ತೆಕ್ಕಾರು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಳದ ಶಿಲಾನ್ಯಾಸ

Upayuktha
0

ದೇವಸ್ಥಾನ ನಿರ್ಮಾಣದ ಮೂಲಕ ಊರಿನ ಪ್ರಗತಿ: ಬ್ರಹ್ಮಾನಂದ ಶ್ರೀ




ತೆಕ್ಕಾರು: ಭಗವಂತ ನಮ್ಮ ಅಂತರಾಳದಲ್ಲಿದ್ದಾರೆ ಎಂದು ವೇದ, ಉಪನಿಷತ್ತುಗಳು, ಗ್ರಂಥಗಳು ಹೇಳುತ್ತವೆ. ಇದನ್ನು ತಿಳಿಯುವುದು ಕಷ್ಟ ಇದನ್ನು ಇಂದು ತಿಳಿಯಪಡಿಸುವ ಕಾರ್ಯವನ್ನು ಶ್ರದ್ಧಾಕೇಂದ್ರಗಳು ಮಾಡುತ್ತಿವೆ. ಇದಕ್ಕಾಗಿ ಶ್ರದ್ಧಾಕೇಂದ್ರಗಳ ಅಭಿವೃದ್ಧಿಯನ್ನು ನಾವು ಮಾಡಬೇಕು ಎಂದು ನಮ್ಮ ಹಿರಿಯರು ನಮಗೆ ಹೇಳಿ ಕೊಟ್ಟಿದ್ದಾರೆ. ಭಗವಂತ ನಮ್ಮ ಹೃದಯದಲ್ಲಿ ಚೈತನ್ಯ ಸ್ವರೂಪಿಯಾಗಿ ಆತ್ಮ ಸ್ವರೂಪಿಯಾಗಿ ಇದ್ದಾನೆ. ಇದನ್ನು ತಿಳಿಯಲು ಜ್ಞಾನಯೋಗ, ತಪಸ್ಸು, ಅನುಷ್ಠಾನಗಳನ್ನು ಮಾಡಬೇಕು, ಅದು ತುಂಬಾ ಕಷ್ಟ, ಅದಕ್ಕಾಗಿ ಭಗವಂತನ ಹತ್ತಿರಕ್ಕೆ ಹೋಗುವ ಪ್ರಯತ್ನಗಳನ್ನು ಮಾಡಬೇಕು, ಇದಕ್ಕಾಗಿ ಇಂತಹ ದೇವಾಲಯಗಳ ನಿರ್ಮಾಣ ಅಗತ್ಯ, ಇದಕ್ಕೆ ಊರವರೆಲ್ಲ ಸಂಪೂರ್ಣ ಸಹಕಾರ ನೀಡಬೇಕು, ಸುಂದರ ದೇವಸ್ಥಾನ ನಿರ್ಮಾಣದ ಮೂಲಕ ಊರಿನ ಪ್ರಗತಿಗೂ ಭಕ್ತರ ಸಹಕಾರ ಅಗತ್ಯವಾಗಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀಗಳು  ಹೇಳಿದರು.


ಅವರು ತೆಕ್ಕಾರು ದೇವರಗುಡ್ಡೆ ಶ್ರೀ ಗೋಪಾಲಕೃಷ್ಣ ದೇವಳದ ಶಿಲಾನ್ಯಾಸ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.


ಮಂಗಳೂರು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಹಾಗೂ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಗಣೇಶ್ ರಾವ್ ಶಿಲಾನ್ಯಾಸ ನೆರವೇರಿಸಿದರು.


ಈ ಸಂದರ್ಭದಲ್ಲಿ ಟ್ರಸ್ಟ್ ಸಂಚಾಲಕ ಉದ್ಯಮಿ ಲಕ್ಷ್ಮಣ ಭಟ್ರಬೈಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕರಾಮ್ ನಾಯಕ್ ನಾಗರಕೋಡಿ, ಬೆಳ್ತಂಗಡಿ ರಾವ್ ಅಸೋಸಿಯೇಟ್‌ನ ಧನಂಜಯ ರಾವ್ ಉಪಸ್ಥಿತರಿದ್ದರು.


ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿ. ವಿಶ್ವ ಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ನೆರಿಯ ಸ್ವಾಗತಿಸಿ, ಬಾರ್ಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಪ್ರವೀಣ್ ರೈ ವಂದಿಸಿದರು.


ರೂ.2 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣ:

ಅಂದಾಜು ರೂ.2 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಾಣವಾಗಲಿದೆ. ಈ ಗ್ರಾಮದಲ್ಲಿ ಹುಟ್ಟಿದ ಋಣ ಮತ್ತು ತಂದೆ ತಾಯಿಯ ಆಶೀರ್ವಾದದಿಂದ ಈ ದೇವಸ್ಥಾನದ ಅಭಿವೃದ್ಧಿ ಗೆ ಸಹಕಾರ ನೀಡುವುದಾಗಿ ತಿಳಿಸಿದರು. ಎಲ್ಲರೂ ತನು ಮನ ಧನದಿಂದ ಸಹಕರಿಸಿದರೆ. ಒಂದು ವರ್ಷದ ಒಳಗೆ ಈ ದೇವಸ್ಥಾನ ನಿರ್ಮಾಣವಾಗಲಿದೆ. ಈ ಎಲ್ಲ ಜೀರ್ಣೋದ್ದಾರ ಕಾರ್ಯಗಳು ಯಶಸ್ವಿಯಾಗಿ ನಡೆಯಲಿ.

-ಗಣೇಶ್ ರಾವ್

ಗೌರವಾಧ್ಯಕ್ಷ ಜೀರ್ಣೋದ್ಧಾರ ಸಮಿತಿ



ಅಭಿಯಾನ ಇವತ್ತಿನಿಂದ ಪ್ರಾರಂಭವಾಗಲಿ

ನಾಲ್ಕು ಗ್ರಾಮದ ಮಹಿಳೆಯರನ್ನು ಒಟ್ಟು ಸೇರಿಸಿ ಮಹಿಳಾ ಸಮಿತಿ ರಚನೆ ಮಾಡಿ ಹಣ ಸಂಗ್ರಹ ಅಭಿಯಾನ ಪ್ರಾರಂಭಿಸಿ. ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ಮನೆ ಮನೆ ಹೋಗಿ ಒಂದು ಮನೆಯಿಂದ ಕನಿಷ್ಠ 2ಕೆಜಿ ಅಡಿಕೆ ಸಂಗ್ರಹಿಸಿ ಅಡಿಕೆ ಅಭಿಯಾನ ಪ್ರಾರಂಭಿಸಿ ಅಂದಾಜು ರೂ.15 ಲಕ್ಷ ಸಂಗ್ರಹವಾಗಬಹುದು.

ಭಜನೆ ಮಂಡಳಿ ಮಾಡಿಕೊಡು ಮನೆ ಮನೆಗೆ ಗೋಪಾಲಕೃಷ್ಣ ದೇವರ ಫೋಟೋ ಹಿಡಿದುಕೊಂಡು ಭಜನೆ ಮೂಲಕ ಅಭಿಯಾನ ಪ್ರಾರಂಭಿಸಿ ಹಣ ಸಂಗ್ರಹ ಮಾಡಬಹುದು. ಕೊಲ್ಲಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಇದೇ ರೀತಿ ಮಾಡಿದ್ದೇವೆ. ಬಾರ್ಯ, ಪುತ್ತಿಲ, ಉಳಿಯ, ತೆಕ್ಕಾರು ಗ್ರಾಮದಲ್ಲಿ 180 ಮನೆ ಇದೆ. 20 ಮನೆ ವ್ಯಾಪ್ತಿಗೆ ಬೈಲುವಾರು ಸಮಿತಿ ರಚನೆ ಮಾಡಬೇಕಾಗಿದೆ.

- ಧನಂಜಯ್ ರಾವ್

ನ್ಯಾಯವಾದಿ ಬೆಳ್ತಂಗಡಿ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top