ಮಂಗಳೂರು ವಿ.ವಿ. ಮಟ್ಟದ ಪವರ್‌ಲಿಪ್ಟಿಂಗ್- ಆಳ್ವಾಸ್ ಕಾಲೇಜಿಗೆ ಸತತ 20ನೇ ಬಾರಿ ಸಮಗ್ರ ಪ್ರಶಸ್ತಿ

Upayuktha
0


ತೆಂಕನಿಡಿಯೂರು:  ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ಲಯನ್ಸ್ ಅಮೃತ್ ಉಡುಪಿ ಜಂಟಿಯಾಗಿ ಆಯೋಜಿಸಿದ ಮಂಗಳೂರು ವಿ.ವಿ. ಮಟ್ಟದ ಅಂತರ್‌ಕಾಲೇಜು ಪುರಷರ ಮತ್ತು ಮಹಿಳೆಯರ ಪವರ್‌ಲಿಪ್ಟಿಂಗ್  ಪಂದ್ಯಾಟದಲ್ಲಿ ಸತತ 20ನೇ ಬಾರಿ ಆಳ್ವಾಸ್ ಕಾಲೇಜು, ಮೂಡಬಿದರೆ ಸಮಗ್ರ ಚಾಂಪಿಯನ್ ಪಟ್ಟ ಆಲಂಕರಿಸಿದೆ. 


ಪುರುಷರ ವಿಭಾಗ ತಂಡ ಸ್ಪರ್ಧೆಯಲ್ಲಿ ಆಳ್ವಾಸ್ ಪ್ರಥಮ, ಕಲ್ಯಾಣಪುರ ಮಿಲಾಗ್ರಿಸ್ ದ್ವಿತೀಯ, ಹಾಗೂ ಅತಿಥೇಯ ತೆಂಕನಿಡಿಯೂರು ಕಾಲೇಜು ತೃತೀಯ ಸ್ಥಾನಗಳಿಸಿದರೆ, ತೆಂಕನಿಡಿಯೂರು  ಶರತ್ ಕೆ. ಕುಮಾರ್ ಬಲಾಡ್ಯ ಪುರುಷ ಪ್ರಶಸ್ತಿ ಪಡೆದರು. ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ಪ್ರಥಮ, ಎಸ್.ಡಿ.ಎಂ ಉಜಿರೆ ದ್ವಿತೀಯ ಹಾಗೂ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜು ತೃತೀಯ ಸ್ಥಾನ ಪಡೆದರೆ, ಸೈಂಟ್ ಅಲೋಶಿಯಸ್ ಕಾಲೇಜು ತೃತೀಯ ಸ್ಥಾನ ಪಡೆದರೆ, ಅಜ್ಜರಕಾಡು ಉಡುಪಿಯ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಕಾಲೇಜಿನ ಐಶ್ವರ್ಯ ಬಲಾಡ್ಯ ಮಹಿಳೆ ಪ್ರಶಸ್ತಿ ಪಡೆದರು. 


ಮಂಗಳೂರು ವಿವಿ ವ್ಯಾಪ್ತಿಯ 23 ಕಾಲೇಜುಗಳಿಂದ ಸ್ಪರ್ಧಾಳುಗಳು ಭಾಗವಹಿಸಿದ ಪಂದ್ಯಾಕೂಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಾಂಶುಪಾಲರಾದ ಪ್ರೊ. ಸುರೇಶ್ ರೈ ಕೆ, ಪಂದ್ಯಾಕೂಟದ ಅಬ್ಸರ್ವರ್ ಹಾಗೂ ಅಂತರಾಷ್ಟ್ರೀಯ ತೀರ್ಪುಗಾರರಾದ ಡಾ. ಹರಿದಾಸ್ ಕೂಳೂರು, ಉಡುಪಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರಾಮಚಂದ್ರ ಪಾಟ್ಕರ್, ಶ್ರೀಮತಿ ಪ್ರಭಾ, ಆಳ್ವಾಸ್ ತರಬೇತುದಾರರಾದ ಪ್ರಮೋದ್ ಉಪಸ್ಥಿತರಿದ್ದು ಪ್ರಶಸ್ತಿ ಪ್ರಧಾನ ಮಾಡಿದರು. 


ಪಂದ್ಯಾಕೂಟದ ಆಯೋಜಕರಾದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರೂ ಹಾಗೂ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಉಡುಪಿ ಇದರ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಿರ್ವಹಿಸಿದರು. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top