪರೀಕ್ಷಾ ವಿಧಾನಗಳು ಕೂಡಾ ಜೊತೆಜೊತೆಗೆ ಹೆಚ್ಚಿದಂತೆ, ಕ್ಯಾನ್ಸರ್ ಮತ್ತು ಹೃದಯದ ಕಾಯಿಲೆಗಳು ಕೂಡ ಹೆಚ್ಚುತ್ತವೆ" ಎಂದಿದ್ದಾನೆ.

 

ಇದಕ್ಕೆ ಎಕ್ಸ್-ರೇ  ಮಾತ್ರ ಕಾರಣವಾಗಿಲ್ಲವೆಂದೂ ಆತ ಉಲ್ಲೇಖಿಸಿದ್ದಾನೆ ಜೊತೆಗೆ ಆಹಾರದಲ್ಲಿನ ಕೊರತೆ, ಧೂಮಪಾನ, ಗರ್ಭಪಾತ, ಜನಸಂಖ್ಯಾ ನಿಯಂತ್ರಣ ಮಾಡಲು ಬಳಸುವ ಗುಳಿಗೆಗಳು ಕೂಡಾ ಕಾರಣಗಳಾಗಿವೆ ಎನ್ನುತ್ತಾನೆ. ಇಂತಹ ವಿಕಿರಣಗಳು ಭವಿಷ್ಯದಲ್ಲಿ, ಮುಂದಿನ ದಶಕದಲ್ಲಿ 100 ಮಿಲಿಯದಷ್ಟು ಶೀಘ್ರ ಮತ್ತು ಅಸಹಜ ಮರಣಗಳಿಗೆ ಕಾರಣವಾಗಲಿವೆ ಎಂಬುದನ್ನೂ ಅಂದಾಜಿಸುತ್ತಾನೆ. 

     

“Preventing breast cancer”  ಎಂಬ ಪುಸ್ತಕದಲ್ಲಿ ಆತ ಸ್ಪಷ್ಟವಾಗಿ ಎಚ್ಚರಿಕೆ ಕೊಡುತ್ತಾನೆ. ಅಮೆರಿಕಾದ 44 ರಿಂದ 55 ವಯಸ್ಸಿನ ಮಹಿಳೆಯರಲ್ಲಿ ಸ್ತನಗಳ ಕ್ಯಾನ್ಸರ್ ಮರಣದ ಪ್ರಮುಖ ಕಾರಣವಾಗಿದೆ. ಏಕೆಂದರೆ, ಸ್ತನಗಳಲ್ಲಿನ ಕೋಶಗಳು ವಿಕಿರಣದ ಅಪಾಯಕ್ಕೆ ಒಳಗಾಗುವಷ್ಟರ ಮಟ್ಟಿಗೆ ಸೂಕ್ಷ್ಮವಾಗಿವೆ. ಮ್ಯಾಮೋಗ್ರಾಮ್ ಕ್ಯಾನ್ಸರ್ ಉಂಟುಮಾಡುತ್ತದೆ.  


ಈ ಅಪಾಯವು, ಅನುವಂಶೀಯತೆ, ಮೊದಲೇ ಇರುವ ಸ್ತನಗಳ ಸಾಮಾನ್ಯ ಗಡ್ಡೆ ಹಾಗೂ ಗುಳ್ಳೆಗಳು, ಋತುಚಕ್ರನಿಲ್ಲುವ ಸಮಯ(ಮೆನೋಪಾಸ್), ಬೊಜ್ಜು ಹಾಗೂ ಹಾರ್ಮೋನುಗಳ ಏರುಪೇರುಗಳಿಂದಲೂ ಪ್ರಭಾವಿತವಾಗಿವೆ. 2004 ರಲ್ಲಿ, "The journal of the national cancer institute”   ತನ್ನ ಪ್ರಕಟಿತ ಲೇಖನದಲ್ಲಿ ಈ ವಿಷಯ ಪ್ರಸ್ತಾಪಿಸಿದೆ. ಡಾ|| ಟೌಂಬ್ಲಿ ಎಂಬವರು-"Full body C.T. Scanning: preventing or producing cancer?”  (ಇಡೀ ಶರೀರದ ಸಿ.ಟಿ.ಸ್ಕ್ಯಾನ್- ಕ್ಯಾನ್ಸರ್ ತಡೆಗಟ್ಟುವುದೇ ಅಥವಾ ಉಂಟು ಮಾಡುವುದೇ?) ಎಂಬ ಶಿರ್ಷಿಕೆಯಡಿಯಲ್ಲಿ ಹೇಳಿದ- “Full body C.T.Scan ಕ್ಯಾನ್ಸರ್ ತಡೆಗಟ್ಟುವ ಬದಲು, ಕ್ಯಾನ್ಸರ್  ಉಂಟುಮಾಡುವ ಅಪಾಯ ಹೆಚ್ಚಿಸುತ್ತದೆ. ಒಂದು ಸ್ಕ್ಯಾನ್ ಮಾಡುವ ಸಂದರ್ಭದಲ್ಲಿ ಶರೀರಕ್ಕೆ ತಾಗುವ ವಿಕಿರಣದ ಪ್ರಮಾಣವು, ಎರಡನೆಯ ಮಹಾಯುದ್ಧದ ಅಣುಬಾಂಬ್ ಸ್ಪೋಟವಾದಾಗಿನ ಸಂದರ್ಭದ ಕೆಲವು ಮೈಲುಗಳ ವ್ಯಾಪ್ತಿಯ ಒಳಗಿನಷ್ಟು ಆಗಿರುತ್ತದೆ" ಎಂದಿದ್ದಾರೆ. "ಒಂದು ಪೂರ್ಣ ಶರೀರದ C.T.Scan  ಮಾಡಿದಾಗ ಜಠರ ಹಾಗೂ  ಶ್ವಾಸಕೋಶಗಳು ಹೀರಿಕೊಂಡ ವಿಕಿರಣದ ಪ್ರಮಾಣವು  1 4 ರಿಂದ   21 ಮಿಲಿಗ್ರೇನಷ್ಟು.  ಒಡ್ಡಿಕೊಳ್ಳುವ ವಿಕಿರಣದ ಒಟ್ಟು ಪ್ರಮಾಣವು ಎದೆಯ 100 ಎಕ್ಸ್-ರೇ ತೆಗೆದಾಗ ಅಥವಾ ಸ್ತನಗಳ 100 ಮ್ಯಾಮೋಗ್ರಾಮ್ ಮಾಡಿದಷ್ಟು!


ಸಿ.ಟಿ. ಸ್ಕ್ಯಾನ್ ಮಾಡುವ ಕೆಂದ್ರಗಳು ಮತ್ತು ಅವುಗಳನ್ನು ಸೂಚಿಸುವ ವೈದ್ಯರ ಸಂಖ್ಯೆಯೂ ಹೆಚ್ಚಾಗಿದೆ. ಮಧ್ಯವಯಸ್ಕರಲ್ಲಿ ಮತ್ತು ವೃದ್ಧರಲ್ಲಿ ಇದು ಅಧಿಕ ಮತ್ತು   ಜನಪ್ರಿಯವಾಗಿದೆ! ವಯಸ್ಸಾದವರಲ್ಲಿ ಗಡ್ಡೆಗಳು ಮತ್ತು ಇತರ ಕೆಲವು ಕಾಯಿಲೆಗಳನ್ನು ಪತ್ತೆಹಚ್ಚಲು ಇದೊಂದು ಮಾಯಾಯಂತ್ರ! ಪಾಪ! ಅವರಾರಿಗೂ ಅರಿವಿಲ್ಲ. ಸಿ.ಟಿ. ಸ್ಕ್ಯಾನ್ ಮಾಡಿಸಿದ್ದರಿಂದಲೇ ಅವರಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆಯಬಹುದು!


ಬೆನ್ನುನೋವಿಗೆ ಎಕ್ಸ್-ರೇ  ಮಾಡಿ, ನಂತರ ಸರ್ಜರಿಗೆ ತಯಾರು ಮಾಡಲಾಗುವುದು! ಡಾ|| ಜಾನ್.ಇ. ಸಾರ್ನೋ ಎಂಬ ನ್ಯೂಯಾರ್ಕಿನ ಆರ್ಥೋಪೆಡಿಕ್ ಸರ್ಜನ್ ಪ್ರಕಾರ- "ಬೆನ್ನುನೋವಿಗೂ, ಎಕ್ಸ್-ರೇನಲ್ಲಿ ಕಂಡುಬರುವ ವಿಕೃತಿಗೂ ಯಾವುದೇ ಸಂಬಂಧವಿರುವುದಿಲ್ಲ" ಅದಕ್ಕೆ ಸ್ಪಷ್ಟ ಪುರಾವೆಗಳನ್ನೂ ನೀಡುತ್ತಾನೆ. ಬೆನ್ನುನೋವಿಲ್ಲದ ಆರೋಗ್ಯವಂತ ವ್ಯಕ್ತಿಗಳ ಬೆನ್ನಿನ ಎಕ್ಸ್-ರೇನಲ್ಲಿ ಸಮಸ್ಯೆ ಇರುವ ಹಾಗೂ ಬೆನ್ನುನೋವು ಇದ್ದು ಎಕ್ಸ್-ರೇ ನಾರ್ಮಲ್ ಇರುವ ಹಲವಾರು ದಾಖಲೆಗಳನ್ನು ಆತ ಇಟ್ಟಿದ್ದಾನೆ. ಬೆನ್ನುನೋವಿರುವ ಮತ್ತು ಎಕ್ಸ್-ರೇನಲ್ಲಿ ಸಮಸ್ಯೆ ಇರುವ ವ್ಯಕ್ತಿಗಳಿಗೆ ಬೆನ್ನಿನ ಸರ್ಜರಿಯನ್ನು ಮಾಡಿದ ನಂತರ, ಬೆನ್ನುನೋವಿನಲ್ಲಿ ಯಾವುದೇ ಬದಲಾವಣೆ ಆಗದೆ, ಬದಲಿಗೆ ಬೆನ್ನುನೋವು ಹೆಚ್ಚಿದ ಅಥವಾ ಶಾಶ್ವತವೈಕಲ್ಯ ಉಂಟಾದ ಲೆಕ್ಕವಿಲ್ಲದಷ್ಟು  ಘಟನೆಗಳಿವೆ ಎಂದು ಆತ ಹೇಳಿದ್ದಾನೆ.

 

ಎಷ್ಟೋ ಸಲ ತಮ್ಮ ಭಯ ಅಥವಾ ಸಂದೇಹ ನಿವಾರಣೆಗೆ ವೈದ್ಯರು ಎಕ್ಸ್-ರೇ, ಸಿ.ಟಿ.ಸ್ಕ್ಯಾನ್ ಸೂಚಿಸುತ್ತಾರೆ. Evidence Based Medicine ಒಂದು ಟ್ರೆಂಡ್ ಆಗಿರುವುದರಿಂದಲೂ ಇದನ್ನು ಮಾಡಿಸುತ್ತಾರೆ. ಆದರೆ ಇವೆಲ್ಲದರ ನಡುವೆ ರೋಗಿಯ ಯೋಗಕ್ಷೇಮ ಬಲಿಪಶುವಾಗುತ್ತದೆ. ಅಮೆರಿಕಾದಲ್ಲಿ2001 ರಲ್ಲಿ 9 ಮಿಲಿಯ ಜನರನ್ನು ಅನಗತ್ಯವಾಗಿ ಆಸ್ಪತ್ರೆಗಳಿಗೆ  ಸೇರಿಸಲಾಗಿದೆಯೆಂದು ವರದಿಯೊಂದು ತಿಳಿಸುತ್ತದೆ. ಇಬ್ಬರು ವೈದ್ಯರ ಸಮಿತಿ ಅಲ್ಲಿನ 1,132  ವೈದ್ಯಕೀಯ ದಾಖಲೆಗಳನ್ನು ಪರಿಶಿಲಿಸಿದಾಗ,23% ದಷ್ಟು ಆಸ್ಪತ್ರೆ ಅಡ್ಮಿಷನ್‌ಗಳು ಅನಗತ್ಯ ಹಾಗೂ ಅಪ್ರಸ್ತುತವೆಂದೂ, ಅದರಲ್ಲಿ  ಜನರನ್ನು 17%  ಹೊರರೋಗಿಯಾಗಿಯೇ ಚಿಕಿತ್ಸೆ ನೀಡಲು ಸಾಧ್ಯವಿತ್ತೆಂದೂ ಆ ವರದಿ ತಿಳಿಸಿದೆ  ಅಮೆರಿಕಾವೊಂದರಲ್ಲೇ ಆಸ್ಪತ್ರೆಯಿಂದ ಉಂಟಾದ ಸೂಕ್ಷ್ಮಾಣು ಸೋಂಕುಗಳ ಸಂಖ್ಯೆ 1000  ದಿನದಲ್ಲಿ 1975 ರಲ್ಲಿ 7.2 ರಷ್ಟು ಮತ್ತು  1995 ರಲ್ಲಿ 9.8 ರಷ್ಟು. 20 ವರ್ಷಗಳಲ್ಲಿ  30%  ದಷ್ಟು ಏರಿಕೆ! ಅಮೆರಿಕಾದ  270  ಆಸ್ಪತ್ರೆಗಳಲ್ಲಿ, ಆಸ್ಪತ್ರೆಯಿಂದ ಉಂಟಾದ ಸೋಂಕಿನ ಸಂಖ್ಯೆ 20 ವರ್ಷಗಳಲ್ಲಿ ಸ್ಥಿರವಾಗಿದೆ! ಆಸ್ಪತ್ರೆ ಅಡ್ಮಿಷನ್‌ಗಳಲ್ಲಿ 100  ಕ್ಕೆ  5-6ರಷ್ಟು ಆಸ್ಪತ್ರೆಯಿಂದ ಹರಡಿದ ಸೋಂಕು ಕಂಡುಬಂದಿದೆ. ಅಲ್ಲಿ 1995 ರಲ್ಲಿ  ಇಂತಹ ಆಸ್ಪತ್ರೆ ಸೋಂಕುಗಳಿಂದ ಉಂಟಾದ ಸಾವುಗಳು 88,000, ಅಥವಾ ಪ್ರತೀ ಆರು ನಿಮಿಷಕ್ಕೆ ಒಂದು ಸಾವು!  2003  ರಲ್ಲಿ,   ಇಂತಹ ಸಾವು ಗರಿಷ್ಠಮಟ್ಟದಲ್ಲಿದ್ದುದಕ್ಕೆ ಕಾರಣ ಆ್ಯಂಟಿಬಯೋಟಿಕ್‌ಗಳಿಗೆ ಜಗ್ಗದ ಬ್ಯಾಕ್ಟೀರಿಯಾಗಳು. ಅಲ್ಲಿನ ಔಷಧ ನಿಯಂತ್ರಣ ಮಂಡಳಿಯ ವರದಿಯ ಪ್ರಕಾರ ವೈದ್ಯಕೀಯ ಕೇಂದ್ರ, ಆಸ್ಪತ್ರೆಗಳಿಂದ ಉಂಟಾದ ಸಾವುಗಳು ವರ್ಷಕ್ಕೆ 99,000  ಕ್ಕೆ ಏರಿದೆ. ಅವುಗಳಲ್ಲಿ ಬಹಳಷ್ಟನ್ನು ವೈದ್ಯರು ಕೈತೊಳೆಯುವುದನ್ನು ರೂಢಿಸಿಕೊಳ್ಳುವುದರ ಮೂಲಕ ತಪ್ಪಿಸಬಹುದಿತ್ತೆಂದೂ ಹೇಳಿದೆ.

  

 - ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ.B.A.M.S. M.S.(Ayu)

ಆಡಳಿತ ನಿರ್ದೇಶಕರು ಹಾಗೂ ಆಯುರ್ವೇದ ತಜ್ಞ ವೈದ್ಯರು.

ಪ್ರಸಾದಿನೀ ಆಯುರ್ನಿಕೇತನ, ಆಯುರ್ವೇದ ಆಸ್ಪತ್ರೆ ಪುತ್ತೂರು

ಮೊಬೈಲ್: 9740545979

  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top